ಕರ್ನಾಟಕ

karnataka

ETV Bharat / state

ಶಹಾಪುರ ನಗರಸಭೆ ಈ ಬಾರಿಯೂ ಕಾಂಗ್ರೆಸ್​​ ತೆಕ್ಕೆಗೆ: ಶಾಸಕ ಶರಣಬಸಪ್ಪ ದರ್ಶನಾಪುರ - Kannada news

ಶಹಾಪುರ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿ ಜನರು ಅಧಿಕಾರದ ಗದ್ದುಗೆ ನೀಡಲಿದ್ದಾರೆ. ಹೋದ ಬಾರಿಯು ಕಾಂಗ್ರೆಸ್ ಪಕ್ಷಕ್ಕೆ ಜನರು ಅಧಿಕಾರ ನೀಡಿದ್ದರು. ಈ ಬಾರಿಯು ಜನ ಮತ್ತೊಮ್ಮೆ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡುವ ಮುಖಾಂತರ ನಗರಸಭೆ ಕಾಂಗ್ರೆಸ್ ಪಕ್ಷದ‌ ತೆಕ್ಕೆಗೆ ಬೀಳಲಿದೆ ಎಂದು ವಿಶ್ವಾಸ.

ಶಾಸಕ ಶರಣಬಸಪ್ಪ ದರ್ಶನಾಪುರ

By

Published : May 16, 2019, 8:44 PM IST

ಯಾದಗಿರಿ: ಈ ಬಾರಿ ಜನರು ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಲಿದ್ದು, ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಕಾಂಗ್ರೆಸ್​​​ ಹಿರಿಯ ಮುಖಂಡ ಹಾಗೂ ಹಾಲಿ ಶಾಸಕ ಶರಣಬಸಪ್ಪ ದರ್ಶನಾಪುರ ಭವಿಷ್ಯ ನುಡಿದಿದ್ದಾರೆ.

ಯಾದಗಿರಿ ಜಿಲ್ಲೆಯ ಶಹಾಪುರ ವಿಧಾನಸಭಾ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಶಾಸಕ ಶರಣಬಸಪ್ಪ ದರ್ಶನಾಪುರ, ಈ ಬಾರಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಬಿಜೆಪಿ ಪಕ್ಷದ ವಿರುದ್ಧ ಜಯಭೇರಿ ಬಾರಿಸಲಿದೆ. ಅಲ್ಲದೆ ಪ್ರಸ್ತುತ ಶಹಾಪುರ ಮತಕ್ಷೇತ್ರದಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಲಾಗಿದೆ. ಸಿಸಿ ರಸ್ತೆ, ಶುದ್ಧ ಕುಡಿಯುವ ನಿರಿನ ಘಟಕ ಹೀಗೆ ಹಲವು ರೀತಿಯ ಮೂಲಭೂತ ಸೌಕರ್ಯಗಳನ್ನು ಕಾಂಗ್ರಸ್ ಪಕ್ಷ ಜನರಿಗೆ ನೀಡಿದೆ ಎಂದರು.

ಶಹಾಪುರ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿ ಜನರು ಅಧಿಕಾರದ ಗದ್ದುಗೆ ನೀಡಲಿದ್ದಾರೆ. ಹೋದ ಬಾರಿಯು ಕಾಂಗ್ರೆಸ್ ಪಕ್ಷಕ್ಕೆ ಜನರು ಅಧಿಕಾರ ನೀಡಿದ್ದರು. ಈ ಬಾರಿಯು ಜನ ಮತ್ತೊಮ್ಮೆ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡುವ ಮುಖಾಂತರ ನಗರಸಭೆ ಕಾಂಗ್ರೆಸ್ ಪಕ್ಷದ‌ ತೆಕ್ಕೆಗೆ ಬೀಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಪಕ್ಷವು ಈ ಬಾರಿ ನಗರಸಭೆ ಚುನಾವಣೆಯಲ್ಲಿ ಠೇವಣಿ ಕಳೆದುಕೊಳ್ಳಲಿದೆ ಎಂದು ವ್ಯಂಗವಾಗಿ ಮಾತನಾಡಿದ ಅವರು, ಪರೋಕ್ಷವಾಗಿ ಮಾಜಿ‌ ಶಾಸಕ‌ ಗುರು ಪಾಟೀಲ್‌ ಶೀರವಾಲಗೆ ತೀರುಗೇಟು ನೀಡಿದರು. ‌ಈ ಬಾರಿ ಚುನಾವಣೆಯಲ್ಲಿ 31 ವಾರ್ಡ್​ಗಳ ಪೈಕಿ ಸುಮಾರು 25ಕ್ಕೂ ಹೆಚ್ಚು ವಾರ್ಡ್​ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ವಿಜಯೋತ್ಸವ ಆಚರಿಸಲಿದ್ದಾರೆ. ಬಿಜೆಪಿ‌ ಪಕ್ಷವು ಕೇವಲ 5 ಸೀಟಗಳನ್ನು ಪಡೆಯಲಿದೆ. ಜೆಡಿಎಸ್ ಠೇವಣಿ ಕಳೆದುಕೊಳ್ಳಲಿದೆ ಎಂದು ಭವಿಷ್ಯ ನುಡಿದರು.

ABOUT THE AUTHOR

...view details