ಯಾದಗಿರಿ:ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದ್ದು, ಹಲ್ಲೆಗೊಳಗಾದ ಗುಂಪಿನ ಜನರು ಆತಂಕಗೊಂಡು ತಮ್ಮ ಗ್ರಾಮ ತೊರೆದಿರುವ ಘಟನೆ ಶಹಾಪುರ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗುಂಪುಗಳ ನಡುವೆ ಗಲಾಟೆ: ಹೆದರಿ ಗ್ರಾಮ ತೊರೆದ ಹಲ್ಲೆಗೊಳಗಾದ ಜನ - ಗ್ರಾಮ ತೊರೆದ ಹಲ್ಲೆಗೊಳಗಾದ ಜನರು
ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದಿದೆ. ಹಲ್ಲೆಗೊಳಗಾದ ಗುಂಪಿನ ಜನರು ಆತಂಕಗೊಂಡು ತಮ್ಮ ಗ್ರಾಮ ತೊರೆದಿರುವ ಘಟನೆ ಶಹಾಪುರ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಇದೆ ನ.10 ರಂದು ಬೊಮ್ಮನಹಳ್ಳಿ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪಿನ ನಡುವೆ ಗಲಾಟೆ ನಡೆದಿತ್ತು. ಘಟನೆಯಲ್ಲಿ 8 ಜನ ಗಾಯಗೊಂಡಿದ್ದು, ಗಾಯಾಳುಗಳನ್ನ ಕಲಬುರಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಘಟನೆ ಕುರಿತು ಶಹಾಪುರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ. ಹಲ್ಲೆ ಮಾಡಿದ ಗುಂಪಿನ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಹಲ್ಲೆ ನಡೆಸಿದ ಗುಂಪಿನ ಕಡೆಯವರು ಮತ್ತೆ ನಮ್ಮ ಮೇಲೆ ಹಲ್ಲೆ ಮಾಡಬಹುದು ಎನ್ನುವ ಆತಂಕ, ಭಯದಿಂದ ಹಲ್ಲೆಗೊಳಗಾದವರು ಮನೆಗೆ ಬೀಗ ಹಾಕಿ ಕುಟುಂಬ ಸಮೇತ ಬೇರೆಡೆ ತೆರಳಿದ್ದಾರೆ. ಗ್ರಾಮದಲ್ಲಿ ಪೊಲೀಸ್ ಭದ್ರತೆ ಕಲ್ಪಿಸಿದರೂ ಕೂಡ ಗ್ರಾಮ ತೊರೆದವರು ಮಾತ್ರ ಗ್ರಾಮಕ್ಕೆ ವಾಪಸ್ಸು ಬರುವ ಮನಸ್ಸು ಮಾಡುತ್ತಿಲ್ಲ.