ಯಾದಗಿರಿ:ಕೂಲಿ ಕೆಲಸಕ್ಕಾಗಿ ಮಕ್ಕಳನ್ನು ಕೆರೆದುಕೊಂಡು ಹೋಗುತ್ತಿರುವ ಟಂಟಂ ವಾಹನಗಳ ಮೇಲೆ ಬಾಲ ಕಾರ್ಮಿಕ ಇಲಾಖೆ ಅಧಿಕಾರಿಗಳು ದಾಳಿ ನಡೆಸುವ ಮೂಲಕ ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಓದುತ್ತಿರುವ 35 ಶಾಲಾ ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ.
ಯಾದಗಿರಿಯಲ್ಲಿ ಟಂಟಂ ವಾಹನಗಳ ಮೇಲೆ ದಾಳಿ.. 35 ಬಾಲಕಾರ್ಮಿಕರ ರಕ್ಷಣೆ..
ಹತ್ತಿ ಬಿಡಿಸುವ ಕೂಲಿ ಕೆಲಸಕ್ಕೆ ಮಕ್ಕಳನ್ನು ಕರೆದೊಯ್ಯುವ ಟಂಟಂಗಳ ಮೇಲೆ ದಾಳಿ ನಡೆಸಿದ ಬಾಲಕಾರ್ಮಿಕ ಇಲಾಖೆಯ ಯೋಜನಾ ಅಧಿಕಾರಿಗಳು 35 ಶಾಲಾ ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ.
ಯಾದಗಿರಿಯಲ್ಲಿ ಟಂಟಂ ವಾಹನಗಳ ಮೇಲೆ ದಾಳಿ ಮಾಡಿ 35 ಬಾಲಕಾರ್ಮಿಕರನ್ನು ರಕ್ಷಣೆ ಮಾಡಲಾಯಿತು.
ಸುರಪುರ ತಾಲೂಕಿನ ಕೆಂಭಾವಿ ಪಟ್ಟಣ ವ್ಯಾಪ್ತಿಯ ಹಲವೆಡೆ ಬಾಲಕಾರ್ಮಿಕ ಇಲಾಖೆ ಯೋಜನಾ ಅಧಿಕಾರಿ ರಘುವೀರಸಿಂಗ್ ಠಾಕೂರ್ ಹಾಗೂ ಪಿಎಸ್ಐ ಸುದರ್ಶನ ರೆಡ್ಡಿ ಅವರ ನೇತೃತ್ವದಲ್ಲಿ ದಾಳಿ ನಡೆದಿತ್ತು.
ಹಣದ ಆಸೆಗಾಗಿ ಪೋಷಕರು ತಮ್ಮ ಮಕ್ಕಳನ್ನು ಶಾಲೆ ಬಿಡಿಸಿ ಹತ್ತಿ ಬಿಡಿಸುವ ಕೂಲಿ ಕೆಲಸಕ್ಕಾಗಿ ಟಂಟಂ ವಾಹನಗಳಲ್ಲಿ ಕಳಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ಇಂದು ದಾಳಿ ನಡೆಸಿ ಎಂಟು ಟಂಟಂ ವಾಹನಗಳನ್ನ ಜಪ್ತಿ ಮಾಡಿಕೊಂಡಿದ್ದಾರೆ. ಓದುವ ಮಕ್ಕಳನ್ನು ಕೂಲಿಗಾಗಿ ಶಾಲೆ ಬಿಡಿಸುವುದು ಅಪರಾಧ ಎಂದು ಅಧಿಕಾರಿಗಳು ಮಕ್ಕಳ ಪೋಷಕರಿಗೆ ತಿಳಿ ಹೇಳಿದ್ದಾರೆ.
Last Updated : Nov 19, 2019, 6:51 PM IST