ಯಾದಗಿರಿ: ಉದ್ಯೋಗ ಅರಸಿ ರಾಜ್ಯದ ಪ್ರಮುಖ ನಗರಗಳಿಗೆ ತೆರಳಿದ್ದ ಕೂಲಿ ಕಾರ್ಮಿಕರು ಲಾಕ್ಡೌನ್ನಿಂದಾಗಿ ಅಲ್ಲಿಯೇ ಸಿಲುಕಿದ್ದರು. ಸರ್ಕಾರದ ಆದೇಶದ ಹಿನ್ನಲೆ ಸರ್ಕಾರಿ ಬಸ್ಗಳ ಮೂಲಕ ಸಾವಿರಾರು ಕಾರ್ಮಿಕರು ಜಿಲ್ಲೆಯತ್ತ ಧಾವಿಸುತ್ತಿದ್ದಾರೆ.
ಗಿರಿನಾಡು ಜಿಲ್ಲೆಗೆ ವಲಸೆ ಕಾರ್ಮಿಕರ ಆಗಮನ: ಪರೀಕ್ಷೆ ನಂತರ ಸ್ವಸ್ಥಾನಕ್ಕೆ ತೆರಳಲು ಅವಕಾಶ - ಕೊರೊನಾ ವೈರಸ್
ರಾಜ್ಯದ ಬೆಂಗಳೂರು ಸೇರಿದಂತೆ ಇತರೆ ಪ್ರಮುಖ ನಗರಗಳಿಗೆ ತೆರಳಿದ್ದ ಕೂಲಿ ಕಾರ್ಮಿಕರು ಲಾಕ್ಡೌನ್ನಿಂದಾಗಿ ಅಲ್ಲಿಯೇ ಸಿಲುಕಿದ್ದರು. ಸದ್ಯ ಲಾಕ್ಡೌನ್ ಸಡಿಲಿಕೆ ಕಾರಣ ಸರ್ಕಾರಿ ಬಸ್ಗಳ ಮೂಲಕ ಸಾವಿರಾರು ಕಾರ್ಮಿಕರು ಜಿಲ್ಲೆಯತ್ತ ಮುಖ ಮಾಡಿದ್ದಾರೆ.
ಜಿಲ್ಲೆಗೆ ಆಗಮಿಸಿರುವ ಕೂಲಿ ಕಾರ್ಮಿಕರನ್ನು ನಗರದ ಆಯುಷ್ಯ ಆರೋಗ್ಯ ಕೇಂದ್ರದಲ್ಲಿ ಜ್ವರ ತಪಾಸಣೆ ನಡೆಸಿದ ನಂತರ ಅವರ ಗ್ರಾಮಕ್ಕೆ ತೆರಳಲು ಅನುವು ಮಾಡಿಕೊಡಲಾಗುತ್ತಿದೆ. ಕೋವಿಡ್ ಸೋಂಕು ಶಂಕೆ ಕಂಡು ಬಂದರೆ ಅಂತವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ನಿಗಾದಲ್ಲಿಡಲು ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ. ಸ್ವಗ್ರಾಮಕ್ಕೆ ತೆರಳಿದವರನ್ನು ಹೋಮ್ ಕ್ವಾರಂಟೈನ್ನಲ್ಲಿ ಇಡಲಾಗುತ್ತದೆ ಎಂದು ಸಂಪರ್ಕಾಧಿಕಾರಿ ರಘುವೀರ್ಸಿಂಗ್ ಠಾಕೂರ್ ತಿಳಿಸಿದರು.
ಅಂತಾರಾಜ್ಯದಲ್ಲಿರುವ ಕಾರ್ಮಿಕರು ಕೂಡಾ ತಮ್ಮ ಗ್ರಾಮಕ್ಕೆ ತೆರಳಲು ಕೇಂದ್ರ ಸರ್ಕಾರ ಅನುಮತಿಸಿದ್ದು ಹೋರ ರಾಜ್ಯಗಳಿಗೆ ವಲಸೆ ಹೋಗಿದ್ದ ಕೂಲಿ ಕಾರ್ಮಿಕರು ಕೂಡ ನಾಳೆಯಿಂದ ಜಿಲ್ಲೆಗೆ ವಾಪಸ್ಸಾಗುವ ಸಾಧ್ಯತೆಗಳಿವೆ. ಹಸಿರು ವಲಯವಾಗಿರುವ ಯಾದಗಿರಿ ಜಿಲ್ಲೆಗೆ ಮಹಾಮಾರಿ ಕೊರೊನಾ ಪ್ರವೇಶಿಸದಂತೆ ಜಿಲ್ಲಾಡಳಿತ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡಿದೆ.