ಕರ್ನಾಟಕ

karnataka

ETV Bharat / state

ಯಾದಗಿರಿಯ ಬಡ ಕುಟುಂಬಕ್ಕೆ ಸೋನು ಸೂದ್​​ ಸಹಾಯ... ಮತ್ತೆ ಮಾನವೀಯತೆ ಮೆರೆದ ನಟ - ಯಾದಗಿರಿ ಬಡ ಕುಟುಂಬಕ್ಕೆ ಸೋನು ಸೂದ್ ಸಹಾಯ

ಬಾಲಿವುಡ್ ನಟ ಸೋನು ಸೂದ್ ತಮ್ಮ ಸಮಾಜ ಸೇವೆಯನ್ನು ಮುಂದುವರೆಸಿದ್ದು, ಯಾದಗಿರಿ ಜಿಲ್ಲೆಯ ಬಡ ಕುಟುಂಬಕ್ಕೆ ಸಹಾಯ ಹಸ್ತ ಚಾಚಿದ್ದಾರೆ.

sonu sood help yadagiri family
ಯಾದಗಿರಿ ಬಡ ಕುಟುಂಬಕ್ಕೆ ಸೋನು ಸೂದ್ ಸಹಾಯ

By

Published : Aug 26, 2020, 8:39 AM IST

ಯಾದಗಿರಿ: ಲಾಕ್​ಡೌನ್​ ಘೋಷಣೆ ಆದಾಗಿನಿಂದ ನಟ ಸೋನು ಸೂದ್ ಹೆಸರು ಕೇಳಿದ್ರೆ ಇಡೀ ಬಾಲಿವುಡ್ ತಲೆ ಬಾಗುತ್ತೆ. ಯಾಕಂದ್ರೆ ಈ ನಟ ಕೇವಲ ಬೆಳ್ಳಿ ಪರದೆ ಮೇಲೆ ಮಾತ್ರವಲ್ಲದೆ ನಿಜ ಜೀವನದಲ್ಲೂ ಮಿಂಚುತ್ತಿದ್ದಾರೆ. ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡು ಭಾರತ ಸೇರಿದಂತೆ ವಿಶ್ವದಲ್ಲಿ ನೆಲಸಿರುವ ಅನಿವಾಸಿ ಭಾರತೀಯರಿಗೂ ಕೂಡ ಆಪದ್ಬಾಂಧವ ಆಗಿದ್ದಾರೆ. ಇದೀಗ ಈ ನಟ ಯಾದಗಿರಿ ಜಿಲ್ಲೆಯ ಬಡ ಕುಟುಂಬವೊಂದಕ್ಕೆ ಆಸರೆಯಾಗುವುದರ ಮೂಲಕ ತಮ್ಮ ಹೃದಯವಂತಿಕೆಯನ್ನು ಮತ್ತಷ್ಟು ವಿಸ್ತರಿಸಿದ್ದಾರೆ.

ಕಳೆದ ಮೂರು ದಿನಗಳ ಹಿಂದೆ ನಗರದ ಸರ್ಕಾರಿ ಸಾರ್ವಜನಿಕ ಜಿಲ್ಲಾಸ್ಪತ್ರೆಯಲ್ಲಿ ತ್ರಿವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ ಗರ್ಭಿಣಿ ಮಹಿಳೆ ಕುಟುಂಬ ಸಂಕಷ್ಟದಲ್ಲಿದೆ. ವಿಷಯ ತಿಳಿದ ಬಾಲಿವುಡ್ ನಟ ಸೋನು ಸೂದ್ ನೆರವು ನೀಡುವ ಭರವಸೆ ನೀಡಿದ್ದಾರೆ.

ಯಾದಗಿರಿ ಬಡ ಕುಟುಂಬಕ್ಕೆ ಸೋನು ಸೂದ್ ಸಹಾಯ

ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿರುತ್ತಿರುವ ರಾಮಸಮುದ್ರ ಗ್ರಾಮದ ನಾಗರಾಜ್ ಬೈಲ್ ಪತ್ತರ ತನ್ನ ಪತ್ನಿ ಪದ್ಮಾಗೆ ಚಿಕಿತ್ಸೆ ಕೊಡಿಸಲು ಪರದಾಡುತ್ತಿದ್ದ. ಆಸ್ಪತ್ರೆಯಲ್ಲಿ ವೈದ್ಯರು ಸಿಜೆಯರಿನ್ ಮೂಲಕ ಹೆರಿಗೆ ಮಾಡಿಸಿದ್ದರು. ತಾಯಿ-ಮಕ್ಕಳು ಆರೋಗ್ಯದಿ‌ಂದ ಇದ್ದಾರೆ. ನಾಗರಾಜ ಕುಟುಂಬ ಎದುರಿಸುತ್ತಿರುವ ಸಮಸ್ಯೆಯನ್ನು ಸ್ಥಳೀಯರೊಬ್ಬರು ನಟ ಸೋನು ಸೂದ್ ಗಮನಕ್ಕೆ ತಂದಾಗ ಅವರ ತಂಡದ ಮುಖ್ಯಸ್ಥ ಗೋವಿಂದ ಅಗರವಾಲ್, ಬಾಣಂತಿ ಪದ್ಮಾ ಪತಿ ಮತ್ತು ನಾಗರಾಜನ ಜೊತೆ ಮೂರು‌ ಬಾರಿ ದೂರವಾಣಿ ಮೂಲಕ ಮಾತನಾಡಿದ್ದಾರೆ. ಯಾವುದೇ ಕಾರಣಕ್ಕೂ ಆತಂಕ ಪಡಬೇಡಿ. ಮೋದಲು ನಾವು ನಿಮಗೆ ಎರಡು ತಿಂಗಳಿಗೆ ಆಗುವಷ್ಟು ಆಹಾರ ಪದಾರ್ಥಗಳನ್ನು ನೀಡುವ ಜೊತೆಗೆ ಮಕ್ಕಳ ಚಿಕಿತ್ಸೆಗೆ ತಗಲುವ ವೆಚ್ಚ ನೀಡುವುದಾಗಿ ತಿಳಿಸಿದ್ದಾರೆ.

ಈಗಾಗಲೇ ನಾಗರಾಜನ ಕುಟುಂಬಕ್ಕೆ ಎರಡು ತಿಂಗಳಿಗಾಗುವಷ್ಟು ದವಸ ಧಾನ್ಯಗಳನ್ನ ಗೋವಿಂದ್ ಅಗರವಾಲ್ ಕೊರಿಯರ್ ಮಾಡಿರುವುದಾಗಿ ನಾಗರಾಜ್ ಮೊಬೈಲ್​ಗೆ ವಾಟ್ಸ್ಆ್ಯಪ್ ಮೂಲಕ ಮೆಸೇಜ್ ಮಾಡಿದ್ದಾರೆ. ಇದರಿಂದ ಬಡ ಕುಟುಂಬದಲ್ಲಿ ಕೊಂಚ ನೆಮ್ಮದಿ ಮೂಡಿದೆ.

ಈಗಾಗಲೇ ನಟ ಸೋನು ಸೂದ್ ಮುಂಬೈನಲ್ಲಿ ಕೊರೊನಾ ವೈರಸ್ ಹೆಚ್ಚಾಗಿ ಹರಡಿದ ಸಂದರ್ಭದಲ್ಲಿ ನಗರದಲ್ಲಿ ಕೆಲಸ‌ ಮಾಡುತ್ತಿರುವ ದೇಶದ ವಿವಿಧ ರಾಜ್ಯಗಳ ವಲಸೆ ಕಾರ್ಮಿಕರನ್ನು ಸ್ವಂತ ‌ಖರ್ಚಿನಲ್ಲಿ ಅವರವರ ಗ್ರಾಮಗಳಿಗೆ ಕಳುಹಿಸುವ ಮೂಲಕ ಮಾನವೀಯತೆ ಮೆರೆದಿದ್ದರು. ಈಗ ಬಡ ನಾಗರಾಜ ಕುಟುಂಬಕ್ಕೆ ಸೋನು ಸೂದ್ ಸಹಾಯ ಹಸ್ತ ಚಾಚುವ ಮೂಲಕ ಮತ್ತೆ ಉದಾರತೆ ಮೆರೆದಿದ್ದಾರೆ.

ABOUT THE AUTHOR

...view details