ಕರ್ನಾಟಕ

karnataka

ETV Bharat / state

ಕೃಷ್ಣಾ ನದಿಯಲ್ಲಿ ಸ್ನಾನ ಮಾಡಲು ಹೋದ ವ್ಯಕ್ತಿ ನಾಪತ್ತೆ: ಮುಂದುವರೆದ ಶೋಧ ಕಾರ್ಯ

ಕೃಷ್ಣಾ ನದಿಯಲ್ಲಿ ಸ್ನಾನ ಮಾಡಲು ಹೋದ ವ್ಯಕ್ತಿ ನಾಪತ್ತೆಯಾಗಿರುವ ಘಟನೆ ತಿಂಥಣಿ ಗ್ರಾಮದ ಬಳಿ ನಡೆದಿದೆ.

A man is missing who went to bath in krishna river in yadagiri
ಕೃಷ್ಣಾ ನದಿಯೊಳಗೆ ಸ್ನಾನ ಮಾಡಲು ಹೋದ ವ್ಯಕ್ತಿಯೋರ್ವ ನಾಪತ್ತೆ..ಮುಂದುವರೆದ ಶೋಧಕಾರ್ಯ

By

Published : Feb 9, 2020, 9:01 PM IST


ಯಾದಗಿರಿ: ಕೃಷ್ಣಾ ನದಿಯೊಳಗೆ ಸ್ನಾನ ಮಾಡಲು ಹೋದ ವ್ಯಕ್ತಿವೋರ್ವ ನಾಪತ್ತೆಯಾಗಿರುವ ಘಟನೆ ಜಿಲ್ಲೆಯ ತಿಂಥಣಿ ಗ್ರಾಮದ ಬಳಿ ನಡೆದಿದೆ.

ಕೃಷ್ಣಾ ನದಿಯೊಳಗೆ ಸ್ನಾನ ಮಾಡಲು ಹೋದ ವ್ಯಕ್ತಿ ನಾಪತ್ತೆ..ಮುಂದುವರೆದ ಶೋಧಕಾರ್ಯ

ಯಾದಗಿರಿ ತಾಲೂಕಿನ ಯರಗೋಳಾ ಗ್ರಾಮದ ಪೀರಪ್ಪ (55) ನೀರು ಪಾಲಾಗಿರುವ ವ್ಯಕ್ತಿ. ಮೌನೇಶ್ವರ ಜಾತ್ರೆ ಹಿನ್ನೆಲೆ ದೇವರ ದರ್ಶನ ಪಡೆಯಲು ಕುಟುಂಬ ಸಮೇತ ನಿನ್ನೆ ಆಗಮಿಸಿದ ಪೀರಪ್ಪ, ಸ್ನಾನ ಮಾಡಲು ತೆರಳಿದಾಗ ಈ ಘಟನೆ ಸಂಭವಿಸಿದ್ದು, ಶೋಧಕಾರ್ಯ ಮುಂದುವರೆದಿದೆ.

ಪೀರಪ್ಪನ ಕಾಲಿಗೆ ಕೃಷ್ಣಾ ನದಿಯಲ್ಲಿನ ಮೀನಿನ ಬಲೆ ಸಿಲುಕಿದ್ದರಿಂದ ಆತ ನೀರು ಪಾಲಾಗಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಆಗಮಿಸಿದ ಸುರಪುರ ಪೊಲೀಸ್ ಠಾಣೆಯ ಪೋಲಿಸರು ಹಾಗೂ ಅಗ್ನಿಶಾಮಕದಳ ಶೋಧ ಕಾರ್ಯ ಕೈಗೊಂಡಿತು.

ABOUT THE AUTHOR

...view details