ವಿಜಯಪುರ:ಸಿಎಂ ಬಿ.ಎಸ್ ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ವಿರುದ್ಧ ಸದಾ ಹರಿಹಾಯುತ್ತಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರ ಬೆಂಬಲಕ್ಕೆ ಸಚಿವ ಸಿ.ಪಿ ಯೋಗೇಶ್ವರ್ ನೇರವಾಗಿ ನಿಂತಿದ್ದಾರೆ.
ಇಂದು ವಿಜಯಪುರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಖಾಸಗಿ ಹೋಟೆಲ್ನಲ್ಲಿ ಯತ್ನಾಳ್ ಜೊತೆಗೆ ಚರ್ಚೆ ನಡೆಸಿದ್ದ ಯೋಗೇಶ್ವರ್ ಬಳಿಕ ತ್ರಿಸ್ಟಾರ್ ಹೋಟೆಲ್ನ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಒಟ್ಟಿಗೆ ಆಗಮಿಸಿ ಕಾರ್ಯಕ್ರಮ ನೆರವೇರಿಸಿದರು.