ಕರ್ನಾಟಕ

karnataka

ETV Bharat / state

ಭೀಮಾ ನದಿಯಲ್ಲಿ ಹೆಚ್ಚುತ್ತಿರುವ ನೀರು: ಆತಂಕದಲ್ಲಿ‌ ಜನರು - ಪ್ರವಾಹ ಭೀತಿ

ಭೀಮಾ ನದಿ ತೀರದಲ್ಲಿ ಪ್ರವಾಹ ಭೀತಿ ಮುಂದುವರೆದಿದೆ. ರಾತ್ರಿಯಿಂದಲೇ ಏರಿಕೆಯಾಗುತ್ತಿರುವ ನೀರಿನಿಂದ ಆಲಮೇಲ‌ ತಾಲೂಕಿನ ತಾರಾಪುರದ ಜನ-ಜಾನುವಾರುಗಳನ್ನು ರಕ್ಷಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

water level  Increasing in Bhima river
ಭೀಮಾ ನದಿಯಲ್ಲಿ ಹೆಚ್ಚುತ್ತಿರುವ ನೀರಿನ‌ ಮಟ್ಟ..

By

Published : Oct 17, 2020, 9:25 AM IST

ವಿಜಯಪುರ: ಭೀಮಾ ನದಿ ತೀರದಲ್ಲಿ ಮಳೆ ನಿಂತರೂ‌ ಪ್ರವಾಹ ಭೀತಿ ಮಾತ್ರ ನಿಂತಿಲ್ಲ. ಉಕ್ಕಿ ಹರಿಯುತ್ತಿರುವ ಭೀಮಾ ನದಿ ನೀರಿನಿಂದ ನದಿ ತೀರದ ಜನರು ತತ್ತರಿಸಿದ್ದಾರೆ.

ಭೀಮಾ ನದಿಯಲ್ಲಿ ಹೆಚ್ಚುತ್ತಿರುವ ನೀರಿನ‌ ಮಟ್ಟ: ಆತಂಕದಲ್ಲಿ‌ ಜನರು

ನಿನ್ನೆ ಸಂಪರ್ಕ ಕಳೆದುಕೊಂಡಿದ್ದ ತಾರಾಪುರದಲ್ಲಿ ಇಂದೂ ಕೂಡ ಅದೇ ಪರಿಸ್ಥಿತಿ ಮುಂದುವರೆದಿದೆ. ನಡುಗಡ್ಡೆಯಾದ ತಾರಾಪುರದಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದೆ. ರಾತ್ರಿಯಿಂದಲೇ ಏರಿಕೆಯಾಗುತ್ತಿರುವ ನೀರಿನಿಂದ ಜನ-ಜಾನುವಾರುಗಳನ್ನು ರಕ್ಷಿಸಬೇಕೆಂದು ಆಲಮೇಲ ತಾಲೂಕಿನ ತಾರಾಪುರ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಅಲ್ಲದೆ ಗ್ರಾಮದಿಂದ ತಮ್ಮನ್ನು ಸ್ಥಳಾಂತರಿಸಬೇಕೆಂದು ಮನವಿ ಮಾಡಿದ್ದಾರೆ.

ಭೀಮಾ ನದಿಯಲ್ಲಿ ಹೆಚ್ಚುತ್ತಿರುವ ನೀರಿನ‌ ಮಟ್ಟ: ಆತಂಕದಲ್ಲಿ‌ ಜನರು

ಪ್ರವಾಹದಿಂದ ತತ್ತರಿಸಿದರೂ ಸಹ ಜಿಲ್ಲಾಡಳಿತ ಇಲ್ಲಿಯವರೆಗೆ ಬೋಟ್ ನೀಡಿಲ್ಲ. ಗ್ರಾಮದಲ್ಲಿ ‌100ರಕ್ಕೂ ಅಧಿಕ ಕುಟುಂಬಗಳು ನೀರಿನಲ್ಲಿ ಸಿಲುಕಿಗೊಂಡು ಸಂಕಷ್ಟ ಅನುಭವಿಸುತ್ತಿವೆ. ಕ್ಷಣ ಕ್ಷಣಕ್ಕೂ ಏರುತ್ತಿರುವ ನೀರಿನಿಂದ ಜನರಿಗೆ ಆತಂಕ ಮತ್ತಷ್ಟು ಹೆಚ್ಚಾಗಿದೆ.

ABOUT THE AUTHOR

...view details