ಕರ್ನಾಟಕ

karnataka

ETV Bharat / state

ವಿಜಯಪುರ ಡಿಸಿ ಸಂಧಾನ ಯಶಸ್ವಿ: ಬಂದ್​ ಕರೆ ಹಿಂಪಡೆದ ಬೀದಿಬದಿ ವ್ಯಾಪಾರಿಗಳು

ಬಂದ್​ ನಡೆಸಲು ಮುಂದಾಗಿದ್ದ ನಗರದ ಲಾಲ್ ಬಹಾದ್ದೂರ್ ಶಾಸ್ತ್ರಿ ಮಾರುಕಟ್ಟೆ, ನೆಹರು ಮಾರುಕಟ್ಟೆ ವ್ಯಾಪಾಸ್ಥರ ಮನವೊಲಿಸುವಲ್ಲಿ ಜಿಲ್ಲಾಧಿಕಾರಿ ವೈ.ಎಸ್​. ಪಾಟೀಲ್​ ಯಶಸ್ವಿಯಾಗಿದ್ದಾರೆ.

DC made a meeting with street side merchants

By

Published : Nov 25, 2019, 8:30 PM IST

ವಿಜಯಪುರ: ಅಭಿವೃದ್ಧಿ ಕಾಮಗಾರಿಗಳನ್ನು ನಡೆಸುವ ಉದ್ದೇಶದಿಂದ ನಗರದ ಲಾಲ್ ಬಹಾದ್ದೂರ್ ಶಾಸ್ತ್ರಿ ಮಾರುಕಟ್ಟೆ, ನೆಹರೂ ಮಾರುಕಟ್ಟೆಯ ರಸ್ತೆಗಳನ್ನು ತೆರವುಗೊಳಿಸಲಾಗಿತ್ತು. ಇದನ್ನು ಖಂಡಿಸಿ ರಸ್ತೆ ಬದಿಯ ವ್ಯಾಪಾರಿಗಳು ನಾಳೆ ಸ್ವಯಂ ಘೋಷಿತ ಬಂದ್​ಗೆ ಕರೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಜಿಲ್ಲಾಧಿಕಾರಿಗಳು ಸಭೆ ನಡೆಸಿ ವ್ಯಾಪಾರಿಗಳ ಮನವೊಲಿಸಿದರು.

ಬೀದಿ ವ್ಯಾಪಾರಿಗಳ ಜೊತೆ ಸಭೆ ನಡೆಸಿದ ಜಿಲ್ಲಾಧಿಕಾರಿಗಳು

ಅಭಿವೃದ್ಧಿ ಕಾಮಗಾರಿಗಳನ್ನು ನಡೆಸುವ ಉದ್ದೇಶದಿಂದ ನಗರದ ಹೃದಯ ಭಾಗವಾದ ಗಾಂಧಿವೃತ್ತದ ಲಾಲ್ ಬಹದ್ದೂರ್ ಶಾಸ್ತ್ರಿ ಮಾರುಕಟ್ಟೆ ಹಾಗೂ ನೆಹರೂ ಮಾರುಕಟ್ಟೆಯ ರಸ್ತೆ ಬದಿಯಿದ್ದ ಅಂಗಡಿ ಮುಂಗ್ಗಟ್ಟುಗಳನ್ನು ತೆರವುಗೊಳಿಸಲಾಗಿತ್ತು. ನ.21ರಂದು ಮಹಾನಗರ ಪಾಲಿಕೆ ಆಯುಕ್ತ ಹರ್ಷಾ ಶೆಟ್ಟಿ ಹಾಗೂ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಪ್ರಕಾಶ್​ ನಿಕ್ಕಂ ನೇತೃತ್ವದಲ್ಲಿ ಈ ಕಾರ್ಯವನ್ನು ಕೈಗೊಳ್ಳಲಾಗಿತ್ತು. ಇದನ್ನು ಖಂಡಿಸಿ ರಸ್ತೆ ಬೀದಿಯ ವ್ಯಾಪಾರಿಗಳು ಖಾಗ ಬಿಟ್ಟು ಕೊಡುವುದಿಲ್ಲ ಎಂದು ಪಟ್ಟು ಹಿಡಿದು ಅಂಗಡಿ ಮುಂಗಟ್ಟು ಬಂದ್​ ಮಾಡಿ ಮಾರುಕಟ್ಟೆಯಲ್ಲಿ ಧರಣಿ ಮಾಡುತ್ತಿದ್ದರು.

ಈ ಸಂಬಂಧ ನಾಳೆ ವ್ಯಾಪಾರಸ್ಥರು ವಿಜಯಪುರ ನಗರದ ಸ್ವಯಂ ಪ್ರೇರಿತ ಬಂದ್​ಗೆ ಕರೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಜಿಲ್ಲಾಧಿಕಾರಿ ವೈ .ಎಸ್. ಪಾಟೀಲ್​ ಹಾಗೂ ಪೊಲೀಸ್​ ಇಲಾಖೆ‌ ನೇತೃತ್ವದಲ್ಲಿ ಬೀದಿ ವ್ಯಾಪಾರಿಗಳ ಮುಖಂಡರ ಜೊತೆಗೆ ಸಭೆ ನಡೆಸಿ ಪರ್ಯಾಯ ಜಾಗ ನೀಡುವುದಾಗಿ ಹೇಳಿ ವ್ಯಾಪಾರಿಗಳ ಮನವೊಲಿಸಿದ್ದು, ಬಂದ್​ ಹಿಂಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಇಂದು ಜಿಲ್ಲಾಧಿಕಾರಿಗಳು ಸಭೆ ಕರೆದು ಮಾತನಾಡಿ ಸುಮಾರು ಅಂಗಡಿಗಳನ್ನು ತೆರವು ಮಾಡಲಾಗಿದೆ. ಅವರ ಪೈಕಿ 100 ವ್ಯಾಪಾರಸ್ಥರಿಗೆ ಶಾಸ್ತ್ರೀ ಮಾರುಕಟ್ಟೆ ಪಕ್ಕದಲ್ಲಿ ಪರ್ಯಾಯ ವ್ಯಾಪಾರ ಮಾಡಲು ಖಾಗ ಗುರುತಿಸಿದ್ದಾರೆ. ಅಲ್ಲಿ ವ್ಯಾಪಾರ ಮಾಡಲು ಹೊಂದಾಣಿಕೆಯಾಗದಿದ್ದರೆ ಬೇರೆ ಜಾಗ ಕೊಡುವುದಾಗಿ ಜಿಲ್ಲಾಧಿಕಾರಿಗಳು ಹೇಳಿದ್ದಾರೆ. ಸದ್ಯಕ್ಕೆ ನಾಳೆ ನಡೆಯುವ ಸ್ವಯಂ ಪ್ರೇರಿತ ಬಂದ್​ ಕರೆ‌‌ಯನ್ನು ಹಿಂಪಡೆಯಲಾಗಿದೆ. ಆದರೆ ಮಾರುಕಟ್ಟೆಯಲ್ಲಿ ಪರ್ಯಾಯ ಜಾಗ ಸಿಗುವವರೆಗೆಧರಣಿ ಮಾತ್ರಮುಂದುವರೆಲಿದೆ ಎಂದು ಮಾಜಿ‌ ಕಾರ್ಪೋರೆಟರ್ ಮೈನುದ್ದೀನ್ ಬಿಳಗಿ ಈಟಿವಿ ಭಾರತ್​​ಗೆ ಮಾಹಿತಿ ನೀಡಿದರು.

ABOUT THE AUTHOR

...view details