ವಿಜಯಪುರ:ಜಿಲ್ಲೆಯ ಇಂಡಿ ತಾಲೂಕಿನ ಹಳೇ ಉಮರಾಣಿ ಗ್ರಾಮ ಸಂಪೂರ್ಣ ಜಲ ದಿಗ್ಭಂಧನಕ್ಕೊಳಗಾಗಿದ್ದು, ಗ್ರಾಮಸ್ಥರ ರಕ್ಷಣೆಗೆ ಜಿಲ್ಲಾಡಳಿತ ಮುಂದಾಗಿದೆ.
ವಿಜಯಪುರ: ಉಮರಾಣಿ ಗ್ರಾಮಸ್ಥರ ರಕ್ಷಣೆಗೆ ಮುಂದಾದ ಜಿಲ್ಲಾಡಳಿತ
ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಹಳೇ ಉಮಾರಾಣಿ ಗ್ರಾಮಕ್ಕೆ ನೀರು ನುಗ್ಗಿದ್ದು, 100ಕ್ಕೂ ಅಧಿಕ ಕುಟುಂಬಗಳು ಗ್ರಾಮದಲ್ಲಿ ಸಿಲುಕಿಕೊಂಡಿವೆ.
ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಹಳೇ ಉಮಾರಾಣಿ ಗ್ರಾಮಕ್ಕೆ ನೀರು ನುಗ್ಗಿದ್ದು, 100ಕ್ಕೂ ಅಧಿಕ ಕುಟುಂಬಗಳು ಗ್ರಾಮದಲ್ಲಿ ಸಿಲುಕಿಕೊಂಡಿವೆ. ಸ್ಥಳಕ್ಕಾಗಮಿಸಿದ ತಾಲೂಕಾಡಳಿತ, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಸಂಪೂರ್ಣ ಸುತ್ತುವರೆದ ನೀರಿನಲ್ಲೇ ಹೋಗಿ ಬೋಟ್ ಮೂಲಕ ಜನರನ್ನು ರಕ್ಷಿಸಿ ಕರೆತರುತ್ತಿದ್ದಾರೆ.
ಗ್ರಾಮದ ಸುಮಾರು 1 ಕಿಲೋ ಮೀಟರ್ ದೂರದವರೆಗೆ ನೀರು ಸುತ್ತುವರೆದಿದೆ. ನೀರಿನಲ್ಲಿ ಹೋಗಿ ಜನರನ್ನು ಕರೆತರಲು ಜಿಲ್ಲಾಡಳಿತ ಪರದಾಡುತ್ತಿದೆ. ಕಳೆದ ಎರಡು ದಿನಗಳಿಂದ ಸುರಕ್ಷಿತ ಸ್ಥಳಕ್ಕೆ ಬರುವಂತೆ ತಾಲೂಕು ಆಡಳಿತ ಮನವಿ ಮಾಡಿಕೊಂಡಿತ್ತಾದರೂ ಜನರು ಮಾತ್ರ ಸ್ಪಂದಿಸಿರಲಿಲ್ಲ.