ವಿಜಯಪುರ: ಕೊರೊನಾ ಭೀತಿ ಹಿನ್ನೆಲೆ ದೇಶಾದ್ಯಂತ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಸೇತುವೆ ಮೇಲೆ ರಸ್ತೆ ಬಂದ್ ಮಾಡಲು ಮುಳ್ಳುಗಂಟಿಗಳನ್ನು ಹಾಕಲಾಗಿದೆ. ಜನರು ಇದನ್ನು ಸರಿಸಿ ರಸ್ತೆ ದಾಟುತ್ತಿದ್ದು, ಪೊಲೀಸರಿಗೆ ಏನು ಮಾಡಬೇಕು ಎನ್ನುವುದೇ ತಿಳಿಯದಂತಾಗಿದೆ.
ಮುಳ್ಳುಗಂಟಿ ಸರಿಸಿ ರಸ್ತೆ ದಾಟುತ್ತಿರುವ ಸವಾರರು... ದಿಕ್ಕು ತೋಚದಾದ ವಿಜಯಪುರ ಜಿಲ್ಲಾಡಳಿತ
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಚಿಕ್ಕಮಣ್ಣೂರ ಹಾಗೂ ಕಲಬುರಗಿ ಜಿಲ್ಲೆಯ ಅಪಜಲಪುರ ತಾಲೂಕಿನ ಹಿರೇಮಣ್ಣಿಗೆ ಸಂಪರ್ಕ ಕಲ್ಪಿಸುವ ಸೇತುವೆಗೆ ಅಡ್ಡಲಾಗಿ ಮಣ್ಣಿನ ದಿಬ್ಬ ಮತ್ತು ಮುಳ್ಳುಗಂಟಿಯನ್ನು ಹಾಕಿ ಜಿಲ್ಲಾಡಳಿತ ಸಂಪರ್ಕ ಕಡಿತಗೊಳಿಸಿದೆ. ಆದರೂ ಸಹ ಬೈಕ್ ಸವಾರರು ಕ್ಯಾರೆ ಎನ್ನದೆ ಸೇತುವೆ ಮೇಲೆ ಸಂಚರಿಸುತ್ತಿದ್ದಾರೆ.
ಜಿಲ್ಲೆಯ ಇಂಡಿ ತಾಲೂಕಿನ ಚಿಕ್ಕಮಣ್ಣೂರ ಹಾಗೂ ಕಲಬುರಗಿ ಜಿಲ್ಲೆಯ ಅಪಜಲಪುರ ತಾಲೂಕಿನ ಹಿರೇಮಣ್ಣಿಗೆ ಸಂಪರ್ಕ ಕಲ್ಪಿಸುವ ಸೇತುವೆಗೆ ಅಡ್ಡಲಾಗಿ ಮಣ್ಣಿನ ದಿಬ್ಬ ಮತ್ತು ಮುಳ್ಳುಗಂಟಿಯನ್ನು ಹಾಕಿ ಜಿಲ್ಲಾಡಳಿತ ಸಂಪರ್ಕ ಕಡಿತಗೊಳಿಸಿದೆ. ಆದರೆ ಅದೇ ಮಣ್ಣಿನ ದಿಬ್ಬ ಹಾಗೂ ಮುಳ್ಳಿನ ಗಿಡಗಳ ಮೇಲೆ ವಾಹನ ಸವಾರರು ಹಾದು ಬರುತ್ತಿದ್ದಾರೆ. ಸ್ವಲ್ಪ ಯಾಮಾರಿದ್ರೂ ಸೇತುವೆ ಮೇಲಿಂದ ಬಿದ್ದು ಪ್ರಾಣ ಕಳೆದುಕೊಳ್ಳುವ ಅಪಾಯವಿದೆ. ಇದನ್ನು ಲೆಕ್ಕಿಸದೇ ತಮ್ಮ ಜೀವದ ಹಂಗು ತೊರೆದು ಬೈಕ್ ಸವಾರರು ವರ್ತಿಸುತ್ತಿದ್ದಾರೆ.
ಕಲಬುರಗಿ-ವಿಜಯಪುರ ಜಿಲ್ಲೆಯಲ್ಲಿ ಯಾರು ಮನೆಯಿಂದ ಹೊರ ಹೋಗಬಾರದೆಂದು ಜಿಲ್ಲಾಡಳಿತ ಸೂಚನೆ ನೀಡಿದೆ. ಆದ್ರೂ ಸಹ ನಿಯಮ ಉಲ್ಲಂಘಿಸಿ, ಬೈಕ್ ಸವಾರರು ಓಡಾಡುತ್ತಿದ್ದಾರೆ. ಭೀಮಾ ನದಿಯ ಸೇತುವೆ ಮೇಲ್ಭಾಗದಲ್ಲಿ ಸಹ ರಸ್ತೆ ಬಂದ್ ಮಾಡಲಾಗಿದೆ. ಕೊರೊನಾ ಹರಡದಂತೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಕ್ರಮ ಕೈಗೊಂಡಿದ್ದು, ಬೈಕ್ ಸವಾರರಿಗೆ ಪೊಲೀಸರು ಚಾಟಿ ಬೀಸಿದ್ದಾರೆ.