ವಿಜಯಪುರ:ಆಲಮಟ್ಟಿ ಜಲಾಶಯಕ್ಕೆ ದಿನೇ ದಿನೆ ಒಳಹರಿವು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೆಪಿಸಿಎಲ್ಗೆ 1 ಟಿಎಂಸಿ ನೀರನ್ನು ನದಿಪಾತ್ರದ ಬಲಭಾಗಕ್ಕೆ ಬಿಟ್ಟಿದ್ದು ಆಲಮಟ್ಟಿ ವಿದ್ಯುತ್ ಉತ್ಪಾದನಾ ಘಟಕ ವಿದ್ಯುತ್ ಉತ್ಪಾದನೆ ಆರಂಭಿಸಿದೆ.
ನಿನ್ನೆ ಸಂಜೆಯವರೆಗೆ 1 ಟಿಎಂಸಿ ನೀರು ಬಿಟ್ಟ ಪರಿಣಾಮ ವಿದ್ಯುತ್ ಘಟಕದ 55 ಮೆಗಾವ್ಯಾಟ್ ಸಾಮರ್ಥ್ಯದ ಎರಡು ಘಟಕಗಳಿಂದ 16.80 ಲಕ್ಷ ಯುನಿಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ. 290 ಮೆಗಾವ್ಯಾಟ್ ಗರಿಷ್ಠ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೊಂದಿರುವ ಆಲಮಟ್ಟಿ ವಿದ್ಯುತ್ ಘಟಕದ 6 ಘಟಕಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಲು ಒಟ್ಟು 45 ಸಾವಿರ ಕ್ಯೂಸೆಕ್ ನೀರು ಹರಿಬಿಡಬೇಕಾಗಿದೆ.