ಮುದ್ದೇಬಿಹಾಳ: ಸಾರಿಗೆ ನೌಕರರ ಮುಷ್ಕರ ಮುಂದುವರೆದಿದೆ. ಇದರ ನಡುವೆ ನಿಧಾನವಾಗಿ ನೌಕರರು ಸೇವೆಗೆ ಹಾಜರಾಗುವ ಮೂಲಕ ಮತ್ತೆ ಬಸ್ ಸಂಚಾರವನ್ನು ಯಥಾಸ್ಥಿತಿಗೆ ತರುವ ಪ್ರಯತ್ನ ಅಧಿಕಾರಿಗಳಿಂದ ನಡೆದಿದೆ.
ಪಟ್ಟಣದ ಸಾರಿಗೆ ಘಟಕದಿಂದ ಇಂದು 12ಕ್ಕೂ ಹೆಚ್ಚು ಬಸ್ಗಳು ವಿವಿಧ ಮಾರ್ಗಗಳಲ್ಲಿ ಸಂಚಾರ ನಡೆಸಿವೆ. ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರಬರ ವಿಶೇಷ ಪ್ರಯತ್ನದ ಮೇರೆಗೆ ನೌಕರರು ವಾಪಸ್ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ.
ಸವದತ್ತಿಗೆ 35 ಬಸ್:ಚುನಾವಣಾ ಆಯೋಗದ ಸೂಚನೆಯ ಮೇರೆಗೆ ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಮುದ್ದೇಬಿಹಾಳ ಘಟಕದಿಂದ 35 ಬಸ್ಗಳನ್ನು ಬಿಡಲಾಗಿದೆ. ಲೋಕಸಭಾ ಕ್ಷೇತ್ರದ ಸವದತ್ತಿ ತಾಲೂಕಿಗೆ ಈ ಬಸ್ಗಳನ್ನು ಚುನಾವಣಾ ಕರ್ತವ್ಯಕ್ಕಾಗಿ ನಿಯೋಜಿಸಲಾಗಿದೆ. ಆಯೋಗದ ಆದೇಶ ಹೊರ ಬೀಳುತ್ತಿದ್ದಂತೆ 35 ನೌಕರರು ಸೇವೆಗೆ ಬಂದಿದ್ದಾರೆ.
ಇದನ್ನೂ ಓದಿ:ಮುಂದುವರೆದ ಸಾರಿಗೆ ನೌಕರರ ಮುಷ್ಕರ: ಪ್ರಯಾಣಿಕರ ಪರದಾಟ
ನಿಲ್ಲದ ಖಾಸಗಿ ವಾಹನಗಳ ಭರಾಟೆ: ಪೂರ್ಣ ಪ್ರಮಾಣದಲ್ಲಿ ಕೆಎಸ್ಆರ್ಟಿಸಿ ಸಾರಿಗೆ ಸಂಚಾರ ಆರಂಭವಾಗದ ಕಾರಣ ಖಾಸಗಿ ಗೂಡ್ಸ್, ಜೀಪ್ ಟ್ರ್ಯಾಕ್ಸ್ಗಳ ಮಾಲೀಕರು ಪ್ರಯಾಣಿಕರಿಂದ ಹಣ ವಸೂಲಿಗಿಳಿದಿದ್ದು ಕಂಡು ಬಂದಿತು. ಬಸ್ ನಿಲ್ದಾಣದಲ್ಲಿಯೇ ಖಾಸಗಿ ಟ್ರಾವೆಲ್ಸ್ಗಳು ಜನರನ್ನು ಕರೆದುಕೊಂಡು ಹೋಗುವುದು ಕಂಡು ಬಂದಿತು.