ವಿಜಯಪುರ:ಜಿಲ್ಲೆಯ ಇಂಡಿ ತಾಲೂಕಿನ ಹೊರ್ತಿಯಲ್ಲಿ ರೇವಣಸಿದ್ದೇಶ್ವರ ದೇವಸ್ಥಾನ ಸಂಸ್ಥೆ ವತಿಯಿಂದ ತ್ರಿಕೋಟಿ ಶಿವಲಿಂಗಗಳ ಪ್ರಥಮ ಶಿವಲಿಂಗ ಪ್ರತಿಷ್ಠಾಪನೆ ಹಾಗೂ ತ್ರಿಕೋಟಿ ಶಿವ ಪಂಚಾಕ್ಷರಿ ಮಹಾ ಮಂತ್ರ ಜಪ ಯಜ್ಷ ಮತ್ತು ಧರ್ಮ ಸಭೆ ನಡೆಯಿತು. ಸುಮಾರು 25 ಸಾವಿರ ಭಕ್ತರು ಸಾಮೂಹಿಕವಾಗಿ ಶಿವಪೂಜೆ ನೇರವೇರಿಸಿದರು. ಸುಮಾರು 1ಗಂಟೆಗಳ ಕಾಲ ಓಂ ನಮಃ ಶಿವಾಯ ಎನ್ನುವ ಮೂಲಕ ಶಿವಪೂಜೆ ನೇರವೇರಿಸಿದರು. ಹೋರ್ತಿಯ ರೇವಣಸಿದ್ದೇಶ್ವರ ದೇವಸ್ಥಾನ ಆವರಣದಲ್ಲಿ ಮೂರು ಕೋಟಿ ಶಿವಲಿಂಗ ಪ್ರತಿಷ್ಢಾಪನೆ ಸಂಕಲ್ಪ ಹೊಂದಿರುವ ದೇವಸ್ಥಾನ ಮಂಡಳಿ ಇದರ ಪ್ರಯುಕ್ತ ಶಿವಲಿಂಗ ಧ್ಯಾನ ಏರ್ಪಡಿಸಿತ್ತು. 20-25 ಸಾವಿರ ಭಕ್ತರು ಶಿವಲಿಂಗ ಧ್ಯಾನ್ಯ ಮಾಡುವ ಮೂಲಕ ಜಯಘೋಷ ಮೊಳಗಿಸಿದರು.
ಸತತ ಒಂದು ಗಂಟೆಗಳ ಕಾಲ ಬಿಟ್ಟುಬಿಡದೇ ಓಂ ಶಿವಾಯ: ಜಪ ಮಾಡಿದರು. ಇದು ವಿಜಯಪುರ ಜಿಲ್ಲೆಯಲ್ಲಿಯೇ ದಾಖಲೆ ಪುಟದಲ್ಲಿ ಸೇರಿದಂತಾಗಿದೆ. ನಂತರ ಭಕ್ತರನ್ನುದ್ದೇಶಿಸಿ ಆರ್ಶಿವಚನ ನೀಡಿದ ಶ್ರೀಶೈಲದ ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಐತಿಹಾಸಿಕವಾದ ತ್ರಿಕೋಟಿ ಲಿಂಗ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯುತ್ತಿದೆ. ತ್ರಿಕೋಟಿ ಶಿವಪಂಚಕ್ಷರಿ ಮಂತ್ರದ ಜಪದ ಮೂಲಕ ಚಲಾನೆ ದೊರೆಯುತ್ತಿರುವುದು ಇದೊಂದು ದೊಡ್ಡ ಇತಿಹಾಸ ಶಿವಪಂಚ ಮೂಲಕ ನೇರವೇರುತ್ತಿರುವುದು, ಪುಣ್ಯದ ಕಾರ್ಯವಾಗಿದೆ ಎಂದು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
25 ಸಾವಿರಕ್ಕಿಂತ ಹೆಚ್ಚು ಭಕ್ತರಿಂದ ಶಿವನಾಮ ಜಪ: ಒಂದು ಗಂಟೆಗಳ ಕಾಲ ಮೈ ಮರೆತು ಶಿವ ಪಂಚಾಕ್ಷರಿ ಮಂತ್ರ ಜಪ ಮಾಡುವ ಮೂಲಕ 3 ಕೋಟಿ ಲಿಂಗ ಇಂದೇ ಪ್ರತಿಷ್ಠಾಪನೆ ಆದಂತಾಗಿದೆ. ಶೀಘ್ರ 3ಕೋಟಿ ಲಿಂಗ ಇಲ್ಲಿ ಸ್ಥಾಪನೆಯಾಗಲಿದೆ, ಏಕಕಾಲದಲ್ಲಿ 25ಸಾವಿರಕ್ಕಿಂತ ಹೆಚ್ಚು ಭಕ್ತರು ಶಿವನಾಮ ಜಪ ಮಾಡಿದ್ದು 3ಕೋಟಿ ಶಿವ ಪಂಚಾಕ್ಷರಿ ಮಂತ್ರ ಜಪ ಮಾಡಿದಂತಾಗಿದೆ ಶಿವಾಚಾರ್ಯ ಸ್ವಾಮೀಜಿ ಹರ್ಷ ವ್ಯಕ್ತಪಡಿಸಿದರು.