ಮುದ್ದೇಬಿಹಾಳ:ವಿಜಯಪುರ ಜಿಲ್ಲೆಯಲ್ಲಿ ಮೂವತ್ತಕ್ಕೂ ಅಧಿಕ ಕೊರೊನಾ ಸೋಂಕಿತರು ಪತ್ತೆಯಾಗಿದ್ದರೂ ಜನತೆ ಇನ್ನೂ ಬುದ್ದಿ ಕಲಿತಿಲ್ಲ.
ಮುದ್ದೇಬಿಹಾಳ ತರಕಾರಿ ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರವೇ ಮಾಯ.. - vegetable market
ಪಟ್ಟಣದ ತಂಗಡಗಿ ರಸ್ತೆಯಲ್ಲಿ ಎಂದಿನತೆ ತರಕಾರಿ, ಹಣ್ಣು ಮಾರಾಟ ಜೋರಾಗಿತ್ತು. ಅಗತ್ಯ ವಸ್ತುಗಳ ಮಾರಾಟದ ಹೆಸರಿನಲ್ಲಿ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ತಮಗೆ ಇಷ್ಟ ಬಂದ ಹಾಗೆ ನಡೆದುಕೊಳ್ಳುತ್ತಿದ್ದಾರೆ.
ಮುದ್ದೇಬಿಹಾಳ ತರಕಾರಿ ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರವೇ ಮಾಯ
ಲಾಕ್‌ಡೌನ್ ಘೋಷಿಸಿದ್ದರೂ ಮುದ್ದೇಬಿಹಾಳ ತರಕಾರಿ ಮಾರುಕಟ್ಟೆಯಲ್ಲಿ ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಖರೀದಿಗೆ ಮುಗಿ ಬೀಳುತ್ತಿದ್ದಾರೆ. ಸಾಕಷ್ಟು ಬಾರಿ ಪೊಲೀಸರು ಹೊಡೆದು ಓಡಿಸುತ್ತಿದ್ದರೂ ಜನರು ಮಾತ್ರ ತಮ್ಮ ಚಾಳಿ ಬಿಡುತ್ತಿಲ್ಲ.
ಎರಡು-ಮೂರು ತಾಸು ನಿತ್ಯ ಈ ರಸ್ತೆಯಲ್ಲಿ ಇದೇ ಪರಿಸ್ಥಿತಿ ಇದ್ದರೂ ಸಂಬಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಿಲ್ಲ ಎಂಬುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.