ವಿಜಯಪುರ: ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಮನೆ ಎದುರು ವೈದ್ಯರ ಮತ್ತು ಜಿಲ್ಲಾಡಳಿತd ನಿರ್ಲಕ್ಷ್ಯಕ್ಕೆ ಮೃತಪಟ್ಟ ಬಾಲಕಿಯ ಮೃತದೇಹವನ್ನಿಟ್ಟು ಪಾಲಕರು ಮೌನ ಪ್ರತಿಭಟನೆ ನಡೆಸಿದ್ದಾರೆ.
ಡಿಸಿ ಮನೆ ಎದುರು ಬಾಲಕಿಯ ಮೃತದೇಹ ಇಟ್ಟು ಪ್ರತಿಭಟನೆ
ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಮನೆ ಎದುರು ವೈದ್ಯರ ನಿರ್ಲಕ್ಷ್ಯಕ್ಕೆ ಮೃತಪಟ್ಟ ಬಾಲಕಿಯ ಮೃತದೇಹವನ್ನಿಟ್ಟು ಪಾಲಕರು ಮೌನ ಪ್ರತಿಭಟನೆ ನಡೆಸಿದ್ದಾರೆ.
The girl body protests in front of the DC house
ಶಿಕಾರಖಾನೆ ಬಡಾವಣೆ ನಿವಾಸಿ ದಾನಮ್ಮ ಹೂಗಾರ (13) ಶವವಿಟ್ಟು ಪಾಲಕರು ಹಾಗೂ ಸ್ಥಳೀಯರು ಪ್ರತಿಭಟನೆ ನಡೆಸಿದರು.
ಆ್ಯಂಟಿ ಜಪಾನೀಸ್ ಎನ್ಸೆಫಲೈಟಿಸ್ ವೈರಸ್ (JE+ve) ಮಹಾಮಾರಿ ರೋಗಕ್ಕೆ ದಾನಮ್ಮ ಬಲಿಯಾಗಿದ್ದು, ವೈದ್ಯರು, ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತ ನಿರ್ಲಕ್ಷ್ಯವೇ ಕಾರಣ ಎಂದು ಬಾಲಕಿ ಪೋಷಕರು, ಸಂಬಂಧಿಕರು ಆರೋಪಿಸಿದ್ದಾರೆ.