ಕರ್ನಾಟಕ

karnataka

ETV Bharat / state

ಸಚಿವ ಕೆ ಎಸ್ ಈಶ್ವರಪ್ಪ- ಮಾಜಿ ಗೃಹ ಮಂತ್ರಿ ಎಂ ಬಿ ಪಾಟೀಲ್ ನಡುವೆ ವಾಗ್ವಾದ..

ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ್ ಹಾಗೂ ನೂತನ ಸಚಿವ ಈಶ್ವರಪ್ಪ ನಡುವೆ ಆಲಮಟ್ಟಿಯಲ್ಲಿ ನಡೆದ ನೆರೆ ಪರಿಹಾರದ ಸಭೆಯಲ್ಲಿ ವಾಗ್ವಾದ ನಡೆಯಿತು.

ಕೆ.ಎಸ್​.ಈಶ್ವರಪ್ಪ-ಎಂ.ಬಿ.ಪಾಟೀಲ್ ನಡುವೆ ವಾಗ್ವಾದ

By

Published : Aug 21, 2019, 9:00 PM IST

ವಿಜಯಪುರ: ಮಾಜಿ ಗೃಹ ಸಚಿವ ಎಂ ಬಿ ಪಾಟೀಲ್ ಹಾಗೂ ನೂತನ ಸಚಿವ ಕೆ ಎಸ್‌ ಈಶ್ವರಪ್ಪ ನಡುವೆ ಆಲಮಟ್ಟಿಯಲ್ಲಿ ನಡೆದ ನೆರೆ ಪರಿಹಾರದ ಸಭೆಯಲ್ಲಿ ವಾಗ್ವಾದ ನಡೆಯಿತು.

ಸಭೆಯಲ್ಲಿ ಎಂ ಬಿ ಪಾಟೀಲ್ ನೆರೆ ಸಂತ್ರಸ್ತರ ಬೇಡಿಕೆಗಳ ಬಗ್ಗೆ ಅಂಕಿ ಅಂಶಗಳ ಸಮೇತ ಮಾಹಿತಿ ನೀಡುತ್ತಿದ್ದರು. ಈ ವೇಳೆ ಮಧ್ಯ ಪ್ರವೇಶಿಸಿ ಸಚಿವ ಈಶ್ವರಪ್ಪನವರು ಮಾತನಾಡಲು ಮುಂದಾದಾಗ ವಾಗ್ವಾದ ನಡೆದಿದೆ.

ಸಚಿವ ಕೆ ಎಸ್ ಈಶ್ವರಪ್ಪ- ಮಾಜಿ ಮಂತ್ರಿ ಎಂ ಬಿ ಪಾಟೀಲ್ ನಡುವೆ ವಾಗ್ವಾದ..

ಈಶ್ವರಪ್ಪ ಮಧ್ಯ ಪ್ರವೇಶದಿಂದ ಗರಂ ಆದ ಎಂ ಬಿ ಪಾಟೀಲ್, ನೀವು ಮಾಡತಿದ್ರೇ ಮಾಡಿ, ಇಲ್ಲಾಂದ್ರೇ ಬಿಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಎಂ ಬಿ ಪಾಟೀಲ್ ಕೋಪಗೊಂಡಿದ್ದನ್ನು ಕಂಡು ಈಶ್ವರಪ್ಪ, ಆಯಿತು ಬಿಡಿ ಎಂದು ಸುಮ್ಮನಾದರು.

ABOUT THE AUTHOR

...view details