ವಿಜಯಪುರ:4ನೇ ಹಂತದ ಲಾಕ್‌ಡೌನ್ ಸಡಿಲಿಕೆ ಬಳಿಕವೂ ಟ್ಯಾಕ್ಸಿಗಳಿಗೆ ಗ್ರಾಹಕರಿಲ್ಲದೆ ಚಾಲಕರು ನಷ್ಟದ ಸುಳಿಯಲ್ಲಿ ಸಿಲುಕಿದ್ದಾರೆ.
ಬಾಡಿಗೆಗೆ ಬಾರದ ಗ್ರಾಹಕರು... ಆರ್ಥಿಕ ಸಂಕಷ್ಟದಲ್ಲಿ ಟ್ಯಾಕ್ಸಿ ಚಾಲಕರು
ಕಳೆದ ಮೂರು ತಿಂಗಳಿನಿಂದ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಜಿಲ್ಲಾಡಳಿತ ಕೊಕ್ಕೆ ಹಾಕಿದ ಪರಿಣಾಮ ಕಾರು ಬಾಡಿಗೆ ಓಡಿಸಿ ಜೀವನ ಸಾಗಿಸುತ್ತಿದ್ದ ಕುಟುಂಬಗಳು, ಕನಿಷ್ಠ ಜೀವನಾಂಶಕ್ಕೆ ಬೇಕಾದ ವಸ್ತುಗಳನ್ನು ಖರಿದೀಸಲಾಗದ ಸ್ಥಿತಿಗೆ ಬಂದು ತಲುಪಿದ್ದಾರೆ.
ನಗರದ ಸ್ಟೇಷನ್ ರಸ್ತೆಯ ಸ್ಟೇಡಿಯಂ ಪಕ್ಕದಲ್ಲಿ 200ಕ್ಕೂ ಅಧಿಕ ಕುಟುಂಬಗಳು ಕಾರ್ ಬಾಡಿಗೆಯಿಂದ ಬಂದ ಹಣದಿಂದ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ಕಳದೆ ಎರಡು ತಿಂಗಳಿನಿಂದ ನಿತ್ಯ ಬಾಡಿಗೆ ಹೋಗುತ್ತಿದ್ದ ಕಾರುಗಳನ್ನು ಮನೆ ಮುಂದೆ ನಿಲ್ಲಿಸಲಾಗಿತ್ತು. ರಾಜ್ಯ ಸರ್ಕಾರ ಲಾಕ್‌ಡೌನ್ ಸಡಿಲಿಕೆ ಮಾಡಿದ ಬಳಿಕ ಗ್ರಾಹಕರು ಬರಬಹುದು ಎಂದುಕೊಂಡಿದ್ದ ಚಾಲಕರಿಗೆ ನಿರಾಸೆಯಾಗಿದೆ.
ಕೊರೊನಾ ಭೀತಿಯಿಂದ ಜನರು ಹೊರ ಬಂದು ಟ್ಯಾಕ್ಸಿಗಳಲ್ಲಿ ಪ್ರಯಾಣಿಸಲು ಹಿಂದೇಟು ಹಾಕುತ್ತಿದ್ದಾರೆ. ಸ್ಟ್ಯಾಂಡ್‌ನಲ್ಲಿ ಕಾರು ನಿಲ್ಲಿಸಿದರೂ ಗ್ರಾಹಕರು ಮಾತ್ರ ಬರುತ್ತಿಲ್ಲ. ಕಳೆದ ಮೂರು ತಿಂಗಳಿನಿಂದ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಜಿಲ್ಲಾಡಳಿತ ಕೊಕ್ಕೆ ಹಾಕಿದ ಪರಿಣಾಮ ಕಾರು ಬಾಡಿಗೆ ಓಡಿಸಿ ಜೀವನ ಸಾಗಿಸುತ್ತಿದ್ದ ಕುಟುಂಬಗಳು, ಕನಿಷ್ಠ ಜೀವನಾಂಶಕ್ಕೆ ಬೇಕಾದ ವಸ್ತುಗಳನ್ನು ಖರಿದೀಸಲಾಗದ ಸ್ಥಿತಿಗೆ ಬಂದು ತಲುಪಿದ್ದಾರೆ.