ಮುದ್ದೇಬಿಹಾಳ (ವಿಜಯಪುರ) :ತಳವಾರ ಮತ್ತು ಪರಿವಾರ ಜನಾಂಗಕ್ಕೆ ಎಸ್ಟಿ ಜಾತಿ ಪ್ರಮಾಣ ಪತ್ರ ನೀಡುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವುದನ್ನು ವಿರೋಧಿಸಿ ತಾಲೂಕು ತಳವಾರ ಪರಿವಾರ ಸಮಾಜ ಸೇವಾ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು.
ತಾಳಿಕೋಟೆ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದ ಸದಸ್ಯರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಂಘದ ತಾಲೂಕಾ ಅಧ್ಯಕ್ಷ ಪರಶುರಾಮ ತಂಗಡಗಿ ಮಾತನಾಡಿ, ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅನುಮೋದಿಸಿ ಕಾನೂನು ಮತ್ತು ನ್ಯಾಯ ಸಚಿವಾಲಯದ ರಾಷ್ಟ್ರಪತಿಗಳ ರುಜು ಕೂಡಾ ಆಗಿದೆ. ರಾಜ್ಯದಲ್ಲಿ 8 ಲಕ್ಷ ತಳವಾರ ಜನಾಂಗ ಮತ್ತು 2.50 ಲಕ್ಷ ಪರಿವಾರ ಜನಾಂಗವಿದೆ. ಇದನ್ನು ಮನಗಂಡಿರುವ ಸರ್ಕಾರವು ಜಿಲ್ಲಾಧಿಕಾರಿಗಳು, ಸಂಸದರು, ರಾಜ್ಯಸಭಾ ಸದಸ್ಯರು ಅನುಮತಿ ಪಡೆದು ರಾಷ್ಟ್ರಪತಿಗಳ ಅಂಕಿತದೊಂದಿಗೆ ಹೊರಡಿಸಿರುವ ಅಧಿಸೂಚನೆಯನ್ನು ಪರಿಗಣಿಸದೆ ಲೋಕಸಭೆ, ರಾಜ್ಯಸಭೆಯನ್ನು ಅವಮಾನಿಸುವ ಹಕ್ಕುಚುತಿ ಇದಾಗಿದೆ ಎಂದು ಆರೋಪಿಸಿದರು.