ಕರ್ನಾಟಕ

karnataka

ETV Bharat / state

ವಿಜಯಪುರ-ಯಶವಂತಪುರ ವಿಶೇಷ ರೈಲಿಗೆ ಹಸಿರು ನಿಶಾನೆ

ವಿಜಯಪುರ-ಯಶವಂತಪುರ ಮಧ್ಯೆ ನೇರ ರೈಲು ಆರಂಭಿಸುವ ಕುರಿತಂತೆ ಚುನಾಯಿತ ಪ್ರತಿನಿಧಿಗಳು, ಸಾರ್ವಜನಿಕರು ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆಯಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಈ ವಿಶೇಷ ರೈಲಿಗೆ ಚಾಲನೆ ನೀಡಲಾಗಿದೆ. ಇದು ಡಿಸೆಂಬರ್ 20ರವರೆಗೆ ನಿಯಮಿತವಾಗಿ ಸಂಚಾರ ನಡೆಸಲಿದೆ.

ವಿಜಯಪುರ- ಯಶವಂತಪುರ ವಿಶೇಷ ರೈಲಿಗೆ ಹಸಿರು ನಿಶಾನೆ

By

Published : Oct 22, 2019, 11:25 PM IST

ವಿಜಯಪುರ: ವಿಜಯಪುರ-ಯಶವಂತಪುರ ನಡುವೆ ಆರಂಭಿಸಲಾದ ವಿಶೇಷ ರೈಲಿನ ಸಮಯ ಬದಲಾವಣೆಗೆ ಸಂಬಂಧಪಟ್ಟಂತೆ ಜನತೆಯ ಅನುಕೂಲಕ್ಕೆ ತಕ್ಕಂತೆ ಕ್ರಮ ಕೈಗೊಳ್ಳಲಾಗುವುದು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್​ ಅಂಗಡಿ ಹೇಳಿದರು.

ನಗರದ ರೈಲ್ವೆ ನಿಲ್ದಾಣದಲ್ಲಿ ವಿಜಯಪುರ-ಯಶವಂತಪುರ ನಡುವಿನ ವಿಶೇಷ ರೈಲಿಗೆ ಚಾಲನೆ ನೀಡಿ ಮಾತನಾಡಿದ ಅವರು, ವಿಜಯಪುರ-ಯಶವಂತಪುರ ಮಧ್ಯೆ ನೇರ ರೈಲನ್ನು ಆರಂಭಿಸುವ ಕುರಿತಂತೆ ಚುನಾಯಿತ ಪ್ರತಿನಿಧಿಗಳು, ಸಾರ್ವಜನಿಕರು ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆಯಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಈ ವಿಶೇಷ ರೈಲಿಗೆ ಚಾಲನೆ ನೀಡಲಾಗಿದೆ. ಇದು ಡಿಸೆಂಬರ್ 20ರವರೆಗೆ ನಿಯಮಿತವಾಗಿ ಸಂಚಾರ ನಡೆಸಲಿದೆ ಎಂದರು.

ವಿಜಯಪುರ-ಯಶವಂತಪುರ ವಿಶೇಷ ರೈಲಿಗೆ ಹಸಿರು ನಿಶಾನೆ

ರೈಲ್ವೆ ಸುರಕ್ಷತೆ ಬಗ್ಗೆ ವಿಶೇಷವಾಗಿ ಗಮನ ಹರಿಸಲಾಗುತ್ತಿದ್ದು, ಸ್ವಚ್ಛತೆ, ಸಮಯ ಪಾಲನೆಗೆ ಒತ್ತು ನೀಡಲಾಗುತ್ತಿದೆ. ರೈಲ್ವೆ ಅಧಿಕಾರಿಗಳು ಹಾಗೂ ಕಾರ್ಮಿಕರ ಶ್ರಮದ ಫಲವಾಗಿ ಹಿಂದಿಗಿಂತಲೂ ಈಗ ರೈಲ್ವೆಯಲ್ಲಿ ಸ್ವಚ್ಛತೆ ಕಾಣಬಹುದಾಗಿದೆ. ರೈಲ್ವೆ ಇಲಾಖೆಯಲ್ಲಿ ಹೆಚ್ಚಿನ ಸುಧಾರಣೆ ತರುವ ಉದ್ದೇಶ ಹೊಂದಲಾಗಿದ್ದು, 50 ಲಕ್ಷ ಕೋಟಿ ರೂ. ವಿನಿಯೋಗ ಮಾಡುವ ಯೋಚನೆಯಿದೆ. ಇದರಿಂದ ಉದ್ಯೋಗಾವಕಾಶ ಸೃಷ್ಟಿಗೂ ಅನುಕೂಲವಾಗಲಿದೆ. ವಿಜಯಪುರ, ಬಾಗಲಕೋಟೆ, ಹಂಪಿ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಅನುಕೂಲಕ್ಕಾಗಿ ಗೋಲ್ಡನ್ ಚಾರಿಯೆಟ್ ರೈಲು ಸಂಚಾರವನ್ನು ಆರಂಭಿಸುವ ಚಿಂತನೆ ಇದೆ. ಅದರಂತೆ ದೇಶಾದ್ಯಂತ 150 ನೂತನ ರೈಲು ಓಡಾಟ ಆರಂಭಿಸಲಾಗಿದೆ. ವಿಜಯಪುರ ನಗರದಲ್ಲಿ ಆರ್​ಒಬಿ ಹಾಗೂ ಆರ್​ಯೂಬಿಗಳನ್ನು ಮುಂಬರುವ 6 ತಿಂಗಳುಗಳ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿಗಳು ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದ ತಿಳಿಸಿದರು.

For All Latest Updates

TAGGED:

ABOUT THE AUTHOR

...view details