ಕರ್ನಾಟಕ

karnataka

ಅಪ್ಪನ ಸಾಧನೆಗೆ ಪುತ್ರನೇ ಸಾಕ್ಷಿ.. ತಂದೆಯ ಪಿಹೆಚ್​ಡಿ ಪದವಿ ಸ್ವೀಕರಿಸಿದ 14ರ ಮಗ..

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಶುಕ್ರವಾರ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಶುಕ್ರವಾರ ಆಯೋಜಿಸಿದ್ದ 70 ಮತ್ತು 71ನೇ ಘಟಿಕೋತ್ಸವದಲ್ಲಿ ಪ್ರಾಧ್ಯಾಪಕ ರಾಘವೇಂದ್ರ ಅವರು ಸಂತೋಷದಿಂದ ಡಾಕ್ಟರೇಟ್​​ ಪಡೆದು ಗೆಲುವಿನ ನಗೆ ಬೀರುತ್ತಿದ್ದರು..

By

Published : Oct 9, 2021, 5:28 PM IST

Published : Oct 9, 2021, 5:28 PM IST

son-received-late-fathers-phd
ಪ್ರಾಧ್ಯಾಪಕ ಡಾ ರಾಘವೇಂದ್ರ

ಮುದ್ದೇಬಿಹಾಳ :ಕೊರೊನಾಗೆ ಬಲಿಯಾದ ತಾಲೂಕಿನ ನಾಲತವಾಡದ ಶ್ರೀ ವೀರೇಶ್ವರ ವಿದ್ಯಾಸಂಸ್ಥೆಯ ಹೆಮ್ಮೆಯ ಕುಸುಮ ಶ್ರೀ ವೀರೇಶ್ವರ ಶಿಕ್ಷಣ ಮಹಾವಿದ್ಯಾಲಯದ ಆಂಗ್ಲ ವಿಭಾಗದ ಪ್ರತಿಭಾವಂತ ಪ್ರಾಧ್ಯಾಪಕ ಡಾ.ರಾಘವೇಂದ್ರ ಸಿ. ಗೂಳಿ ಅವರ ಅಗಲುವಿಕೆಯ ನೆನಪನ್ನು ಮತ್ತೊಮ್ಮೆ ಅವರ ಪಿಹೆಚ್​ಡಿ ಪದವಿ ಘಟಿಕೋತ್ಸವ ಸಮಾರಂಭ ನೆನಪಿಸಿತು.

ಮೃತ ತಂದೆಯ ಪಿಹೆಚ್​ಡಿ ಪದವಿ ಸ್ವೀಕರಿಸಿದ 14ರ ಮಗ

ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು ಆಲೂರು ಗ್ರಾಮದ ರಾಘವೇಂದ್ರ ಗೂಳಿ ಅವರು ನಾಲತವಾಡದ ವೀರೇಶ್ವರ ಬಿಎಡ್ ಕಾಲೇಜಿನಲ್ಲಿ ಇಂಗ್ಲಿಷ್ ವಿಷಯದಲ್ಲಿ ಉಪನ್ಯಾಸಕ ವೃತ್ತಿ ಮಾಡುತ್ತಲೇ, ಡಾ. ಪ್ರಭಾ ಗುಡ್ಡದಾನೇಶ್ವರಿ ಅವರ ಮಾರ್ಗದರ್ಶನಲ್ಲಿ ''IMPACTS OF DIALOGUE METHOD ON ACHIEVEMENT AND IMPROVEMENT IN ENGLISH LANGUAGE SKILLS OF NINTH STANDARD'' ಎಂಬ ವಿಷಯದ ಮೇಲೆ ಪಿಹೆಚ್​ಡಿ ಮಹಾ ಪ್ರಬಂಧವನ್ನು ಮಂಡಿಸಿದ್ದರು. ಅವರು ಮಂಡಿಸಿದ್ದ ಪ್ರಬಂಧಕ್ಕೆ ಕರ್ನಾಟಕ ವಿಶ್ವ ವಿದ್ಯಾಲಯ ಮನ್ನಣೆ ನೀಡಿ ರಾಘವೇಂದ್ರ ಅವರಿಗೆ ಡಾಕ್ಟರೇಟ್ ನೀಡಿತ್ತು.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಶುಕ್ರವಾರ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಶುಕ್ರವಾರ ಆಯೋಜಿಸಿದ್ದ 70 ಮತ್ತು 71ನೇ ಘಟಿಕೋತ್ಸವದಲ್ಲಿ ಪ್ರಾಧ್ಯಾಪಕ ರಾಘವೇಂದ್ರ ಅವರು ಸಂತೋಷದಿಂದ ಡಾಕ್ಟರೇಟ್​​ ಪಡೆದು ಗೆಲುವಿನ ನಗೆ ಬೀರುತ್ತಿದ್ದರು.

ಆದ್ರೆ, ವಿಧಿಯಾಟವೆ ಬೇರೆಯಾಗಿತ್ತು. ಕೊರೊನಾಗೆ ಇದೇ ಮೇ 26ರಂದು ರಾಘವೇಂದ್ರ ಅವರು ಬಲಿಯಾಗಿದ್ದರು. ಸದ್ಯ ಅಪ್ಪನ ಪಿಹೆಚ್​​ಡಿ ಪದವಿಯನ್ನು 14 ವರ್ಷದ ಪುತ್ರ ಮಲ್ಲಿಕಾರ್ಜುನ ಪಡೆದು ತಂದೆಗೆ ಅರ್ಪಿಸಿದ್ದಾನೆ.

ಪ್ರಾಧ್ಯಾಪಕ ಡಾ. ರಾಘವೇಂದ್ರ ಸಿ. ಗೂಳಿ

ಕವಿವಿಯಿಂದ ಡಾ.ರಾಘವೇಂದ್ರ ಗೂಳಿಯವರಿಗೆ ಘಟಿಕೋತ್ಸವ ಸಮಾರಂಭದಲ್ಲಿ ಪ್ರಮಾಣ ಪತ್ರ ಪಡೆಯುವಂತೆ ಮಾಹಿತಿ ಪತ್ರ ಬಂದಿತ್ತು. ಪತ್ರ ನೋಡಿದ ಕುಟುಂಬದವರ ಹೊಟ್ಟೆಗೆ ಬೆಂಕಿಬಿದ್ದ ಅನುಭವ. ಅವರೇ ಇಲ್ಲದ ಪದವಿಯಾಕೆ ಎಂಬ ನಿರಾಶೆ. ಆದ್ರೆ, ಡಾ.ರಾಘು ಅವರು ಪಟ್ಟ ಪರಿಶ್ರಮ ವ್ಯರ್ಥವಾಗಬಾರದು. ಸದರಿ ಪ್ರಮಾಣ ಪತ್ರವನ್ನು ಅವರ ವಾರಸುದಾರ ಮಗ ಚಿ.ಮಲ್ಲಿಕಾರ್ಜುನ ಪಡೆದರೆ ಅವರ ಆತ್ಮಕ್ಕೆ ಚಿರಶಾಂತಿ ದೊರೆಯುತ್ತದೆ.

ಹಾಗಾಗಿ, ಮಲ್ಲಿಕಾರ್ಜುನ ಪಿಹೆಚ್‌ಡಿ ಪದವಿ ಪಡೆಯುವಂತೆ ಮಾವನವರಾದ ಮಲ್ಲಿಕಾರ್ಜುನಗೌಡ ಎಸ್. ಪಾಟೀಲ್ ಅವರ ಸಲಹೆ ನೀಡಿದ್ದರು. ಮಲ್ಲಿಕಾರ್ಜುನ ಸೋದರ ಮಾವನವರಾದ ವಿಜಯಕುಮಾರ್ ಹಾಗೂ ರವಿಚಂದ್ರ ಮತ್ತು ಡಾ.ಗೂಳಿ ರಾಘವೇಂದ್ರ ಅವರ ಮಿತ್ರರೆಲ್ಲರು ಕೂಡಿ ಘಟಿಕೋತ್ಸವದಲ್ಲಿ ಭಾಗವಹಿಸಿ ತಂದೆಯ ಸಾಧನೆಯ ಫಲವಾದ ಪಿಹೆಚ್​ಡಿ ಪ್ರಮಾಣ ಪತ್ರವನ್ನು ಮಗ ಮಲ್ಲಿಕಾರ್ಜುನ ಸ್ವೀಕರಿಸಿದರು.

ABOUT THE AUTHOR

...view details