ವಿಜಯಪುರ: ಭೀಮಾತೀರದಲ್ಲಿ ಮಗನೇ ತಂದೆಯನ್ನ ಕೊಚ್ಚಿಕೊಂದು ಹಾಕಿರುವ ಮತ್ತೊಂದು ದಾರುಣ ಘಟನೆ ನಡೆದಿದೆ.
ಸಾರಾಯಿ ಕುಡಿಯಲು ಹಣ ಕೊಡಲಿಲ್ಲ ಎಂದು ತಂದೆಯನ್ನ ಕೊಡಲಿಯಿಂದ ಮಗ ಕೊಚ್ಚಿ ಹಾಕಿರುವ ಘಟನೆ ವಿಜಯಪುರ ಜಿಲ್ಲೆ ಚಡಚಣ ತಾಲೂಕಿನ ಮಹಾರಾಷ್ಟ್ರ ಗಡಿಯ ಟಾಕಳಿ ಗ್ರಾಮದಲ್ಲಿ ಘಟನೆ ನಡೆದಿದೆ.

ಸಂಜೀವ ತೊರವಿ (38) ಹಣಕ್ಕಾಗಿ ತಂದೆಯನ್ನೆ ಕೊಂದ ಮಗ. ಅಣ್ಣಪ್ಪ ತೊರವಿ (58) ಮಗನಿಂದ ಕೊಲೆಯಾದ ತಂದೆ. ಬುಧವಾರ ಬೆಳಗ್ಗೆ ತಂದೆ ಅಣ್ಣಪ್ಪ ಬಳಿ 1 ಸಾವಿರ ರೂಪಾಯಿ ಕೇಳಿ ಪಡೆದು ಕುಡಿದು ಬಂದಿದ್ದ ಸಂಜೀವ. ರಾತ್ರಿ ಸಾರಾಯಿ ಕುಡಿಯಲು ಮತ್ತೆ 500 ರೂ. ಕೇಳಿದ್ದಾನೆ ಇದಕ್ಕೆ ತಂದೆ ಕೊಡಲ್ಲ ಎಂದಿದ್ದಕ್ಕೆ ಆಕ್ರೋಶಗೊಂಡ ಮಗ ಮನೆಯಲ್ಲಿದ್ದ ಕೊಡಲಿಯಿಂದ ತಂದೆಯ ಕುತ್ತಿಗೆಗೆ ಹೊಡೆದು ತಂದೆ ಅಣ್ಣಪ್ಪನನ್ನು ಕೊಲೆ ಮಾಡಿದ್ದಾನೆ.
ಮನೆಯವರೆಲ್ಲ ಗ್ರಾಮ ದೇವರ ಜಾತ್ರೆಗೆ ಹೋಗಿದ್ದ ವೇಳೆ ಈ ಕೃತ್ಯ ನಡೆದಿದೆ. ಸ್ಥಳಕ್ಕೆ ಚಡಚಣ ಸಿಪಿಐ ಚಿದಂಬರಂ ಭೇಟಿ ನೀಡಿ ಪರಿಶೀಲಿಸಿ, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಚಡಚಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.