ವಿಜಯಪುರ: ಉತ್ತರಪ್ರದೇಶದ ಹಥ್ರಾಸ್‌ನ ವಾಲ್ಮೀಕಿ ಸಮುದಾಯದ ಯುವತಿ ಮೇಲಿನ ಅತ್ಯಾಚಾರ ಘಟನೆ ಖಂಡಿಸಿ ಬಹುಜನ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಹಥ್ರಾಸ್ ಘಟನೆ ಖಂಡಿಸಿ ಬಹುಜನ ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ
ಅಂಬೇಡ್ಕರ್ ವೃತ್ತದಲ್ಲಿ ಬಹುಜನ ದಲಿತ ಸಂಘಟನೆ ಕಾರ್ಯಕರ್ತರು, ಉತ್ತರಪ್ರದೇಶದ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬಹುಜನ ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ
ನಗರದ ಅಂಬೇಡ್ಕರ್ ವೃತ್ತದಲ್ಲಿ ಬಹುಜನ ದಲಿತ ಸಂಘಟನೆ ಕಾರ್ಯಕರ್ತರು, ಉತ್ತರಪ್ರದೇಶ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಯುವತಿಯ ಕುಟುಂಬಕ್ಕೆ ಶವ ನೀಡದೆ ಉತ್ತರಪ್ರದೇಶದ ಸರ್ಕಾರ ಅಂತ್ಯ ಸಂಸ್ಕಾರ ಮಾಡಿರೋದು ಖಂಡನೀಯ. ಯೋಗಿ ಸರ್ಕಾರದಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ಈ ಅತ್ಯಾಚಾರ ಪ್ರಕರಣವನ್ನು ದೇಶವ್ಯಾಪಿ ಖಂಡಿಸುತ್ತಿದ್ದಾರೆ. ಅತ್ಯಾಚಾರ ಪ್ರಕರಣದ ಹಿಂದೆ ಕಾಣದ ಕೈಗಳು ಕೆಸಲ ಮಾಡಿವೆ. ಅತ್ಯಾಚಾರವೆಸಗಿದ ಕಾಮುಕರಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.