ವಿಜಯಪುರ : ಇಂದು ಕೊರೊನಾ ರೋಗಿಗೆ ಬಳಸುವ ಪಿಪಿಇ ಕಿಟ್‌ನ ಯಾರೋ ಮುಳ್ಳುಗಂಟಿಯಲ್ಲಿ ಎಸೆದು ಹೋಗಿದ್ದಾರೆ. ಈ ವಿಷಯನ್ನು ಜಿಲ್ಲಾಡಳಿತ ಸಹ ಗಂಭೀರವಾಗಿ ಪರಿಗಣಿಸಿದೆ.
ಮುಳ್ಳುಗಂಟಿಯಲ್ಲಿ ಪಿಪಿಇ ಕಿಟ್ ಪತ್ತೆ ನಗರದ ಶಾಂತಿನಗರದ ಸರ್ಕಾರಿ ಆಸ್ಪತ್ರೆಯ ರಸ್ತೆ ಬದಿಯ ಮುಳ್ಳುಗಂಟಿಯಲ್ಲಿ ನರ್ಸ್ಗಳು ಕೊರೊನಾ ರೋಗಿ ಚಿಕಿತ್ಸೆಗೆ ಬಳಸುವ ಪಿಪಿಇ ಕಿಟ್‌ನ ಯಾರೋ ದುರ್ಷ್ಕಮಿಗಳು ಎಸೆದು ಹೋಗಿದ್ದು, ಇದು ಕೆಲ ಗಂಟೆ ಈ ಭಾಗದ ಜನರಲ್ಲಿ ಆತಂಕ ಮೂಡಿಸಿತ್ತು. ಆಸ್ಪತ್ರೆಯಲ್ಲಿ ಕೊರೊನಾ ಸೊಂಕಿತರನ್ನು ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಿ ನಂತರ ಆ ಪಿಪಿಇ ಕಿಟ್ ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ.
ಮುಳ್ಳುಕಂಟಿಯಲ್ಲಿ ಪಿಪಿಇ ಕಿಟ್ ಪತ್ತೆ.. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತ ಜಿಲ್ಲಾಡಳಿತ ತಕ್ಷಣ ಘಟನೆಗೆ ಕಾರಣರಾದವರನ್ನು ಪತ್ತೆ ಹಚ್ಚುವ ಕೆಲಸಕ್ಕೆ ಮುಂದಾಗಿದ್ದಾರೆ. ಪಿಪಿಇ ಕಿಟ್ ಯಾವ ಆಸ್ಪತ್ರೆಯಿಂದ ಬಂದಿದೆ. ಅದನ್ನು ಬಳಕೆ ಮಾಡಿದ ಮೇಲೆ ನಿಯಮಾವಳಿ ಪ್ರಕಾರ ನಾಶಪಡಿಸಿಲ್ಲ ಏಕೆ ಎನ್ನುವುದನ್ನು ತನಿಖೆ ನಡೆಸಲು ಜಿಲ್ಲಾಸ್ಪತ್ರೆ ಆರೋಗ್ಯ ಇಲಾಖೆ ಅಧೀಕ್ಷಕರಿಗೆ ಸೂಚನೆ ನೀಡಿದೆ. ಯಾರೇ ಆಗಲಿ ಈ ಕೃತ್ಯ ಎಸಗಿದವರ ಮೇಲೆ ಕ್ರಮ ಕೈಗೊಳ್ಳಲು ಡಿಸಿ ವೈ ಎಸ್ ಪಾಟೀಲ್ ಸೂಚನೆ ನೀಡಿದ್ದಾರೆ.
ಇಂತಹ ಆತಂಕದ ಪರಿಸ್ಥಿತಿಯಲ್ಲಿ ಜನತೆ ಮೊದಲೇ ಭಯ ಭೀತರಾಗಿದ್ದಾರೆ. ಕೊರೊನಾ ವೈರಸ್ ವಿಷಯಕ್ಕೆ ಸಂಬಂಧಿಸಿದ ಯಾವುದೇ ವಸ್ತು ಕಂಡರು ಆತಂಕಗೊಳ್ಳುತ್ತಿದ್ದಾರೆ. ಈ ವೇಳೆ ಕೆಲವರು ಈ ರೀತಿ ಕೊರೊನಾ ಸಂಬಂಧಿತ ವಸ್ತು ರಸ್ತೆಯಲ್ಲಿ ಬಿಸಾಕಿರುವುದು ಭಯದ ವಾತಾವರಣ ಮತ್ತಷ್ಟು ಸೃಷ್ಟಿ ಮಾಡಿದಂತಾಗಿದೆ.