ವಿಜಯಪುರ : ಕಳೆದ ಐದಾರು ದಿನಗಳಲ್ಲಿ ಲಾಕ್ಡೌನ್ ಉಲ್ಲಂಘಿಸಿ ರಸ್ತೆಯಲ್ಲಿ ಬೈಕ್ ಸಂಚಾರ ನಡೆಸಿದ 900ಕ್ಕೂ ಅಧಿಕ ಬೈಕ್‌ಗಳನ್ನ ಜಿಲ್ಲೆಯಲ್ಲಿ ಸೀಜ್ ಮಾಡಲಾಗಿದೆ ಎಂದು ಎಸ್ಪಿ ಅನುಪಮ್ ಅಗರವಾಲ್ ಮಾಹಿತಿ ಹಂಚಿಕೊಂಡರು.
ಜಿಲ್ಲೆಯಲ್ಲಿ 900ಕ್ಕೂ ಹೆಚ್ಚು ಅಧಿಕ ಬೈಕ್ಗಳು ಪೊಲೀಸ್ ವಶಕ್ಕೆ
ಅನಾವಶ್ಯಕವಾಗಿ ರಸ್ತೆ ಬೈಕ್ ಓಡಿಸಬೇಡಿ ಎಂದು ಆದ್ರೂ ಕೆಲವು ಜನರು ಲಾಕ್ಡೌನ್ ಆದೇಶ ಧಿಕ್ಕರಿಸಿ ಬೀದಿಯಲ್ಲಿ ಓಡಾತ್ತಿದ್ದರು. ಅಂತಹವರನ್ನ ಗುರುತಿಸಿ ಪೊಲೀಸ್ ಇಲಾಖೆ ಬೈಕ್ ಸೀಜ್ ಮಾಡಲಾಗಿದೆ.
ಕಳೆದ ಹಲವು ದಿನಗಳಿಂದ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿದಿಂದ ಸಾರ್ವಜನಿಕರಿಗೆ ಮನವಿ ಮಾಡಲಾಗಿತ್ತು. ಯಾರೂ ಅನಾವಶ್ಯಕವಾಗಿ ರಸ್ತೆ ಬೈಕ್ ಓಡಿಸಬೇಡಿ ಎಂದು ಆದ್ರೂ ಕೆಲವು ಜನರು ಲಾಕ್ಡೌನ್ ಆದೇಶ ಧಿಕ್ಕರಿಸಿ ಬೀದಿಯಲ್ಲಿ ಓಡಾತ್ತಿದ್ದರು. ಅಂತಹವರನ್ನ ಗುರುತಿಸಿ ಪೊಲೀಸ್ ಇಲಾಖೆ ಬೈಕ್ ಸೀಜ್ ಮಾಡಲಾಗಿದೆ. ಇನ್ನೂ ಬೈಕ್ ಸೀಜ್ ಕಾರ್ಯಾಚರಣೆ ಮುಂದುವರೆದಿದೆ. ಲಾಕ್ಡೌನ್ ಮುಗಿಯುವರಿಗೂ ಯಾವುದೇ ವಾಹನಗಳನ್ನ ಮರಳಿ ಕೊಡುವುದಿಲ್ಲ ಎಂದು ಎಸ್ಪಿ ಅನುಪಮ್ ಹೇಳಿದ್ರು.
ಇನ್ನೂ ಕೇಂದ್ರ ಬಸ್ ನಿಲ್ದಾಣ, ಗಾಂಧಿ ವೃತ್ತ, ಸ್ಟೇಷನ್ ರಸ್ತೆ ಸೇರಿದಂತೆ ನಗರದ ಹಲವು ಭಾಗಗಳಲ್ಲಿ ಸಾರ್ವಜನಿಕರ ಬೈಕ್‌ಗಳನ್ನ ಪೊಲೀಸರು ತಪಾಸಣೆ ಮಾಡುತ್ತಿದ್ದಾರೆ. ವಿಜಯಪುರ ನಗರದಲ್ಲಿ ಗಾಂಧಿ ಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅನಾವಶ್ಯಕವಾಗಿ ಓಡಾಡುತ್ತಿರುವವರ ಬೈಕ್ ವಶಕ್ಕೆ ಪಡೆದು ಗಾಂಧಿ ಚೌಕ್ ಪೊಲೀಸ್ ಠಾಣಾ ಆವರಣದಲ್ಲಿ ನಿಲ್ಲಿಸಿರುವ ದೃಶ್ಯಗಳು ಕಂಡು ಬರ್ತಿವೆ.