ಕರ್ನಾಟಕ

karnataka

ETV Bharat / state

ಪಡಿತರ ಆಹಾರ ಧಾನ್ಯ ವಿತರಿಸುವಾಗ ಹಣ ಪಡೆದರೆ ಲೈಸನ್ಸ್ ರದ್ದು: ಶಾಸಕ ಪಾಟೀಲ ನಡಹಳ್ಳಿ - ಕೊರೊನಾ ವೈರಸ್ ಭೀತಿ

ಲಾಕ್ ಡೌನ್ ಅವಧಿಯಲ್ಲಿ ಸರ್ಕಾರ ಕೊಟ್ಟಿರುವ ಅಕ್ಕಿ ಹಾಗೂ ಬೇಳೆಯನ್ನು ಉಚಿತವಾಗಿ ವಿತರಣೆ ಮಾಡದೆ ಹಣ ವಸೂಲಿ ಮಾಡಿದ್ದು ಕಂಡು ಬಂದರೆ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದ್ದಾರೆ.

mla
mla

By

Published : May 2, 2020, 1:38 PM IST

ಮುದ್ದೇಬಿಹಾಳ (ವಿಜಯಪುರ): ತಾಳಿಕೋಟಿ ಹಾಗೂ ಮುದ್ದೇಬಿಹಾಳ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಪಡಿತರ ಅಂಗಡಿಕಾರರು ಬಡವರ ಮನೆಗೆ ತೆರಳಿ ಪಡಿತರ ಆಹಾರ ಧಾನ್ಯ ವಿತರಣೆಗೆ ಕ್ರಮ ಕೈಗೊಳ್ಳುವಂತೆ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಸೂಚಿಸಿದ್ದಾರೆ.

ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ದಾಸೋಹ ನಿವಾಸದ ಆವರಣದಲ್ಲಿ ಮತಕ್ಷೇತ್ರದ ಎರಡು ತಾಲೂಕುಗಳ ಪಡಿತರ ಅಂಗಡಿಕಾರರ ಸಭೆಯಲ್ಲಿ ಅವರು ಮಾತನಾಡಿದರು.

ಬಡವರ ಮನೆ ಮನೆಗೆ ತೆರಳಿ ಆಹಾರ ಧಾನ್ಯ ವಿತರಣೆಗೆ ಕ್ರಮ ಕೈಗೊಂಡರೆ ಕೊರೊನಾ ವೈರಸ್ ಭೀತಿ ಇರುವುದಿಲ್ಲ. ಇಲ್ಲದಿದ್ದರೆ ಅಂಗಡಿಯ ಮುಂದೆ ಜನಜಂಗುಳಿ ,ಹಣ ವಸೂಲಿ, ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದು, ಪಡಿತರ ಆಹಾರ ಧಾನ್ಯ ವಿತರಣೆಯಲ್ಲಿ ಕಡಿತಗೊಳಿಸುವ ಆರೋಪಗಳನ್ನು ಎದುರಿಸಬೇಕಾಗುತ್ತದೆ. ಇದಕ್ಕೆ ಆಸ್ಪದ ನೀಡದಂತೆ ಶಾಸಕರು ತಿಳಿಸಿದರು.

ಪಡಿತರ ಅಂಗಡಿಕಾರರ ಸಭೆ

ತಹಶೀಲ್ದಾರ್ ಜಿ.ಎಸ್.ಮಳಗಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನ ಗೌಡ ಬಿರಾದಾರ ಕವಡಿಮಟ್ಟಿ, ಆಹಾರ ಇಲಾಖೆಯ ಅಧಿಕಾರಿಗಳಾದ ಎ.ಬಿ.ಹಿರೇಮಠ, ಎ.ವೈ.ದಳವಾಯಿ, ಮುಖಂಡರಾದ ಮಲಕೇಂದ್ರಗೌಡ ಪಾಟೀಲ ಮತ್ತಿತರರು ಇದ್ದರು.

ಹಣ ಪಡೆದುಕೊಂಡರೆ ನಿರ್ದಾಕ್ಷಿಣ್ಯ ಕ್ರಮ ನಿಶ್ಚಿತ:
ಲಾಕ್ ಡೌನ್ ಅವಧಿಯಲ್ಲಿ ಸರಕಾರ ಕೊಟ್ಟಿರುವ ಅಕ್ಕಿ ಹಾಗೂ ಬೇಳೆಯನ್ನು ಉಚಿತವಾಗಿ ವಿತರಣೆ ಮಾಡದೇ ಹಣ ವಸೂಲಿ ಮಾಡಿದ್ದು ಕಂಡು ಬಂದರೆ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು. ಅದು ಸ್ವಪಕ್ಷದವರೇ ಇರಲಿ, ವಿರೋಧ ಪಕ್ಷದವರಿರುವ ಅಂಗಡಿಕಾರರೇ ಇರಲಿ ಇದರಲ್ಲಿ ಯಾರಿಗೂ ಕ್ಷಮೆ ಎಂಬುದಿರುವುದಿಲ್ಲ ಎಂದು ಶಾಸಕರು ಸ್ಪಷ್ಪಪಡಿಸಿದರು.

ತಾಳಿಕೋಟಿ ಪಟ್ಟಣದ ಪಡಿತರ ಅಂಗಡಿಕಾರರೊಬ್ಬರು ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದು ಕಂಡು ಬಂದಿದ್ದು, ಎಷ್ಟು ಹೇಳಿದರೂ ಕೇಳಿಲ್ಲ ಎಂದು ಅಲ್ಲಿನ ತಹಸೀಲ್ದಾರ್ ಅನಿಲಕುಮಾರ ಢವಳಗಿ ಅಂಗಡಿಕಾರರ ವಿರುದ್ಧ ಹರಿಹಾಯ್ದರು. ಶಾಸಕರು ಹೇಳಿದಂತೆ ಮನೆ ಮನೆಗೆ ಆಹಾರ ಧಾನ್ಯ ಹಂಚಿಕೆಗೆ ಪ್ರಯತ್ನಿಸುವಂತೆ ಮುದ್ದೇಬಿಹಾಳ ಹಾಗೂ ತಾಳಿಕೋಟೆ ತಹಸೀಲ್ದಾರರು ಅಂಗಡಿಕಾರರಿಗೆ ತಿಳಿಸಿದರು.

ABOUT THE AUTHOR

...view details