ಕರ್ನಾಟಕ

karnataka

ETV Bharat / state

ಐತಿಹಾಸಿಕ ಸ್ಮಾರಕಗಳ ವೀಕ್ಷಣೆ ಮಾಡಿದ ಸಚಿವ ಹೆಚ್ ಕೆ ಪಾಟೀಲ್; ವಿದೇಶಿ ಪ್ರಜೆಯ ಕನ್ನಡ ಪ್ರೇಮಕ್ಕೆ ಫಿದಾ

ನಮ್ಮ ಸ್ಮಾರಕಗಳ ದರ್ಶನ ಹಾಗೂ ಸಂರಕ್ಷಣೆಗಾಗಿ ಪ್ರವಾಸ ಕಾರ್ಯಕ್ರಮದ ಅಂಗವಾಗಿ ವಿಜಯಪುರ ಜಿಲ್ಲೆಗೆ ಆಗಮಿಸಿದ್ದ ಪ್ರವಾಸೋಧ್ಯಮ ಇಲಾಖೆ ಸಚಿವ ಹೆಚ್ ಕೆ ಪಾಟೀಲ್, ಐತಿಹಾಸಿಕ ಸ್ಮಾರಕಗಳ ದರ್ಶನ ಪಡೆದರು.

Minister HK Patil inspected historical monuments
Minister HK Patil inspected historical monuments

By ETV Bharat Karnataka Team

Published : Nov 21, 2023, 11:00 PM IST

ವಿಜಯಪುರ: ಜಿಲ್ಲೆಯಲ್ಲಿ ನೂರಾರು ಐತಿಹಾಸಿಕ ಸ್ಮಾರಕಗಳಿದ್ದು ಅದರಲ್ಲಿ ಕೆಲವು ಅಲಕ್ಷ್ಯಕ್ಕೀಡಾಗಿವೆ ಎಂಬ ಕೂಗು ಈ ಭಾಗದ ಜನರಲ್ಲಿದೆ. ಇದನ್ನು ತೊಡೆದುಹಾಕುವ ನಿಟ್ಟಿನಲ್ಲಿ ಕರ್ನಾಟಕದ ಸ್ಮಾರಕಗಳ ದರ್ಶನ ಹಾಗೂ ಸಂರಕ್ಷಣಾ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಪ್ರವಾಸೋಧ್ಯಮ ಇಲಾಖೆ ಸಚಿವ ಹೆಚ್ ಕೆ ಪಾಟೀಲ್ ಹೇಳಿದರು.

ಐತಿಹಾಸಿಕ ಸ್ಮಾರಕಗಳ ವೀಕ್ಷಣೆ

ಕಾರ್ಯಕ್ರಮದ ಅಂಗವಾಗಿ ಮಂಗಳವಾರ ಜಿಲ್ಲೆಗೆ ಆಗಮಿಸಿದ್ದ ಸಚಿವರು, ಸ್ಥಳೀಯ ಅಧಿಕಾರಿಗಳೊಂದಿಗೆ ಐತಿಹಾಸಿಕ ಸ್ಮಾರಕಗಳ ದರ್ಶನ ಪಡೆದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೀದರ್, ಕಲಬುರಗಿ, ಯಾದಗಿರಿ, ಬಾಗಲಕೋಟೆ ಜಿಲ್ಲೆಯಲ್ಲಿ ಪ್ರವಾಸ ಮಾಡಲಾಗಿದೆ. ಸ್ಮಾರಕಗಳ ದರ್ಶನ ಕೂಡ ಮಾಡಲಾಗುತ್ತಿದೆ. ನಾಳೆ ಇತಿಹಾಸದ ಭಾಗಗಳನ್ನು ಸ್ಮಾರಕಗಳ ನೈಜತೆ ಹಾಗೂ ಮಾಡಬಹುದಾದ ಕೆಲಸ ಮತ್ತು ಕಾರ್ಯಗಳ ಬಗ್ಗೆ ಚರ್ಚಿಸಲಾಗುವುದು ಎಂದರು.

ಐತಿಹಾಸಿಕ ಸ್ಮಾರಕಗಳ ವೀಕ್ಷಣೆ

ಇದೇ ವೇಳೆ, ಸಚಿವರು ಹಾಗೂ ಅಮೆರಿಕದ ಪ್ರಜೆ ರಿಚರ್ಡ್ ಜೊತೆ ಕನ್ನಡದಲ್ಲೇ ಸಂಭಾಷಣೆ ನಡೆಸಿದ ಸ್ವಾರಸ್ಯಕರ ಪ್ರಸಂಗ ಕೂಡ ಗುಮ್ಮಟನಗರಿ ನಡೆಯಿತು. ವಿದೇಶಿ ಪ್ರಜೆಯ ಕನ್ನಡ ಪ್ರೀತಿ ಕಂಡು ಸಚಿವರು, ಬೆಳಗ್ಗೆ ತಮ್ಮ ಜೊತೆ ಉಪಹಾರಕ್ಕೂ ಆಹ್ವಾನಿಸಿದರು. ಈ ಭೇಟಿ ವೇಳೆ ಐತಿಹಾಸಿಕ ಸ್ಮಾರಕಗಳ ಬಗ್ಗೆ ಅವರಿಂದ ಅಭಿಪ್ರಾಯ ಪಡೆದರು.

ಐತಿಹಾಸಿಕ ಸ್ಮಾರಕಗಳ ವೀಕ್ಷಣೆ

ಇದಕ್ಕೆ ಕನ್ನಡದಲ್ಲೇ ಉತ್ತರ ನೀಡಿದ ರಿಚರ್ಡ್, ವಿಜಯಪುರ, ಮೈಸೂರು, ರಾಯಚೂರು ಹಾಗೂ ಕರ್ನಾಟಕದ ಬಗ್ಗೆ ತಮ್ಮ ಅನಿಸಿಕೆ ತಿಳಿಸಿದರು. ಅಮೆರಿಕದ ಪ್ರಜೆಯ ಕನ್ನಡ ಪ್ರೇಮಕಂಡು ಸಂತಸ ವ್ಯಕ್ತಪಡಿಸಿದ ಸಚಿವರು, ನಾಳೆ ಬೆಳಗ್ಗೆ ತಮ್ಮ ಜೊತೆಗೆ ಉಪಹಾರಕ್ಕೆ ಬರುವಂತೆ ಆಹ್ವಾನ ನೀಡಿದರು.

ಐತಿಹಾಸಿಕ ಸ್ಮಾರಕಗಳ ವೀಕ್ಷಣೆ

ಲೋಕಸಭಾ ಚುನಾವಣೆ ಬಳಿಕ ಸಿಎಂ ಬದಲಾವಣೆ ಸೇರಿ ಹಲವು ಬದಲಾವಣೆಗಳಾಗುತ್ತವೆ ಎಂಬ ಪ್ರತಿಪಕ್ಷದ ನಾಯಕ ಆರ್ ಆಶೋಕ ಹೇಳಿಕೆಗೆ, ಉದ್ಯೋಗ ಇಲ್ಲದವರು ಮತ್ತು ಪ್ರಚಾರ ಬೇಕಾದವರು ಸಿಎಂ ಪದದ ಬಗ್ಗೆ ಚರ್ಚೆ ಮಾಡುತ್ತಾರೆ. ಅದರಲ್ಲಿ ಯಾವುದೇ ಹುರುಳಿಲ್ಲ. ಜನರ ಹಾಗೂ ಮಾಧ್ಯಮದ ಸಮಯ ಹಾಳು ಮಾಡುವುದು ಸರಿಯಲ್ಲ ಎಂದರು.

ಜಿಲ್ಲಾಧಿಕಾರಿಗಳ ಕಚೇರಿ, ಜಿಲ್ಲಾ ಖಜಾನೆ ಇಲಾಖೆ, ಗಗನ ಮಹಲ್, ಆನಂದ ಮಹಲ್, ಆದಿಲ್ ಶಾಹಿ ದರ್ಬಾರ್ ಹಾಲ್ ಆಡಳಿತಾತ್ಮಕ ಸಭಾಂಗಣಗಳು, ಶೇಖರಣಾ ಕಚೇರಿಗಳು, 7 ಅಂತಸ್ತಿನ ಆದಿಲ್ ಶಾಹಿ ಅರಮನೆ, ಧ್ವನಿ ಮತ್ತು ಸಂಗೀತವನ್ನು ಮಾಡಬಹುದಾದ ಆಯತಾಕಾರದ ಸ್ಮಾರಕ ಹಾಗೂ ಶ್ರೀ ನರಸಿಂಹ ಸರಸ್ವತಿ ದೇವಸ್ಥಾನ ಸೇರಿದಂತೆ ಹಲವು ಜಿಲ್ಲೆಯ ಪ್ರಸಿದ್ಧ ಸ್ಮಾರಕಗಳ ವೀಕ್ಷಣೆ ಮಾಡಿದರು. ಅಧಿಕಾರಿಗಳು ಸಚಿವರಿಗೆ ಸಾಥ್​ ನೀಡಿದರು.

ಇದನ್ನೂ ಓದಿ:ಐಹೊಳೆ ಪ್ರಾಚೀನ ಸ್ಮಾರಕಗಳಲ್ಲಿ ವಾಸಿಸುತ್ತಿರುವ ಕುಟುಂಬಗಳ ಸ್ಥಳಾಂತರಕ್ಕೆ ಕ್ರಮ: ಸಚಿವ ಎಚ್.ಕೆ.ಪಾಟೀಲ್

ABOUT THE AUTHOR

...view details