ವಿಜಯಪುರ: ವಿವಾಹೇತರ ಸಂಬಂಧದ ಸಂಶಯ ಹಾಗೂ ಹಳೆಯ ವೈಷಮ್ಯ ಹಿನ್ನೆಲೆಯಲ್ಲಿ ವ್ಯಕ್ತಿವೋರ್ವನನ್ನು ದುರ್ಷ್ಕಮಿಗಳು ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಗರದ ಇಟ್ಟಂಗಿಹಾಳ ರಸ್ತೆಯ ತೋಟದ ಮನೆಯಲ್ಲಿ ನಡೆದಿದೆ.
ವಿಜಯಪುರದಲ್ಲಿ ವ್ಯಕ್ತಿಯ ಬರ್ಬರ ಕೊಲೆ.. ವಿವಾಹೇತರ ಸಂಬಂಧ ಶಂಕೆ - ತಲೆ ಮೇಲೆ ಕಲ್ಲು ಹಾಕಿ ಕೊಲೆ
ವಿಜಯಪುರ ಜಿಲ್ಲೆಯಲ್ಲಿ ವ್ಯಕ್ತಿಯ ಬರ್ಬರ ಕೊಲೆಯಾಗಿದೆ. ಇಟ್ಟಂಗಿಹಾಳ ರಸ್ತೆಯ ತೋಟದ ವಸತಿಯಲ್ಲಿ ವ್ಯಕ್ತಿವೋರ್ವನ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಿ ಆರೋಪಿಗಳು ಪರಾರಿಯಾಗಿದ್ದಾರೆ.
ವ್ಯಕ್ತಿಯ ಬರ್ಬರ ಕೊಲೆ
ದಸ್ತಗಿರಿಸಾಬ ಗುಲಾಮಸಾಬ ಮಮದಾಪುರ(45) ಕೊಲೆಗೀಡಾದ ವ್ಯಕ್ತಿ. ಈ ಹಿಂದೆ ಇಟ್ಟಂಗಿಹಾಳ ರಸ್ತೆಯ ಆತನ ತೋಟದ ಮನೆಯಲ್ಲಿದ್ದಾಗ ಸಂಬಂಧಿಕರ ಮಧ್ಯೆ ಜಗಳವಾಗಿತ್ತು. ಹಾಗೂ ಈತನ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿರುವ ಆರೋಪಿಯೊಬ್ಬನ ಪತ್ನಿ ಜತೆ ಕೊಲೆಯಾದ ದಸ್ತಗಿರಿಸಾಬ ವಿವಾಹೇತರ ಸಂಬಂಧ ಹೊಂದಿರುವ ಕುರಿತು ಸಂಶಯ ವ್ಯಕ್ತವಾಗಿತ್ತು.
ಈ ಹಿನ್ನೆಲೆ ರಾತ್ರಿ ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿರಬಹುದು ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಆದರ್ಶನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.