ಮುದ್ದೇಬಿಹಾಳ : ತಾಲೂಕಿನ ಕಾಳಗಿ ತಾಂಡಾದಲ್ಲಿ ಕೊರೊನಾ ಪಾಸಿಟಿವ್ ಕೇಸ್ ಕಂಡು ಬಂದಿರುವ ಹಿನ್ನೆಲೆಯಲ್ಲಿ ತಾಂಡಾವನ್ನು ಸಂಪೂರ್ಣ ಸೀಲ್‌ಡೌನ್ ಮಾಡಲಾಗಿದ್ದು, ಗ್ರಾಮಸ್ಥರಿಗೆ ಗ್ರಾ.ಪಂ. ವತಿಯಿಂದ ಪಡಿತರ ಆಹಾರ ಧಾನ್ಯಗಳನ್ನು ವಿತರಿಸಲಾಗಿದೆ.
ಕಾಳಗಿ ತಾಂಡಾ ಸೀಲ್ ಡೌನ್... ಗ್ರಾಮಸ್ಥರಿಗೆ ಅಗತ್ಯ ವಸ್ತುಗಳನ್ನು ಪೂರೈಸಿದ ಗ್ರಾ.ಪಂ!
ಕಾಳಗಿ ತಾಂಡಾದಲ್ಲಿ ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆ, ತಾಂಡಾವನ್ನು ಸಂಪೂರ್ಣ ಸೀಲ್‌ಡೌನ್ ಮಾಡಲಾಗಿದೆ. ಹಾಗಾಗಿ ತಾಂಡಾದ ಜನರು ಹೊರಬರಬಾರದು ಎನ್ನುವ ನಿಟ್ಟಿನಲ್ಲಿ ಗ್ರಾಮಸ್ಥರಿಗೆ ಗ್ರಾ.ಪಂ ವತಿಯಿಂದ ಪಡಿತರ ಆಹಾರ ಧಾನ್ಯಗಳನ್ನು ವಿತರಿಸಲಾಗಿದೆ.
Kalagi village seal down
ಗ್ರಾಮಸ್ಥರಿಗೆ ಕಾಳಗಿ ಗ್ರಾಮ ಪಂಚಾಯತ್ ವತಿಯಿಂದ ಸಿಬ್ಬಂದಿ ಮನೆ-ಮನೆಗೆ ಭೇಟಿ ನೀಡಿ ಪಡಿತರ ವಿತರಿಸಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಗ್ರಾ.ಪಂ ಪಿಡಿಓ ಖೂಭಾಸಿಂಗ್ ಜಾಧವ್, ತಾಂಡಾದ ನಿವಾಸಿಗಳು ಮನೆ ಬಿಟ್ಟು ಹೊರ ಬರಬಾರದು. ಅಗತ್ಯ ವಸ್ತುಗಳು ಬೇಕಾದರೆ ಗ್ರಾ.ಪಂ ಸಿಬ್ಬಂದಿಯನ್ನು ಸಂಪರ್ಕಿಸುವಂತೆ ತಿಳಿಸಿದರು. ಈ ವೇಳೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಾವಿದ್ ಇನಾಮದಾರ್, ಗೋಪಾಲ್ ಚವ್ಹಾಣ, ಸತೀಶ್ ರಾಥೋಡ್ ಹಾಗೂ ಪಂಚಾಯತ್ ಸಿಬ್ಬಂದಿ ಉಪಸ್ಥಿತರಿದ್ದರು.