ಕರ್ನಾಟಕ

karnataka

ETV Bharat / state

ಇಂಡಿ ಜಿಲ್ಲಾ ಕೇಂದ್ರ ಮಾಡದಿದ್ದರೆ ರಾಜಕೀಯ ನಿವೃತ್ತಿ: ಶಾಸಕ ಪಾಟೀಲ್​ ಘೋಷಣೆ

ಇಂಡಿ ಮತಕ್ಷೇತ್ರವನ್ನು ಜಿಲ್ಲಾ ಕೇಂದ್ರ ಮಾಡದಿದ್ದರೆ, ನಾನು ರಾಜಕೀಯ ನಿವೃತ್ತಿ ಘೋಷಿಸುತ್ತೇನೆ ಎಂದು ಇಂಡಿ ಕಾಂಗ್ರೆಸ್ ಶಾಸಕ ಯಶವಂತ ರಾಯಗೌಡ ಪಾಟೀಲ್​​ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Indi Congress MLA Yashwant Rayagowda Patil
ಇಂಡಿ ಕಾಂಗ್ರೆಸ್ ಶಾಸಕ ಯಶವಂತ ರಾಯಗೌಡ ಪಾಟೀಲ ಮಾತನಾಡಿದರು.

By

Published : Feb 8, 2023, 5:05 PM IST

ಇಂಡಿ ಕಾಂಗ್ರೆಸ್ ಶಾಸಕ ಯಶವಂತ ರಾಯಗೌಡ ಪಾಟೀಲ ಮಾತನಾಡಿದರು.

ವಿಜಯಪುರ:ರಾಜಕೀಯ ವಲಯದಲ್ಲಿ ಮತ್ತೊಂದು ಸಂಚಲನ ಮೂಡಿಸಿದೆ. ''ಇಂಡಿ ಮತಕ್ಷೇತ್ರವನ್ನು ಜಿಲ್ಲಾ ಕೇಂದ್ರ ಮಾಡದಿದ್ದರೆ, ತಾವು ರಾಜಕೀಯ ನಿವೃತ್ತಿ ಘೋಷಿಸುತ್ತೇನೆ'' ಎಂದು ಇಂಡಿ ಕಾಂಗ್ರೆಸ್ ಶಾಸಕ ಯಶವಂತ ರಾಯಗೌಡ ಪಾಟೀಲ್​ ಹೇಳಿದ್ದಾರೆ.

ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ರಾಜಕೀಯ ವ್ಯಕ್ತಿಗಳಿಗೆ ಬದ್ಧತೆ ಇರಬೇಕು. ರಾಜಕಾರಣ ಮಾಡುವಾಗ ಅವರವರ ಪಕ್ಷಗಳ ಪರವಾಗಿ ನಿಲ್ಲುವುದು ತಪ್ಪಲ್ಲ. ಆದರೆ, ಜಿಲ್ಲೆಯ ಅಭಿವೃದ್ಧಿ ವಿಷಯ ಬಂದಾಗ ಎಲ್ಲ ಪಕ್ಷದ ನಾಯಕರು ಒಗ್ಗೂಡಿ ನಮಗೆ ದೊರೆಯುವ ಸೌಲಭ್ಯ ಪಡೆಯಲೇಬೇಕು. ಇಲ್ಲವಾದರೆ ಜನಪ್ರತಿನಿಧಿಯಾಗಿ ಇರುವುದರಲ್ಲಿ ಅರ್ಥವೇ ಇಲ್ಲ'' ಎಂದು ಅಸಮಾಧಾನ ವ್ಯಕ್ತಪಡಿಸಿದರು.

''ಒಂದೇ ಪಕ್ಷದಲ್ಲಿ ಇದ್ದುಕೊಂಡು ರಾಜಕೀಯ ಮಾಡಿದ್ದೇನೆ. ಸೌಲಭ್ಯ ಪಡೆಯುವ ವಿಚಾರ ಬಂದರೆ, ಪಕ್ಷವನ್ನು ನೋಡದೆ, ಬೇರೆ ಪಕ್ಷಕ್ಕೆ ಹೋಗಲು ತಾವು‌ ಹಿಂಜರಿಯುವದಿಲ್ಲ ಎಂದು ಖಡಕ್​ ಆಗಿ ತಮ್ಮ ಪಕ್ಷದ ನಾಯಕರಿಗೆ ಪರೋಕ್ಷವಾಗಿ ಸವಾಲು ಹಾಕಿದರು.

ಕೃಷ್ಣಾ ಮೇಲ್ದಂಡೆ ಯೋಜನೆ:''2013ರಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಚುನಾವಣೆ ಎದುರಿಸುವ ವೇಳೆ ಕೃಷ್ಣಾ ಮೇಲ್ದಂಡೆ ಯೋಜನೆಗೆ ಪ್ರತಿವರ್ಷ 50ಸಾವಿರ ಕೋಟಿ ರೂ. ನೀಡುವುದಾಗಿ ಜನತೆಗೆ ಭರವಸೆ ಕೊಟ್ಟಿದ್ದರು. ಕೂಡಲಸಂಗಮದವರೆಗೆ ಪಾದಯಾತ್ರೆ ಮಾಡಿದ್ದೆವು. ಅದರಂತೆ ಅಧಿಕಾರ ಬಂದ ಮೇಲೆ ನುಡಿದಂತೆ ನಡೆದಿದ್ದೇವೆ'' ಎಂದರು.

ಮೂಲ ಸೌಲಭ್ಯ ನೀಡಬೇಕು:ಇಂಡಿ ಕ್ಷೇತ್ರದ ಜನತೆಗೆ ಮೊದಲು ಮೂಲ ಸೌಲಭ್ಯ ದೊರೆಯಬೇಕು. ಬೇಕಾದರೆ ಒಂದು ವರ್ಷ ಜನಪ್ರಿಯ ಯೋಜನೆ ಘೋಷಣೆ ಮಾಡದೇ ಜನರ ಆಶೋತ್ತರದಂತೆ ಯೋಜನೆ ಮಾಡಬೇಕು. ಇಲ್ಲವಾದರೆ, ಇಲ್ಲಿ ಕುಳಿತುಕೊಳ್ಳುವ ನೈತಿಕತೆ ನಮಗಿಲ್ಲ'' ಎಂದು ಅವರು ಕಿಡಿಕಾರಿದರು.

ಇಂಡಿ ಜಿಲ್ಲೆ ಮಾಡಿಯೇ ತಿರುತ್ತೇನೆ:''ನಂಜುಂಡಪ್ಪ ವರದಿಯಂತೆ ಜನಸಂಖ್ಯೆ ಹಾಗೂ ತಾಲೂಕುಗಳ ಹೆಚ್ಚಾದಂತೆ, ಇಂಡಿ ತಾಲೂಕನ್ನು ಜಿಲ್ಲೆಯಾಗಿ ಮಾಡಬೇಕು ಎನ್ನುವ ಬೇಡಿಕೆ ಬಹಳ ವರ್ಷದಿಂದ ಇದೆ, ಅದನ್ನು ಮಾಡಿಯೇ ತಿರುತ್ತೇನೆ. ಸದ್ಯ ಇಂಡಿ ಕ್ಷೇತ್ರದ ಎಲ್ಲ ಪ್ರದೇಶಗಳಲ್ಲಿ ಅಭಿವೃದ್ಧಿ ಕಾಣುತ್ತಿದೆ. ಅದಕ್ಕೆ ಬರ ಪೀಡಿತ ತಾಲೂಕು ಎಂಬ ಹಣೆಪಟ್ಟಿ ಇತ್ತು. ಈಗ 24/7ನೀರು ಜನರಿಗೆ ಸಿಗುತ್ತಿದೆ.

ನೀಡಿದ ಭರವಸೆ ಈಡೇರಿಸುವವರಿಗೂ ಸುಮ್ಮನಿರಲ್ಲ:''ಜಿಲ್ಲಾ ಕೇಂದ್ರವಾದ ವಿಜಯಪುರ ಜಿಲ್ಲೆಯಲ್ಲಿ ಕುಡಿಯುವ ನೀರಿನ ಯೋಜನೆಯೂ ಅಷ್ಟಾಗಿ ಯಶಸ್ವಿಯಾಗಿಲ್ಲ, ಆದರೆ, ತಮ್ಮ ಕ್ಷೇತ್ರದಲ್ಲಿ‌ ಕೇವಲ ಮೂರು ವರ್ಷದಲ್ಲಿ ಕುಡಿಯುವ ನೀರಿನ ಯೋಜನೆ ಜಾರಿ ಮಾಡಲಾಗಿದೆ. ಇದರ ಜೊತೆ ಉತ್ತಮ ಬಸ್ ನಿಲ್ದಾಣ, ರಸ್ತೆಗಳು ಸೇರಿದಂತೆ ಎಲ್ಲ ರೀತಿಯ ಅಗತ್ಯ ಸೌಲಭ್ಯ ನೀಡಲಾಗಿದೆ. ನಮ್ಮ ಜನತೆಗೆ ಗೊತ್ತು ನಾನು ನೀಡಿದ ಭರವಸೆ ಈಡೇರಿಸುವವರಿಗೂ ಸುಮ್ಮನಿರಲ್ಲ'' ಎಂದರು.

ಕಾಂಗ್ರೆಸ್ ರಥಯಾತ್ರೆ :ಫೆ.11ರಂದು ಸಿದ್ದರಾಮಯ್ಯ ನೇತ್ವತೃದಲ್ಲಿ ವಿಜಯಪುರ ಜಿಲ್ಲೆಯ ಗಡಿಭಾಗದಲ್ಲಿ ಕಾಂಗ್ರೆಸ್ ರಥಯಾತ್ರೆ ನಡೆಯಲಿದೆ.‌ ಮುಂದೆ ಫೆ.21, 22ರಂದು ಮುದ್ದೇಬಿಹಾಳ ಹಾಗೂ ಬಾಗೇವಾಡಿ ಸೇರಿದಂತೆ ಬೇರೆ ಭಾಗಗಳಲ್ಲಿ ರಥಯಾತ್ರೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.

ಇದನ್ನೂ ಓದಿ:ಪತ್ರಕರ್ತರ ಸಮ್ನೇಳನ ರಾಜಕೀಯ ಚರ್ಚೆ ವೇದಿಕೆಯಲ್ಲ; ಕಾರಜೋಳಗೆ ಪರೋಕ್ಷವಾಗಿ ಟಾಂಗ್​ ನೀಡಿದ ಎಂಬಿ ಪಾಟೀಲ್​

ABOUT THE AUTHOR

...view details