ಕರ್ನಾಟಕ

karnataka

ETV Bharat / state

ವಿಜಯಪುರದಲ್ಲಿ ಹೈ ಮಾಸ್ಕ್ ಕಂಬ ಬಿದ್ದು ರೈಲು ಸಂಚಾರ ವ್ಯತ್ಯಯ

ಲಾರಿ ಡಿಕ್ಕಿ ಹೊಡೆದ ಪರಿಣಾಮ ರೈಲ್ವೆ ಹಳಿಗಳ ಮೇಲೆ ಹೈ ಮಾಸ್ಕ್ ವಿದ್ಯುತ್ ಕಂಬ ಬಿದ್ದಿದ್ದರಿಂದ ಸುಮಾರು ಮೂರು ಗಂಟೆಗಳ ಕಾಲ ಬಾಗಲಕೋಟೆ-ಮೈಸೂರು, ಸೋಲಾಪುರ-ಮೈಸೂರು, ಗದಗ-ಮುಂಬೈ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.

By

Published : Dec 11, 2020, 10:04 PM IST

High mask pole falls in Vijayapu
ಹೈ ಮಾಸ್ಕ್ ಕಂಬ ಬಿದ್ದು ರೈಲು ಸಂಚಾರ ಸ್ಥಗಿತ

ವಿಜಯಪುರ:ನಗರದ ಐಒಸಿ ಹಿಂಬದಿಯಲ್ಲಿರುವ ರೈಲ್ವೆ ಹಳಿಗಳ ಮೇಲೆ ಹೈ ಮಾಸ್ಕ್ ವಿದ್ಯುತ್ ಕಂಬ ಬಿದ್ದ ಪರಿಣಾಮ ಸುಮಾರು ಮೂರು ಗಂಟೆಗಳ ಕಾಲ ರೈಲು ಸಂಚಾರದಲ್ಲಿ ವ್ಯತ್ಯಯಗೊಂಡಿದೆ.

ಸಂಜೆ 6ಗಂಟೆ ಸುಮಾರಿಗೆ ಹೈ ಮಾಸ್ಕ್ ವಿದ್ಯುತ್ ಕಂಬಕ್ಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ನಡೆದಿದ್ದು, ವಿದ್ಯುತ್ ಇಲ್ಲದ ಕಾರಣ ಭಾರೀ ಅನಾಹುತ ತಪ್ಪಿದೆ. ಲಾರಿ ಚಾಲಕನ ಎಡವಟ್ಟಿನಿಂದ ಅವಘಡ ಸಂಭವಿಸಿದೆ ಎನ್ನಲಾಗಿದೆ.

ಕಂಬಕ್ಕೆ ಡಿಕ್ಕಿ ಹೊಡೆದಿರುವ ಲಾರಿ

ನಂತರ ಸಿಬ್ಬಂದಿ ಹೈ ಮಾಸ್ಕ್ ವಿದ್ಯುತ್ ಕಂಬ ತೆರವು ಮಾಡಿದ ಕಾರಣ ಮತ್ತೆ ರೈಲು‌ ಸಂಚಾರ ಆರಂಭಿಸಲಾಯಿತು. ಬಾಗಲಕೋಟೆ-ಮೈಸೂರು, ಸೋಲಾಪುರ-ಮೈಸೂರು, ಗದಗ-ಮುಂಬೈ ರೈಲು ಸಂಚಾರ ಸ್ಥಗಿತವಾಗಿತ್ತು.

ABOUT THE AUTHOR

...view details