ಕರ್ನಾಟಕ

karnataka

ಬಡ ರೈತರ ವಿಮಾ ಕಂತನ್ನು ಸರ್ಕಾರವೇ ಭರಿಸಲಿ: ರೈತ ಮುಖಂಡ ಡಾ. ಬಸವರಾಜ ಅಸ್ಕಿ

By

Published : Aug 16, 2020, 5:41 PM IST

Updated : Aug 16, 2020, 6:56 PM IST

ಕೊರೊನಾ ಲಾಕ್‌ಡೌನ್​ನಿಂದ ಮತ್ತು ವ್ಯಾಪಕ ಮಳೆಯಿಂದ ಅತಿವೃಷ್ಟಿಯ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರ ಬದುಕು ದುಸ್ತರವಾಗಿದೆ. ರಾಜ್ಯದ ಕೃಷಿ ಹಾಗೂ ತೋಟಗಾರಿಕಾ ಸಚಿವರು ಅನ್ನದಾತರ ನೆರವಿಗೆ ಬರಬೇಕು ಎಂದು ರೈತ ಮುಖಂಡ ಡಾ. ಬಸವರಾಜ ಅಸ್ಕಿ ಒತ್ತಾಯಿಸಿದ್ದಾರೆ.

ರೈತ ಮುಖಂಡ ಡಾ. ಬಸವರಾಜ ಅಸ್ಕಿ
ರೈತ ಮುಖಂಡ ಡಾ. ಬಸವರಾಜ ಅಸ್ಕಿ

ಮುದ್ದೇಬಿಹಾಳ (ವಿಜಯಪುರ) : ಸದ್ಯಕ್ಕೆ ವ್ಯಾಪಕ ಮಳೆಯಾಗುತ್ತಿದ್ದು, ಅತಿವೃಷ್ಟಿಯ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ಕೊರೊನಾ ವೈರಸ್​ನಿಂದ ರೈತ ತೊಂದರೆಯಲ್ಲಿ ಸಿಲುಕಿದ್ದು, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರೈತರ ನೆರವಿಗೆ ಧಾವಿಸಬೇಕು ಎಂದು ಕೊಣ್ಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ,ರೈತ ಮುಖಂಡ ಡಾ. ಬಸವರಾಜ ಅಸ್ಕಿ ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕಳೆದ ವರ್ಷ ಅತಿವೃಷ್ಟಿಯಿಂದ ತೊಂದರೆಗೆ ಸಿಲುಕಿ ನಷ್ಟ ಅನುಭವಿಸಿದರೆ, ಈ ವರ್ಷ ಕೊರೊನಾ ಲಾಕ್‌ಡೌನ್​ನಿಂದ ರೈತರ ಬದುಕು ದುಸ್ತರವಾಗಿದೆ. ರಾಜ್ಯದ ಕೃಷಿ ಹಾಗೂ ತೋಟಗಾರಿಕಾ ಸಚಿವರು ಅನ್ನದಾತರ ನೆರವಿಗೆ ಬರಬೇಕು ಎಂದು ಒತ್ತಾಯಿಸಿದ್ದಾರೆ.

ಬಡ ರೈತರ ವಿಮಾ ಕಂತನ್ನು ಸರ್ಕಾರವೇ ಭರಿಸಲಿ: ರೈತ ಮುಖಂಡ ಡಾ. ಬಸವರಾಜ ಅಸ್ಕಿ

ತೋಟಗಾರಿಕೆ ಬೆಳೆ, ಕೃಷಿ ಬೆಳೆಗಳು ನಾಶವಾಗುವ ಹಂತದಲ್ಲಿ ಬಂದು ನಿಂತಿವೆ. ಫಸಲ್ ಭೀಮಾ ಯೋಜನೆಯ ದಿನಾಂಕ ವಿಸ್ತರಣೆ ಮಾಡಬೇಕು. ಅಸಹಾಯಕ ರೈತರ ವಿಮಾ ಹಣವನ್ನು ಸರ್ಕಾರವೇ ಭರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

Last Updated : Aug 16, 2020, 6:56 PM IST

ABOUT THE AUTHOR

...view details