ವಿಜಯಪುರ: ಜಿಲ್ಲೆಯಲ್ಲಿ ಈಗಾಗಲೇ 331 ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ ಮಾಜಿ ಶಾಸಕರೊಬ್ಬರು ಇರುವುದು ಆತಂಕ ಮೂಡಿಸಿದೆ.
ಮಾಜಿ ಶಾಸಕರಿಗೂ ವಕ್ಕರಿಸಿದ ಕೊರೊನಾ
ವಿಜಯಪುರ ಜಿಲ್ಲೆಯಲ್ಲಿ ಈಗಾಗಲೇ ಸೊಂಕಿತರ ಸಂಖ್ಯೆ ತ್ರಿಶತಕ ದಾಟಿದೆ. ಒಟ್ಟು 40 ಪ್ರದೇಶಗಳನ್ನು ಕಂಟೇನ್ಮೆಂಟ್ ಪ್ರದೇಶ ಎಂದು ಘೋಷಿಸಲಾಗಿದೆ.
ನಗರದ ಹೃದಯಭಾಗದ ಜನನಿಬಿಡ ಪ್ರದೇಶದಲ್ಲಿ ವಾಸಿಸುತ್ತಿರುವ ಮಾಜಿ ಶಾಸಕರು, ಸೊಂಕಿನಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈಚೆಗಷ್ಟೇ ಬೆಂಗಳೂರಿಗೆ ಹೋಗಿ ಬಂದಿದ್ದ ಅವರು, ನಂತರ ತೀವ್ರ ಶ್ವಾಸಕೋಶ ತೊಂದರೆಯಿಂದ ಬಳಲುತ್ತಿದ್ದರು. ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಜಿಲ್ಲಾಡಳಿತದ ಸೂಚನೆ ಮೇರೆಗೆ ಸ್ವ್ಯಾಬ್ ಟೆಸ್ಟ್ ಮಾಡಿಸಿದ್ದರು. ಅದರಲ್ಲಿ ಪಾಸಿಟಿವ್ ಬಂದ ನಂತರ ಹೆಚ್ಚಿನ ಚಿಕಿತ್ಸೆಗೆ ಒಳಪಡಿಸಲಾಗಿದೆ. ಅಲ್ಲದೆ, ಅವರು ವಾಸವಿರುವ ಮನೆಯನ್ನು ಕಂಟೇನ್ಮೆಂಟ್ ಪ್ರದೇಶವಾಗಿ ಘೋಷಿಸಲಾಗಿದೆ. ಹೊಸ ನಿಯಮಾವಳಿಯಂತೆ ಕೇವಲ ಅವರ ನಿವಾಸವನ್ನು ಸೀಲ್ ಡೌನ್ ಮಾಡಲಾಗಿದೆ.
ಈಗಾಗಲೇ ಮಾಜಿ ಶಾಸಕರ ಕುಟುಂಬವನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ. ಮಾಜಿ ಶಾಸಕರ ಸಂಪರ್ಕಿತರ ಹುಡುಕಾಟ ನಡೆಸಲಾಗುತ್ತಿದೆ. ಬೆಂಗಳೂರಿನಲ್ಲಿದ್ದಾಗ ಕೆಲ ರಾಜಕೀಯ ನಾಯಕರ ಜತೆ ಸಂಪರ್ಕದಲ್ಲಿದ್ದರು ಎನ್ನಲಾಗಿದೆ. ಅವರ ಮಾಹಿತಿಯನ್ನು ಜಿಲ್ಲಾಡಳಿತ ಕಲೆ ಹಾಕುತ್ತಿದೆ. ಇತ್ತೀಚಿಗಷ್ಟೇ ಕೂಡಗಿ ವಿದ್ಯುತ್ ಸ್ಥಾವರ ಘಟಕದ ಮ್ಯಾನೇಜರ್ಗೆ ಸೊಂಕು ದೃಢಪಟ್ಡಿತ್ತು.