ವಿಜಯಪುರ :ಕಳೆದ ಎರಡು ದಿನಗಳಿಂದ ಉತ್ತಮ ಮಳೆಯಾಗಿರುವ ಕಾರಣ ವಿಜಯಪುರ - ಬಾಗಲಕೋಟೆ ಮುಖ್ಯರಸ್ತೆ ಸಂಪೂರ್ಣ ಮಂಜಿನಿಂದ ಆವರಿಸಿ ಮಲೆನಾಡಿನಂತೆ ಕಂಡು ಬಂತು.
ಬಿಸಿಲ ನಾಡಲ್ಲೂ ಕವಿದ ಮಂಜು: ಪುಳಕಿತರಾದ ವಾಯು ವಿಹಾರಿಗಳು
ಮೋಡದಲ್ಲಿ ಮಂಜು ಆವರಿಸಿದ ಕಾರಣ ರಸ್ತೆ ತುಂಬಾ ಮಂಜಿನ ಹನಿಗಳು ಚೆಲ್ಲಾಟ ನಡೆಸಿದವು. ಬಿಸಿಲ ನಾಡು ವಿಜಯಪುರದಲ್ಲಿ ಮಲೆನಾಡಿನ ವಾತಾವರಣ ನಿರ್ಮಾಣವಾಗಿದ್ದು, ಜನರಿಗೆ ಖುಷಿ ನೀಡಿತು. ವಾಹನಗಳು ಸಹ ಹೆಡ್ಲೈಟ್ ಹಾಕಿಕೊಂಡೇ ವಾಹನ ಸವಾರಿ ಮಾಡಬೇಕಾಯಿತು.
ಬಿಸಿಲ ನಾಡಲ್ಲೂ ಕವಿದ ಮಂಜು
ಮೋಡದಲ್ಲಿ ಮಂಜು ಆವರಿಸಿದ ಕಾರಣ ರಸ್ತೆ ತುಂಬ ಮಂಜಿನ ಹನಿಗಳು ಚೆಲ್ಲಾಟ ನಡೆಸಿದವು. ಬಿಸಿಲ ನಾಡು ವಿಜಯಪುರದಲ್ಲಿ ಮಲೆನಾಡಿನ ವಾತಾವರಣ ನಿರ್ಮಾಣವಾಗಿದ್ದು, ಜನರಿಗೆ ಖುಷಿ ನೀಡಿತು. ವಾಹನಗಳು ಸಹ ಹೆಡ್ಲೈಟ್ ಹಾಕಿಕೊಂಡೇ ವಾಹನ ಸವಾರಿ ಮಾಡಬೇಕಾಯಿತು.
ವಾಯುವಿಹಾರಕ್ಕೆ ಹೋದವರಿಗಂತೂ ಸ್ವರ್ಗವೇ ಧರೆಗಿಳಿದಂತಾಗಿತ್ತು. ಮಂಜಿನ ವಾತಾವರಣದಲ್ಲಿ ವಾಯುವಿಹಾರ ನಡೆಸಿ ಖುಷಿ ಪಟ್ಟರು. ಹಲವರು ಈ ವಾತಾವರಣವನ್ನು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದು ಸಂತಸ ಪಟ್ಟರು.