ಮುದ್ದೇಬಿಹಾಳ: ಕೊರೊನಾ ವೈರಸ್ ಹಾಗೂ ಲಾಕ್ಡೌನ್ನಿಂದ ಎಲ್ಲ ಸಭೆ- ಸಮಾರಂಭಗಳು ಸ್ಥಗಿತಗೊಂಡಿದ್ದು, ಗ್ರಾಹಕರ ಖರೀದಿ ವಹಿವಾಟು ಇಲ್ಲದೆ ಹೂವಿನ ವ್ಯಾಪಾರ ಕಳೆಗುಂದಿದೆ ಸಂಕಷ್ಟಕ್ಕೀಡಾದವರಿಗೆ ರಾಜ್ಯ ಸರ್ಕಾರ ನೆರವು ನೀಡಬೇಕು ಎಂದು ಕೋರಿ ಅಖಿಲ ಕರ್ನಾಟಕ ಹೂಗಾರ, ಗುರವ, ಪೂಜಾರ, ಜೀರ ಸಮಾಜ ಸೇವಾ ಸಂಘದ ಪದಾಧಿಕಾರಿಗಳು ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದರು.
ದಿಗ್ಬಂಧನದಿಂದ ಬಾಡಿದ ಹೂ ವ್ಯಾಪಾರ: ಆರ್ಥಿಕ ನೆರವಿಗೆ ವರ್ತಕರು ಮನವಿ
ಲಾಕ್ಡೌನ್ನಿಂದಾಗಿ ಹೂವಿನ ವ್ಯಾಪಾರ ಕಳೆಗುಂದಿದೆ. ಮದುವೆಯಂತಹ ಸೀಸನ್ನಲ್ಲಿ ಖರೀದಿದಾರರು ಇಲ್ಲದೆ ವರ್ತಕರ ನಿತ್ಯದ ಆದಾಯ ಇಲ್ಲವಾಗಿದೆ. ಸಂಕಷ್ಟದಲ್ಲಿ ಸಿಲುಕಿರುವ ಅಸಂಘಟಿತ ವ್ಯಾಪಾರಿಗಳಿಗೆ ಸರ್ಕಾರ ಆರ್ಥಿಕ ಸಹಾಯ ನೀಡಬೇಕು ಎಂದು ಮುದ್ದೇಬಿಹಾಳ ಹೂ ವ್ಯಾಪಾರಿಗಳ ಸಂಘದ ಪ್ರತಿನಿಧಿಗಳು ಮನವಿ ಮಾಡಿದರು.
ನೆರವಿಗೆ ಬರಲು ಸರ್ಕಾರಕ್ಕೆ ಮನವಿ: ಹೂ ಮಾರುವವರ ಬದುಕು ಚಿಂತಾಜನಕ
ತಹಶೀಲ್ದಾರ್ ಕಚೇರಿಗೆ ಆಗಮಿಸಿದ ಸಂಘದ ಪ್ರತಿನಿಧಿಗಳು ಶಿರಸ್ತೇದಾರ ಎಸ್.ಎಸ್. ಸಜ್ಜನ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಸಂಘದ ಜಿಲ್ಲಾಧ್ಯಕ್ಷ ಬಿ.ಎಸ್. ಹೂಗಾರ ಮಾತನಾಡಿ, ಕೊರೊನಾ ಸೋಂಕಿನಿಂದ ಖರೀದಿದಾರರು ಇಲ್ಲದೆ ಹೂವಿನ ವ್ಯಾಪಾರ ಸ್ಥಗಿತವಾಗಿದೆ. ಇದೇ ವ್ಯಾಪಾರ ನಂಬಿಕೊಂಡು ಬದುಕುತ್ತಿದ್ದವರಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ಕೂಡಲೇ ಸರ್ಕಾರ ವರ್ತಕರ ನೆರವಿಗೆ ಮುಂದಾಗಬೇಕು ಎಂದು ಮನವಿ ಮಾಡಿದರು.
ತಾಲೂಕಾಧ್ಯಕ್ಷ ಸಂತೋಷ ಹೂಗಾರ, ಪ್ರಧಾನ ಕಾರ್ಯದರ್ಶಿ ಪ್ರಕಾಶ ಹೂಗಾರ, ಉಪಾಧ್ಯಕ್ಷ ಸುರೇಶ್ ಕಂದಗನೂರ ಇದ್ದರು.