ವಿಜಯಪುರ: ಜಿಲ್ಲೆಯಲ್ಲಿ ಬೆಳ್ಳಂಬೆಳಗ್ಗೆ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಲಾರಿ ಕೆಳಗೆ ಸಿಲುಕಿಕೊಂಡು ಅಪ್ಪ-ಮಗ ಧಾರುಣವಾಗಿ ಸಾವನ್ನಪ್ಪಿರುವ ಘಟನೆ ದೇವರ ಹಿಪ್ಪರಗಿ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ. ಮೃತರನ್ನು ರಾಮ ಶರಣಪ್ಪ ಗೊರನಾಳ (45), ಮಗ ಲಕ್ಷ್ಮಣ (22) ಎಂದು ಗುರುತಿಸಲಾಗಿದೆ.
ತಂದೆ-ಮಗನ ಮೇಲೆ ಉರುಳಿ ಬಿದ್ದ ವಾಹನ ಓದಿ:ಟ್ರೈನ್ನ ಚೈನ್ ಎಳೆದು ಪಕ್ಕದ ಹಳಿ ಮೇಲೆ ನಿಂತ ಪ್ರಯಾಣಿಕರು.. ಐವರ ಮೇಲೆ ಹರಿಯಿತು ಮತ್ತೊಂದು ರೈಲು!
ಲಾರಿ-ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿದ ಬಳಿಕ ಬೈಕ್ನಲ್ಲಿದ್ದ ತಂದೆ-ಮಗ ರಸ್ತೆ ಮೇಲೆ ಬಿದ್ದಿದ್ದಾರೆ. ಪರಿಣಾಮ ಈ ಇಬ್ಬರ ಮೇಲೆ ಬಿದ್ದಿದೆ. ಲಾರಿ ಕೆಳಗೆ ಸಿಕ್ಕಿಕೊಂಡ ಪರಿಣಾಮ ತಂದೆ-ಮಗ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಶವ ಹೊರ ತೆಗೆಯಲು ಸಾರ್ವಜನಿಕರ ಜೊತೆ ಸೇರಿ ಪೊಲೀಸರು ಹರಸಾಹಸ ಪಟ್ಟರು.
ಓದಿ:ಟ್ರ್ಯಾಕ್ಟರ್, ಟಾಟಾ ಏಸ್ ನಡುವೆ ಡಿಕ್ಕಿ : ಮಹಿಳೆ ಸಾವು, 22 ಮಂದಿಗೆ ಗಾಯ!
ಮೃತ ತಂದೆ-ಮಗ ಕನ್ನೊಳ್ಳಿಯಿಂದ ದೇವರಹಿಪ್ಪರಗಿ ಕಡೆಗೆ ಹೊರಟಾಗ ಈ ಅವಘಡ ಸಂಭವಿಸಿದೆ. ಈ ಘಟನೆ ಕುರಿತು ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು.