ಕರ್ನಾಟಕ

karnataka

ETV Bharat / state

ಉಸಿರಾಟದ ತೊಂದರೆ: ಚಿಕಿತ್ಸೆ ಸಿಗದೆ ಪರದಾಡುತ್ತಿದ್ದ ರೋಗಿಗೆ ವಿಜಯಪುರ ಡಿಸಿ ನೆರವು - ವಿಜಯಪುರ ಜಿಲ್ಲಾಧಿಕಾರಿ ನೆರವು

ಉಸಿರಾಟದ ತೊಂದರೆಗೆ ಚಿಕಿತ್ಸೆ ಸಿಗದೆ ಪರದಾಡುತ್ತಿದ್ದ ಸಿಂದಗಿ ತಾಲೂಕಿನ ರೋಗಿಗೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ನೆರವಾಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

Dc helping to The patient
ರೋಗಿ ಚಿಕಿತ್ಸೆಗೆ ನೆರವಾದ ಡಿಸಿ

By

Published : Jul 10, 2020, 12:25 PM IST

Updated : Jul 10, 2020, 1:29 PM IST

ವಿಜಯಪುರ: ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ವ್ಯಕ್ತಿ ಚಿಕಿತ್ಸೆ ಸಿಗದೆ ಪರದಾಡುತ್ತಿದ್ದ ವೇಳೆ ಆತನಿಗೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ತಕ್ಷಣ ಸ್ಪಂದಿಸಿ ಮಾನವೀಯತೆ ಮೆರೆದಿದ್ದಾರೆ.

ಸಿಂದಗಿ ತಾಲೂಕಿನಿಂದ ರೋಗಿಯೊಂದಿಗೆ ಅವರ ಪೋಷಕರು ಕಾರಿನಲ್ಲಿ ನೇರವಾಗಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ್ದರು. ಈ ವೇಳೆ ರೋಗಿ ಬಳಿ ಖುದ್ದು ಆಗಮಿಸಿದ ಜಿಲ್ಲಾಧಿಕಾರಿಗಳು ರೋಗಿಯನ್ನು ಮಾತನಾಡಿಸಿ ಆರೋಗ್ಯ ವಿಚಾರಿಸಿದರು.

ರೋಗಿ ಚಿಕಿತ್ಸೆಗೆ ನೆರವಾದ ಡಿಸಿ

ಜಿಲ್ಲಾಸ್ಪತ್ರೆ ಸೇರಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ವೈದ್ಯರು ನಿರಾಕರಿಸಿದ್ದಾರೆ. ಈ ಹಿನ್ನೆಲೆ ರಾತ್ರಿಯೆಲ್ಲಾ ತಿರುಗಾಡಿದೆವು. ಆದರೆ, ಯಾರೊಬ್ಬರೂ ಚಿಕಿತ್ಸೆ ನೀಡಲು ಸ್ಪಂದಿಸಿಲ್ಲ ಎಂದು ಪೋಷಕರು ಅಳಲು ತೋಡಿಕೊಂಡರು.

ಜಿಲ್ಲಾಧಿಕಾರಿ ಕೂಡಲೇ ವಿಜಯಪುರ ಜಿಲ್ಲಾಸ್ಪತ್ರೆ ವೈದ್ಯರಿಗೆ ಕರೆ ಮಾಡಿ ರೋಗಿಯನ್ನು ಚಿಕಿತ್ಸೆಗೆ ದಾಖಲಿಸಿಕೊಳ್ಳಲು ಸೂಚನೆ ನೀಡಿ ಕರ್ತವ್ಯಪ್ರಜ್ಞೆ ಮೆರೆದರು.

Last Updated : Jul 10, 2020, 1:29 PM IST

ABOUT THE AUTHOR

...view details