ಕರ್ನಾಟಕ

karnataka

By

Published : Oct 28, 2021, 2:11 PM IST

ETV Bharat / state

ಸಿಂದಗಿ ಉಪಚುನಾವಣೆ: ವಿಜಯಪುರ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ

ಸಿಂದಗಿ ಉಪಚುನಾವಣೆ ಬಹಿರಂಗ ಪ್ರಚಾರ ಅಂತ್ಯವಾಗಿದ್ದು, ಸದ್ಯ ವ್ಯವಸ್ಥಿತ ಚುನಾವಣೆಗೆ ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಂಡಿದೆ.

DC P.Sunil Kumar
ಜಿಲ್ಲಾಧಿಕಾರಿ ಪಿ.ಸುನೀಲಕುಮಾರ

ವಿಜಯಪುರ: ಸಿಂದಗಿ ಉಪಚುನಾವಣೆ ಬಹಿರಂಗ ಪ್ರಚಾರ ಅಂತ್ಯವಾಗಿದ್ದು, ಇಲ್ಲಿಯವರೆಗೆ ಚುನಾವಣೆ ಸಂಬಂಧ 53 ದೂರುಗಳು ದಾಖಲಾಗಿವೆ. ಕೋವಿಡ್ ನಿಯಮ ಹಾಗು ಮಾದರಿ ನೀತಿ ಸಂಹಿತೆ ಉಲ್ಲಂಘನೆಯ 24 ಪ್ರಕರಣಗಳು ದಾಖಲಾಗಿವೆ. ಇನ್ನೂ 5 ಪ್ರಕರಣದ ವರದಿ ಬರಬೇಕಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಹಾಗು ಮಾದರಿ ನೀತಿ ಸಂಹಿತೆ ಉಲ್ಲಂಘನೆಯ 13 ಪ್ರಕರಣ, ಕೇವಲ ಕೋವಿಡ್ ನಿಯಮ ಉಲ್ಲಂಘನೆಯ 8, ಮಾದರಿ ನೀತಿ ಸಂಹಿತೆ ಉಲ್ಲಂಘನೆಯ 2 ಹಾಗು ಗುಂಪು ಗಲಾಟೆಯ 1 ಪ್ರಕರಣ ಸೇರಿ 24 ಎಫ್​​​ಐಆರ್ ದಾಖಲಾಗಿದೆ ಎಂದರು.

ಅಬಕಾರಿ ಇಲಾಖೆ ಅಕ್ರಮ ಮದ್ಯ ಸಾಗಾಟ, ಸಂಗ್ರಹಣೆ ವಿಚಾರವಾಗಿ 61 ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರು 14 ಹಾಗು ಇತರೆ 3 ಸೇರಿ ಒಟ್ಟು 78 ಪ್ರಕರಣ ದಾಖಲಾಗಿವೆ. 277 ಲೀಟರ್ ಮದ್ಯ, 4 ಕೆ.ಜಿ ಗಾಂಜಾ, 7 ಬೈಕ್ ಹಾಗು ಒಂದು ಕಾರನ್ನು ವಶಕ್ಕೆ ಪಡೆಯಲಾಗಿದೆ ಎಂದು ಡಿಸಿ ತಿಳಿಸಿದರು.

ಕಟ್ಟುನಿಟ್ಟಾಗಿ ಕೋವಿಡ್ ನಿಯಮ ಜಾರಿ:

ಮತದಾನ ಮತ್ತು ಮತ ಎಣಿಕೆಗೆ ನಿಯೋಜಿಸಿರುವ ಸಿಬ್ಬಂದಿಯನ್ನು ಆರೋಗ್ಯ ತಪಾಸಣೆಗೆ ಒಳಪಡಿಸಿದ್ದು, ಯಾವುದೇ ರೋಗ ಲಕ್ಷಣ ಇಲ್ಲದವರು ಹಾಗು ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಹಾಕಿಕೊಂಡವರನ್ನು ನಿಯೋಜಿಸಲಾಗಿದೆ. ಇದರ ಜತೆ ಸಿಂದಗಿ ಮತಕ್ಷೇತ್ರದಲ್ಲಿ‌ ಕೋವಿಡ್ ಪಾಸಿಟಿವಿಟಿ ಬಗ್ಗೆ ನಿಗಾ ವಹಿಸಿದ್ದೇವೆ. ಚುನಾವಣೆ ದಿನಾಂಕ ಪ್ರಕಟವಾದಾಗ ಕ್ಷೇತ್ರದಲ್ಲಿ ಶೇ. 60ರಷ್ಟು ಜನ ಲಸಿಕೆ ಹಾಕಿಕೊಂಡಿದ್ದರು. ಸದ್ಯ ಅದರ ಗುರಿಯನ್ನು ಶೇ. 93ರಷ್ಟು ತಲುಪಿದ್ದೇವೆ ಎಂದರು.

ಸಿಂದಗಿ ಕ್ಷೇತ್ರದ ಮತದಾರರ ವಿವರ:

  • ಒಟ್ಟು ಮತದಾರರ ಸಂಖ್ಯೆ- 2,34,584
  • 1,20,844- ಪುರುಷರು
  • 1,13,561 ಮಹಿಳೆಯರು
  • ಇತರೆ 32 ಮತದಾರರು

ಒಟ್ಟು 12 ಜನ ನಾಮಪತ್ರ ಸಲ್ಲಿಸಿದ್ದರು. ಅವರಲ್ಲಿ ಇಬ್ಬರು ನಾಮಪತ್ರ ಹಿಂದಕ್ಕೆ ಪಡೆದಿದ್ದಾರೆ. ಕಣದಲ್ಲಿ 6 ಅಭ್ಯರ್ಥಿಗಳಿದ್ದಾರೆ. ಒಟ್ಟು 271 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 26 ಮತಗಟ್ಟೆ ಕಾಯ್ದಿರಿಸಿ ಒಟ್ಟು 297 ಮತ ಗಟ್ಟೆಗಳಿವೆ. 7 ಚೆಕ್ ಪೋಸ್ಟ್ ಸೇರಿ ಚುನಾವಣೆ ಕರ್ತವ್ಯಕ್ಕೆ 1,308 ಸಿಬ್ಬಂದಿ ನಿಯೋಜಿಸಲಾಗಿದೆ. ನ. 2ರಂದು ವಿಜಯಪುರದ ಸೈನಿಕ ಶಾಲೆಯಲ್ಲಿ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ABOUT THE AUTHOR

...view details