ವಿಜಯಪುರ: ಕೊರೊನಾ ಭೀತಿ ತಗ್ಗಿಸಲು ಪಾಸಿಟಿವ್ ಬಂದ್ ಪ್ರದೇಶದಲ್ಲಿ ಮಾತ್ರ ಸೀಲ್ ಡೌನ್ ಮಾಡಲಾಗುವುದು. ಉಳಿದ ಜಿಲ್ಲೆಗಳನ್ನು ಯಾವುದೇ ಕಾರಣಕ್ಕೂ ಲಾಕ್ಡೌನ್ ಮಾಡುವ ವಿಚಾರವಿಲ್ಲ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಸ್ಪಷ್ಟಪಡಿಸಿದರು.
ಜಿಲ್ಲೆಗಳನ್ನು ಲಾಕ್ಡೌನ್ ಮಾಡುವ ಪ್ರಸ್ತಾಪವಿಲ್ಲ : ಡಿಸಿಎಂ ಗೋವಿಂದ ಕಾರಜೋಳ - ಲಾಕ್ಡೌನ್ ಪರಿಣಾಮಗಳು
ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚಾಗಿ ಕಂಡು ಬಂದ ವಲಯಗಳನ್ನು ಸೀಲ್ ಡೌನ್ ಮಾಡಲಾಗುವುದೇ ಹೊರತು ಜಿಲ್ಲೆಗಳನ್ನು ಲಾಕ್ಡೌನ್ ಮಾಡುವುದಿಲ್ಲ ಎಂದು ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ಡಿಸಿಎಂ ಗೋವಿಂದ ಕಾರಜೋಳ
ವಿಮಾನ ನಿಲ್ದಾಣ ಕಾಮಗಾರಿ ಕುರಿತು ಸ್ಥಳ ಪರಿಶೀಲನೆ ನಡೆಸಿದ ನಂತರ ಮಾತನಾಡಿದ ಅವರು, ಬೆಂಗಳೂರು ಮಾದರಿಯಲ್ಲಿ ವಿಜಯಪುರ ಜಿಲ್ಲೆಯಲ್ಲಿಯೂ ಲಾಕ್ಡೌನ್ ಮಾಡುವ ಅಭಿಪ್ರಾಯ ಸಾರ್ವಜನಿಕರಿಂದ ಬಂದಿರಬಹುದು. ಆದರೆ ಸರ್ಕಾರದ ಮುಂದೆ ಯಾವುದೇ ಲಾಕ್ಡೌನ್ ಪ್ರಸ್ತಾಪವಿಲ್ಲ. ಕೇವಲ ಸೀಲ್ ಡೌನ್ ಕೆಲಸ ಮಾತ್ರ ಮುಂದುವರೆಯಲಿದೆ ಎಂದರು.
ವಿಜಯಪುರದಲ್ಲಿ ಈಗಾಗಲೇ 758 ಪ್ರಕರಣಗಳು ದಾಖಲಾಗಿವೆ. ಆದರೆ ಲಾಕ್ಡೌನ್ ಮಾಡುವ ವಿಚಾರವಿಲ್ಲ. ರಾಜ್ಯದಲ್ಲಿ ಅಗತ್ಯವಿರುವ ಜಿಲ್ಲೆಯಲ್ಲಿ ಮಾತ್ರ ಲಾಕ್ಡೌನ್ ಮಾಡಲು ಮುಖ್ಯಮಂತ್ರಿಗಳು ಒಲವು ತೋರಿದ್ದಾರೆ ಎಂದು ತಿಳಿಸಿದರು.
Last Updated : Jul 13, 2020, 7:46 PM IST