ಕರ್ನಾಟಕ

karnataka

ETV Bharat / state

ವಿಜಯಪುರ ಪ್ರವಾಸಿ ತಾಣಗಳ ಪರಿಶೀಲಿಸಿದ ಡಿಸಿ ಸುನೀಲ ಕುಮಾರ್​​

ಆದಿಲ್ ಶಾಹಿ ಕಾಲದ ಐತಿಹಾಸಿಕ ತಾಣಗಳ ಸ್ವಚ್ಛತೆ, ಸಂರಕ್ಷಣೆ ಮತ್ತು ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳ ಕುರಿತು ಪರಿಶೀಲಿಸಲು ಡಿಸಿ ನೇತೃತ್ವದ ತಂಡ 'ಹೆರಿಟೇಜ್ ವಾಕ್' ನಡೆಸಿತು.

DC Sunila Kumar review the Vijayapur tourism destinations
ವಿಜಯಪುರ ಪ್ರವಾಸಿ ತಾಣಗಳನ್ನು ಪರಿಶೀಲಿಸಿದ ಡಿಸಿ ಸುನೀಲ ಕುಮಾರ್​​

By

Published : Mar 7, 2021, 7:08 PM IST

ವಿಜಯಪುರ: ನಗರದ ಐತಿಹಾಸಿಕ ಸ್ಥಳಗಳ ಸಂರಕ್ಷಣೆಯ ಜತೆಗೆ ಪ್ರವಾಸಿಗರ ಆಕರ್ಷಣೆಗಾಗಿ ಗಗನ್ ಮಹಲ್ ಪ್ರದೇಶವನ್ನು ಟೂರಿಸಂ ಹಬ್ ಎಂಬುದಾಗಿ ಅಭಿವೃದ್ಧಿಪಡಿಸುವ ಉದ್ದೇಶವಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ್ ತಿಳಿಸಿದರು.

ಇಂದು ನಗರದ ಮಧ್ಯಭಾಗದಲ್ಲಿರುವ ಆದಿಲ್ ಶಾಹಿ ಕಾಲದ ಐತಿಹಾಸಿಕ ತಾಣಗಳ ಸ್ವಚ್ಛತೆ, ಸಂರಕ್ಷಣೆ ಮತ್ತು ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳ ಕುರಿತು ಪರಿಶೀಲಿಸಲು ಅವರು 'ಹೆರಿಟೇಜ್ ವಾಕ್' ನಡೆಸಿದರು. ಆದಿಲ್‌ಶಾಹಿ ಕಾಲದ ಮಹತ್ವದ ತಾಣಗಳಾದ ವಿಶೇಷವಾಗಿ ಖ್ವಾಜಾ ಜಹಾನ್ ಮಸೀದಿ - ಹಳೇ ಮಸೀದಿ ನಂಬರ್ 294, ಗಗನ್ ಮಹಲ್, ಆನಂದ್ ಮಹಲ್, ಸಿಎಸ್‍ಐ ಚರ್ಚ್, ಮೆಕ್ಕಾ ಮಸೀದಿ, ಚಿಂಚದೀದಿ ಮಸೀದಿ, ಹಾಗೂ ಪಸರಿ ಕಮಾನ್‍ ಸೇರಿದಂತೆ ಐತಿಹಾಸಿಕ ತಾಣಗಳಿಗೆ ಭೇಟಿ ನೀಡಿದರು.

ಐತಿಹಾಸಿಕವಾಗಿ ಅತ್ಯಂತ ಮಹತ್ವ ಪಡೆದಿರುವ ಈ ತಾಣಗಳ ವ್ಯಾಪ್ತಿಯಲ್ಲಿ ಸ್ವಚ್ಛತೆ, ಸ್ಮಾರಕಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿ ಟೂರಿಸ್‍ಂ ಹಬ್ ಆಗಿ ರೂಪಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು. ನಗರದ ಐತಿಹಾಸಿಕ ತಾಣಗಳ ಭೇಟಿ,ಪರಿಶೀಲನೆ ಸಂದರ್ಭದಲ್ಲಿ ಪುರಾತತ್ವ ಸರ್ವೇಕ್ಷಣಾ ಅಧಿಕಾರಿಗಳು, ಮಹಾನಗರ ಪಾಲಿಕೆ ಅಧಿಕಾರಿಗಳು, ಪ್ರವಾಸೋದ್ಯಮ ಇಲಾಖೆ ಹಾಗೂ ಇತರೆ ಅಧಿಕಾರಿಗಳು ಡಿಸಿಗೆ ಸಾಥ್​​ ನೀಡಿದರು.

ಪ್ರವಾಸಿ ತಾಣಗಳಿಗೆ ಭೇಟಿ - ಪರಿಶೀಲನೆ

ಖ್ವಾಜಾ ಜಹಾನ್ ಮಸೀದಿ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕೆಂದು ಪುರಾತತ್ವ ಸರ್ವೇಕ್ಷಣಾ ಅಧಿಕಾರಿಗಳಿಗೆ ಸೂಚಿಸಿದರು. 2020-21ನೇ ಸಾಲಿನ ಅನುದಾನದಡಿ ಸ್ವಚ್ಛತೆಗೆ ಕ್ರಮ ಕೈಗೊಳ್ಳುವುದಾಗಿ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅಧಿಕಾರಿಗಳು ತಿಳಿಸಿದರು.

ನಂತರ ನೀರು ತುಂಬಿದ ಬಾವಡಿ ವೀಕ್ಷಿಸಿದ ಜಿಲ್ಲಾಧಿಕಾರಿ, ಇದರ ಸಂಪೂರ್ಣ ಸ್ವಚ್ಛತೆಗೆ ಪ್ರಥಮ ಆದ್ಯತೆ ನೀಡುವುದರ ಜತೆಗೆ ಸಂರಕ್ಷಣೆಗೂ ಗಮನ ನೀಡಲು ತಿಳಿಸಿದರು. ಗಗನ್ ಮಹಲ್‍ಗೆ ಭೇಟಿ ನೀಡಿ ಸ್ವಚ್ಛತೆಗಾಗಿ ಕ್ರಮ ಕೈಗೊಳ್ಳಲು ಕಸ ಸಂಗ್ರಹಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು ಎಂದು ಸೂಚನೆ ನೀಡಿದರು.

ಆನಂದ್ ಮಹಲ್​ಗೆ ಭೇಟಿ ನೀಡಿ, ಪ್ರವಾಸಿಗರಿಗೆ ಐತಿಹಾಸಿಕ ಸ್ಮಾರಕಗಳು, ಇತಿಹಾಸದ ಬಗ್ಗೆ ತಿಳಿಯುವಂತಾ‌ಗಲು ಮೊದಲು ವ್ಯಾಖ್ಯಾನ ಕೇಂದ್ರ ಸ್ಥಾಪನೆ, ಪ್ರವಾಸಿ ತಾಣಗಳ ವ್ಯಾಪ್ತಿಯಲ್ಲಿ ಫುಡ್ ಕೋರ್ಟ್ ಇರುವುದು ಅತ್ಯಂತ ಅವಶ್ಯಕವಾಗಿದೆ ಎಂದರು. ಉದ್ಯಾನವನ ನಿರ್ಮಿಸಿ, ಪಾರ್ಕಿಂಗ್ ವ್ಯವಸ್ಥೆಗೂ ಗಮನ ನೀಡುವುದು ಮುಖ್ಯವಾಗಿದ್ದು, ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಬೇಕು. ಮೆಕ್ಕಾ ಮದೀನಾ ಮಸೀದಿ ಹಿಂದಿನ ಭಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು. ಇದರ ಜತೆಗೆ ಮಸೀದಿ ಮುಂಭಾಗ ಉದ್ಯಾನವನ ನಿರ್ಮಿಸಿ ಮಾರ್ನಿಂಗ್ ವಾಕರ್ಸ್​​ಗಳಿಗೆ ಅನುವು ಮಾಡಿಕೊಡುವ ಅಗತ್ಯವಿದೆ.ಮಕ್ಕಳು ಆಟವಾಡಲು ಸಾಧನ-ಸಲಕರಣೆಗಳು ಒದಗಿಸುವಂತೆ ಸಲಹೆ ನೀಡಿದರು.

ಮಹಿಳೆಯರ ಮಸೀದಿ ಇದಾಗಿದ್ದು, ಐತಿಹಾಸಿಕ ಸ್ಮಾರಕಗಳ ಛಾಯಾ ಚಿತ್ರದೊಂದಿಗೆ ಉತ್ತಮ ದಾಖಲೀಕರಣಗೊಳಿಸಲು ಸೂಚಿಸಿದರು. ಮಹಾನಗರಪಾಲಿಕೆ ಆಯುಕ್ತ ಹರ್ಷ ಶೆಟ್ಟಿ ಅವರು ಈಗಾಗಲೇ ಮೆಕ್ಕಾ ಮಸೀದಿ ಮುಂಭಾಗ ಸ್ವಚ್ಛಗೊಳಿಸಿ ಅತಿಕ್ರಮಣಗೊಂಡ ಕಟ್ಟಡಗಳನ್ನು ತೆರವುಗೊಳಿಸಲಾಗಿದೆ. ಅದರಂತೆ ಸ್ವಚ್ಛಗೊಳಿಸಲಾಗಿದೆ. ಉದ್ಯಾನವನ ನಿರ್ಮಿಸುವದರಿಂದ ಸಾರ್ವಜನಿಕರಿಗೆ ನೆರವಾಗಲಿದೆ ಎಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.

ಇದನ್ನೂ ಓದಿ:ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ಹಣ ಬಂತು, ನೀರು ಸಿಗಲಿಲ್ಲ

ಐತಿಹಾಸಿಕ ತಾಣಗಳಿಗೆ ನೀರು ಪೂರೈಸುವ ಯೋಜನೆಯ ಖರ್ಚುವೆಚ್ಛದ ವರದಿ ಸಿದ್ಧಪಡಿಸಲಾಗುತ್ತಿದ್ದು, ಗೋಲಗುಮ್ಮಟದವರೆಗೆ ನೀರು ಸರಬರಾಜು ಮಾಡುವ ಕುರಿತು ಧಾರವಾಡ ಪುರಾತತ್ವ ಸರ್ವೇಕ್ಷಣ ಇಲಾಖೆ ಕಚೇರಿಯೊಂದಿಗೆ ಪತ್ರ ವ್ಯವಹಾರ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೆಂದು ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕರಿಗೆ ಸೂಚಿಸಿದರು.

ಇವುಗಳ ವ್ಯಾಪ್ತಿಯಲ್ಲಿ ಇರುವ ತೋಟಗಾರಿಕೆ ಕಚೇರಿಯನ್ನು ಪ್ರವಾಸೋದ್ಯಮ ಇಲಾಖೆ ಸ್ಥಳಕ್ಕೆ ಹಾಗೂ ಪ್ರವಾಸೋದ್ಯಮ ಇಲಾಖೆಯನ್ನು ಈ ಸ್ಥಳಕ್ಕೆ ಸ್ಥಳಾಂತರಿಸಿ ಟೂರಿಸಂ ಹಬ್​​ಗೆ ಸೂಕ್ತ ಗಮನ ನೀಡುವ ಉದ್ದೇಶ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಚಿಂಚ ದೀದಿ ಮಸೀದಿ, ಖ್ವಾಜಾ ಮಸೀದಿ ಹಾಗೂ ಕಮಾನ್ ಪರಿಶೀಲಿಸಿದ ಅವರು ಕೋಟೆ ಮೇಲೆ ಬೆಳೆದ ಗಿಡಗಂಟಿಗಳನ್ನು ತೆಗೆದು, ಶುಚಿಗೊಳಿಸಲು ಪ್ರಯತ್ನಿಸಬೇಕು. ಅಸಾರ ಮಹಲ್ ಪಕ್ಕದಲ್ಲಿ ತ್ಯಾಜ್ಯ ಹಾಗೂ ಕಸ ಚೆಲ್ಲುವುದನ್ನು ನಿಯಂತ್ರಿಸಬೇಕು. ಪಸರಿ ಕಮಾನ್ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ವಾಹನಗಳ ನಿಲುಗಡೆಯನ್ನು ನಿಯಂತ್ರಿಸಿ, ಸ್ಮಾರಕಗಳನ್ನು ಸಂರಕ್ಷಿಸಬೇಕು. ಈ ಪ್ರದೇಶ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಗಮನ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಹೇಳಿದರು.

ABOUT THE AUTHOR

...view details