ವಿಜಯಪುರ: ರೈತರು ದಲ್ಲಾಳಿಗಳಿಂದ ಮೊಸ ಹೋಗಬಾರದು, ಒಣ ದ್ರಾಕ್ಷಿ ಬೆಂಬಲ ಬೆಲೆ ಸಿಗುವಂತಾಗಲಿ ಎಂದು ವಿಜಯಪುರದಲ್ಲಿ ಆನ್‌ಲೈನ್ ಮಾರುಕಟ್ಟೆಯನ್ನ ಕಳದೆ 4 ತಿಂಗಳ ಹಿಂದೆ ಆರಂಭಿಸಲಾಗಿದೆ. ಇನ್ನೇನು ಲಾಕ್‌ಡೌನ್ ಸಡಿಲಿಕೆಯಾಯಿತು. ಒಣ ದ್ರಾಕ್ಷಿಗೆ ಉತ್ತಮ ಬೆಲೆ ಸಿಗುತ್ತದೆ, ಮಾಡಿದ ಸಾಲ ದೂರವಾಗುತ್ತದೆ ಅಂತ ಅಂದುಕೊಂಡಿದ ದ್ರಾಕ್ಷಿ ಬೆಳೆಗಾರರಿಗೆ ನಿರಾಸೆಯಾಗಿದೆ.
ವಿಜಯಪುರ ಜಿಲ್ಲೆಯಲ್ಲಿ 13,500 ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತದೆ. ರೈತರಿಗೆ ಅನುಕೂಲವಾಗಲಿ ಎಂದು ಜಿಲ್ಲಾಡಳಿತ ಆನ್‌ಲೈನ್ ಇ- ಟೆಂಡರ್ ಆರಂಭಿಸಿದೆ. ಲಾಕ್‌ಡೌನ್ ಪರಿಣಾಮದಿಂದ ಎರಡು ತಿಂಗಳ ಮಾರುಕಟ್ಟೆ ಬಂದ್ ಆಗಿತು. ಇದರಿಂದ ಈ ವರ್ಷ ಜಿಲ್ಲೆಯಲ್ಲಿ 1.20 ಲಕ್ಷ ಮೆಟ್ರಿಕ್ ಟನ್ ಒಣ ದ್ರಾಕ್ಷಿ ಉತ್ಪಾದನೆಯಾಗಿದೆ. ಆದ್ರೆ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ 350 ರೂ. ಮಾರಾಟವಾಗುವ ಒಣ ದ್ರಾಕ್ಷಿ ಆನ್‌ಲೈನ್‌ನಲ್ಲಿ 150 ರೂ. ಮಾರಾಟವಾಗುತ್ತಿದೆ. ಇದು ದ್ರಾಕ್ಷಿ ಬೆಳೆಗಾರ ಆತಂಕಕ್ಕೆ ಕಾರಣವಾಗಿದೆ.
ಜಿಲ್ಲೆಯಲ್ಲಿ 14 ಕೋಲ್ಡ್ ಸ್ಟೋರೇಜ್‌ಗಳಿದ್ದು, ಇವುಗಳ ಸಾಮರ್ಥ್ಯ ಕೂಡ 22 ಸಾವಿರ ಮೆಟ್ರಿಕ್ ಟನ್ ಇದೆ. ರೈತರು 1 ಟನ್ ಒಣ ದ್ರಾಕ್ಷಿಯನ್ನು ಸ್ಟೋರೇಜ್ ಮಾಡಬೇಕೆಂದರೂ ಒಂದು ದಿನಕ್ಕೆ 500 ರೂ. ಬಾಡಿಗೆ ನೀಡಬೇಕು. ಹೆಚ್ಚಾಗಿ ರೈತರು ಒಣ ದ್ರಾಕ್ಷಿ ಸ್ಟೋರೇಜ್‌ಗೆ ಮಹಾರಾಷ್ಟ್ರವನ್ನೇ ಆಧರಿಸಿದ್ದಾರೆ.