ವಿಜಯಪುರ: ಜಿಲ್ಲೆಯಲ್ಲಿ ಕೊರೊನಾ ವೈರಸ್ ಮತ್ತೊಮ್ಮೆ ರಣಕೇಕೆ ಹಾಕಿದೆ. ಒಂದೇ ದಿನ 11 ಮಂದಿಗೆ ಸೋಂಕು ಪತ್ತೆಯಾಗುವ ಮೂಲಕ ಪ್ರಕರಣಗಳ ಸಂಖ್ಯೆ ಶತಕದಂಚಿಗೆ (ಒಟ್ಟು 96 ಪ್ರಕರಣಗಳು) ಬಂದು ನಿಂತಿದೆ.
ವಿಜಯಪುರದಲ್ಲಿ11 ಹೊಸ ಕೊರೊನಾ ಪ್ರಕರಣ ಪತ್ತೆ: ಸೋಂಕಿತರ ಸಂಖ್ಯೆ 96ಕ್ಕೆ ಏರಿಕೆ
ವಿಜಯಪುರದಲ್ಲಿ ಇಂದು 11 ಮಂದಿಗೆ ಕೊರೊನಾ ವೈರಸ್ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 96ಕ್ಕೆ ಏರಿಕೆಯಾಗಿದೆ.
ಜಿಲ್ಲಾಸ್ಪತ್ರೆ
ಐವರು ಪುರುಷರು, ಮೂವರು ಮಹಿಳೆಯರು, ಒಬ್ಬ ಯುವಕ, ಓರ್ವ ಬಾಲಕಿ, ಓರ್ವ ಬಾಲಕನಿಗೆ ಸೋಂಕು ತಗುಲಿದೆ. ಎಲ್ಲರೂ ಮಹಾರಾಷ್ಟ್ರದಿಂದ ವಿಜಯಪುರಕ್ಕೆ ಆಗಮಿಸಿ ಕ್ವಾರಂಟೈನಲ್ಲಿದ್ದರು.
- ರೋಗಿ ಸಂಖ್ಯೆ-2784, 32 ವರ್ಷದ ಪುರುಷ
- ರೋಗಿ ಸಂಖ್ಯೆ-2835, 28 ವರ್ಷದ ಪುರುಷ
- ರೋಗಿ ಸಂಖ್ಯೆ-2836, 20 ವರ್ಷದ ಪುರುಷ
- ರೋಗಿ ಸಂಖ್ಯೆ-2837, 35 ವರ್ಷದ ಪುರುಷ
- ರೋಗಿ ಸಂಖ್ಯೆ-2838, 30 ವರ್ಷದ ಮಹಿಳೆ
- ರೋಗಿ ಸಂಖ್ಯೆ-2839, 37 ವರ್ಷದ ಮಹಿಳೆ
- ರೋಗಿ ಸಂಖ್ಯೆ-2840, 14 ವರ್ಷದ ಬಾಲಕಿ
- ರೋಗಿ ಸಂಖ್ಯೆ-2841, 28 ವರ್ಷದ ಪುರುಷ
- ರೋಗಿ ಸಂಖ್ಯೆ-2842, 35 ವರ್ಷದ ಮಹಿಳೆ
- ರೋಗಿ ಸಂಖ್ಯೆ-2843, 18 ವರ್ಷದ ಬಾಲಕ
- ರೋಗಿ ಸಂಖ್ಯೆ-2844, 15 ವರ್ಷದ ಬಾಲಕ