ಮುದ್ದೇಬಿಹಾಳ(ವಿಜಯಪುರ):ಚಲಿಸುತ್ತಿದ್ದ ಸರ್ಕಾರಿ ಬಸ್ಸಿನ ಹಿಂಬದಿ ಚಕ್ರದ ಒಂದು ಟೈರ್ ರಸ್ತೆ ಮಧ್ಯೆಯೇ ಕಳಚಿ ಬಿದ್ದ ಘಟನೆ ತಾಲೂಕಿನ ನಾಲತವಾಡದಲ್ಲಿ ನಡೆದಿದೆ.
ರಸ್ತೆ ಮಧ್ಯೆದಲ್ಲಿಯೇ ಕಳಚಿ ಬಿದ್ದ ಬಸ್ ಟೈರ್: ಮುಂದೇನಾಯ್ತು? - ಸರ್ಕಾರಿ ಬಸ್
ಚಲಿಸುತ್ತಿದ್ದ ಸರ್ಕಾರಿ ಬಸ್ಸಿನ ಹಿಂಬದಿ ಚಕ್ರದ ಒಂದು ಟೈರ್ ರಸ್ತೆ ಮಧ್ಯೆದಲ್ಲಿಯೇ ಕಳಚಿ ಬಿದ್ದ ಘಟನೆ ನಾಲತವಾಡದಲ್ಲಿ ನಡೆದಿದೆ.
ಬಸ್
ಮುದ್ದೇಬಿಹಾಳ ಬಸ್ ಡಿಪೋಗೆ ಸೇರಿದ ಬಸ್ ನಂ KA28, F1951 ನಾಲತವಾಡ ಮಾರ್ಗವಾಗಿ ನಾರಾಯಣಪುರಕ್ಕೆ ತೆರಳುತ್ತಿತ್ತು. ಈ ವೇಳೆ ನಾಲತವಾಡ ಪಟ್ಟಣದ ಕೆಇಬಿ ಎದುರು ಟೈರ್ ಕಳಚಿ ಬಿದ್ದು 200 ಮೀಟರ್ ದೂರ ಉರುಳಿ ಹೋಗಿದೆ.
ಕೂಡಲೇ ಟೈರ್ ಕಳಚಿದ್ದನ್ನು ಗಮನಿಸಿದ ಬಸ್ ಚಾಲಕ ಬಸವರಾಜ್ ಅವರ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ. ಬಸ್ನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಬಚಾವ್ ಆಗಿದ್ದಾರೆ. ಇಳಿಜಾರಿನಲ್ಲಿ ಬಸ್ ಟೈರ್ ಕಳಚಿ ಬಿದ್ದರೂ ಸಿಂಗಲ್ ಟೈರ್ ಮೇಲೆಯೇ ಬಸ್ಅನ್ನು ರಸ್ತೆಯ ಪಕ್ಕದಲ್ಲಿ ಚಾಲಕ ನಿಲುಗಡೆ ಮಾಡಿ ಸಂಭವನೀಯ ಅಪಘಾತ ತಪ್ಪಿಸಿದ್ದಾರೆ.