ಕರ್ನಾಟಕ

karnataka

By

Published : Nov 1, 2020, 2:18 PM IST

ETV Bharat / state

ಬಿಎಸ್​ವೈ ಅವರು 3 ವರ್ಷ ಸಿಎಂ ಆಗಿ ಮುಂದುವರೆಯುತ್ತಾರೆ : ಸಚಿವೆ ಶಶಿಕಲಾ ಜೊಲ್ಲೆ

ಯತ್ನಾಳ್​ ಅವರು ಪಕ್ಷದ ಹಿರಿಯ ಶಾಸಕರಾಗಿದ್ದಾರೆ, ಅವರ ಬಗ್ಗೆ ಗೌರವ ಇದೆ. ಅವರು ಹೀಗೆ ಮಾತಾಡಬಾರದು. ನಾನು ಇಂದು ಅವರನ್ನು ಭೇಟಿಯಾಗಿ ಏಕೆ ಎಂದು ಕೇಳುತ್ತೇನೆ..

Minister Shashikala Jolle
ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ

ವಿಜಯಪುರ: ಮುಖ್ಯಮಂತ್ರಿಗಳಾಗಿ ಯಡಿಯೂರಪ್ಪ ಉಳಿದ ಮೂರು ವರ್ಷದ ಅವಧಿ ಪೂರ್ಣಗೊಳಿಸುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ, ಶಾಸಕ ಬಸನಗೌಡ ಪಾಟೀಲ ಯತ್ನಾಳ್​ ಹೇಳಿಕೆಗೆ ತಿರುಗೇಟು ನೀಡಿದರು.

ಬಿಎಸ್​ವೈ ಅವರು 3 ವರ್ಷ ಸಿಎಂ ಆಗಿ ಮುಂದುವರೆಯುತ್ತಾರೆ : ಸಚಿವೆ ಶಶಿಕಲಾ ಜೊಲ್ಲೆ

ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಾಸಕ ಯತ್ನಾಳ್​ ಅಣ್ಣಾ ಅವರು ಯಾಕೆ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎನ್ನುವುದು ಗೊತ್ತಿಲ್ಲ. ಬಿಎಸ್​ವೈ ಅವರು 3 ವರ್ಷ ಸಿಎಂ ಆಗಿ ಮುಂದುವರೆಯುತ್ತಾರೆ.

ಇದರಲ್ಲಿ ಯಾವುದೇ ಅನುಮಾನ ಇಲ್ಲ. ಯತ್ನಾಳ್​ ಅವರು ಪಕ್ಷದ ಹಿರಿಯ ಶಾಸಕರಾಗಿದ್ದಾರೆ, ಅವರ ಬಗ್ಗೆ ಗೌರವ ಇದೆ. ಅವರು ಹೀಗೆ ಮಾತಾಡಬಾರದು. ನಾನು ಇಂದು ಅವರನ್ನು ಭೇಟಿಯಾಗಿ ಏಕೆ ಎಂದು ಕೇಳುತ್ತೇನೆ ಎಂದರು.

ನಾನು ಮಾತನಾಡಿದ್ದರಿಂದಲೇ ಅನುದಾನ ಬಿಡುಗಡೆ ಆಯ್ತು ಎಂದು ಯತ್ನಾಳ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವೆ, ಕೊರೊನಾದಿಂದ ಅನುದಾನ ಬಿಡುಗಡೆಯಲ್ಲಿ ಸಮಸ್ಯೆ ಆಯ್ತು. ಈಗ ಅನುದಾನ ಬಿಡುಗಡೆಯಾಗಿದೆ. ಅಭಿವೃದ್ಧಿ ಕಾರ್ಯಗಳು ಎಂದಿನಂತೆ ಮುಂದುವರೆಯಲಿವೆ ಎಂದರು.

ABOUT THE AUTHOR

...view details