ಕರ್ನಾಟಕ

karnataka

ETV Bharat / state

ಬಕ್ರೀದ್ ಪ್ರಯುಕ್ತ ಎಪಿಎಂಸಿ ಮಾರುಕಟ್ಟೆಯಲ್ಲಿ ಭರ್ಜರಿ ಮೇಕೆ ವ್ಯಾಪಾರ - ಬಕ್ರೀದ್ ಹಬ್ಬದ ಪ್ರಯುಕ್ತ ಎಪಿಎಂಸಿ ಮಾರುಕಟ್ಟೆಯಲ್ಲಿ ಭರ್ಜರಿ ಮೇಕೆ ವ್ಯಾಪಾರ

ಜವಾರಿ ಮೇಕೆ, ಸಿರೋಹಿ ಸೌಜತ್ ಸೇರಿದಂತೆ ವಿವಿಧ ತಳಿಯ ಮೇಕೆಗಳು ಸಂತೆಯಲ್ಲಿ ರಾರಾಜಿಸಿದವು‌. ಅದ್ರೆ ಹಬ್ಬದ ಪ್ರಯುಕ್ತವಾಗಿ ಎಲ್ಲ ಮೇಕೆಗಳು ದುಬಾರಿ ಬೆಲೆ ಮಾರಾಟವಾಗುತ್ತಿದ್ದ ಕಾರಣ ಮೇಕೆ ಖರೀದಿಗೆ ಬಂದ ಗ್ರಾಹಕರ ಜೇಬಿಗೆ ಕತ್ತರಿ ಬೀಳುವಂತಿತ್ತು.

Bijapur
ಬಕ್ರೀದ್ ಹಬ್ಬದ ಪ್ರಯುಕ್ತ ಎಪಿಎಂಸಿ ಮಾರುಕಟ್ಟೆಯಲ್ಲಿ ಭರ್ಜರಿ ಮೇಕೆ ವ್ಯಾಪಾರ

By

Published : Jul 30, 2020, 6:12 PM IST

ವಿಜಯಪುರ: ಬಕ್ರೀದ್ ಹಬ್ಬದ ಹಿನ್ನೆಲೆ ಇಲ್ಲಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಭರ್ಜರಿ ಮೇಕೆ ವ್ಯಾಪಾರ ನಡೆಯಿತು.

ಬಕ್ರೀದ್ ಹಬ್ಬದ ಪ್ರಯುಕ್ತ ಎಪಿಎಂಸಿ ಮಾರುಕಟ್ಟೆಯಲ್ಲಿ ಭರ್ಜರಿ ಮೇಕೆ ವ್ಯಾಪಾರ

ಬಕ್ರೀದ್ ಹಬ್ಬ ಸನಿಹವಿರುವ ಕಾರಣ ರವಿವಾರದ ಬದಲಾಗಿ ಇಂದು ಎಂಪಿಎಂಸಿ ಮಾರುಕಟ್ಟೆಯಲ್ಲಿ ಕುರಿ ವ್ಯಾಪಾರ ನಡೆಸಲಾಯಿತು. ಬಾಗಲಕೋಟೆ, ಬೆಳಗಾವಿ ಸೇರಿದಂತೆ ವಿಜಯಪುರ ಜಿಲ್ಲೆಯ ಎಲ್ಲ ತಾಲೂಕಿನ ರೈತರು ಮೇಕೆ ಹಾಗೂ ಕುರಿಗಳನ್ನು ಮಾರಾಟ ಮಾಡಲು ಇಲ್ಲಿನ ಮಾರುಕಟ್ಟೆಗೆ ಧಾವಿಸಿದ್ದರು.

ಜವಾರಿ ಮೇಕೆ, ಸಿರೋಹಿ ಸೌಜತ್ ಸೇರಿದಂತೆ ವಿವಿಧ ತಳಿಯ ಮೇಕೆಗಳು ಸಂತೆಯಲ್ಲಿ ರಾರಾಜಿಸಿದವು‌. ಆದರೆ ಹಬ್ಬದ ಪ್ರಯುಕ್ತವಾಗಿ ಎಲ್ಲ ಮೇಕೆಗಳು ದುಬಾರಿ ಬೆಲೆಗೆ ಮಾರಾಟವಾಗುತ್ತಿರುವ ಕಾರಣ ಮೇಕೆ ಖರೀದಿಗೆ ಬಂದ ಗ್ರಾಹಕರ ಜೇಬಿಗೆ ಕತ್ತರಿ ಬೀಳುವಂತಿತ್ತು. ‌ಅಲ್ಲದೆ ಕಳೆದ ವಾರ 10,000 ಕ್ಕೆ ಮಾರಾಟವಾಗುತ್ತಿದ್ದ ಮೇಕೆಗಳು ಇಂದಿನ ಮಾರುಕಟ್ಟೆಯಲ್ಲಿ 18,000 ಸಾವಿರದ ವರೆಗೂ ತಲುಪಿದ್ದು, ವ್ಯಾಪಾರಸ್ಥರಲ್ಲಿ ಸಂತಸ ಮೂಡಿಸಿದರೆ, ಇತ್ತ ಹಬ್ಬಕ್ಕೆ ಅನಿವಾರ್ಯ ಎಂದು ಕೆಲ ಗ್ರಾಹಕರು ದುಬಾರಿ ಬೆಲೆ ಮೇಕೆ, ಕುರಿಗಳನ್ನು ಖರೀದಿ ಮಾಡುವ ವಾತಾವರಣ ಸದ್ಯಕ್ಕೆ ಎಪಿಎಂಸಿ ಮಾರುಕಟ್ಟೆಯಲ್ಲಿ ನಿರ್ಮಾಣವಾಗಿತ್ತು.

‌ಇನ್ನೂ ಕೊರೊನಾ ಆತಂಕ ಹೆಚ್ಚಾಗಿದ್ದರೂ ಎಪಿಎಂಸಿ ಕುರಿ ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಇಲ್ಲದೆ ಕುರಿ ವ್ಯಾಪಾರದಲ್ಲಿ ಜನ ತೊಡಗಿದ್ದರಿಂದ ಕೋವಿಡ್- 19 ಭೀತಿಗೆ ಕಾರಣವಾಯಿತು.

ABOUT THE AUTHOR

...view details