ವಿಜಯಪುರ:ಹಾಡಹಗಲೇ ಆಟೋ ಚಾಲಕನನ್ನು ದುಷ್ಕರ್ಮಿಗಳು ಹತ್ಯೆಗೈದು ಪರಾರಿಯಾದ ಘಟನೆ ವಿಜಯಪುರದ ಐತಿಹಾಸಿಕ ಗೋಳಗುಮ್ಮಟದ ಎದುರು ಶನಿವಾರ ನಡೆದಿದೆ.
ನಗರದ ರೈಲ್ವೆ ಸ್ಟೇಷನ್ ನಿವಾಸಿಯಾಗಿರುವ ಆಟೋ ಚಾಲಕ ವೀರೇಶ ಶಿವಾನಂದ ಬಂಥನಾಳ( 22) ಕೊಲೆಯಾದ ವ್ಯಕ್ತಿ. ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ.