ಕರ್ನಾಟಕ

karnataka

ETV Bharat / state

ವಿಜಯಪುರ ಕೃಷಿ ಮೇಳಕ್ಕೆ ತೆರೆ... 'ಸಾವಯವ ಕೃಷಿಗೆ ಶ್ರೀಗಳ ಕರೆ'

ಕಳೆದ‌ ಮೂರು ದಿನಗಳ ಕಾಲ ವಿಜಯಪುರದ ಕೃಷಿ ಮಹಾವಿದ್ಯಾಲದಲ್ಲಿ ನಡೆದ ಕೃಷಿ ಮೇಳ ಸೋಮವಾರ ಅಂತಿಮವಾಗಿ ತೆರೆ ಕಂಡಿತು. ಮಹಾರಾಷ್ಟ್ರದ ಕಣ್ಣೇರಿ ಮಠದ ಪೀಠಾಧ್ಯಕ್ಷ ಅದೃಶ್ಯ ಕಾಡ ಸಿದ್ದೇಶ್ವರ ಮಹಾಸ್ವಾಮಿಗಳು ವಹಿಸಿಕೊಂಡು, 'ಸಾವಯುವ ಕೃಷಿ ಪದ್ಧಿತಿಗೆ ರೈತರು ಒತ್ತು ನೀಡದರೆ ಮಾತ್ರ ಆರೋಗ್ಯಕರ ಕೃಷಿ ಉತ್ಪಾದನೆ ಮಾಡಲು ಸಾಧ್ಯವಾಗಿತ್ತದೆ' ಎಂದು ರೈತರಿಗೆ ಕರೆ ನೀಡಿದರು.

agricultural-fair-at-vijayapura-agricultural-college
ವಿಜಯಪುರದ ಕೃಷಿ ಮಹಾವಿದ್ಯಾಲದಲ್ಲಿ ನಡೆದ ಕೃಷಿ ಮೇಳ ತೆರೆ

By

Published : Jan 7, 2020, 5:13 AM IST

ವಿಜಯಪುರ: ಕಳೆದ‌ ಮೂರು ದಿನಗಳ ಕಾಲ ವಿಜಯಪುರದ ಕೃಷಿ ಮಹಾವಿದ್ಯಾಲದಲ್ಲಿ ನಡೆದ ಕೃಷಿ ಮೇಳ ತೆರೆ ಕಂಡಿತು.

ವಿಜಯಪುರದ ಕೃಷಿ ಮಹಾವಿದ್ಯಾಲದಲ್ಲಿ ನಡೆದ ಕೃಷಿ ಮೇಳದಲ್ಲಿ ಮಾತನಾಡಿದ ಕಾಡ ಸಿದ್ದೇಶ್ವರ ಮಹಾಸ್ವಾಮೀಜಿ

ಸಮಾರೋಪ ಸಮಾರಂಭದ ಸಾನಿಧ್ಯವನ್ನು ಮಹಾರಾಷ್ಟ್ರದ ಕಣ್ಣೇರಿ ಮಠದ ಪೀಠಾಧ್ಯಕ್ಷ ಅದೃಶ್ಯ ಕಾಡ ಸಿದ್ದೇಶ್ವರ ಮಹಾಸ್ವಾಮೀಜಿ ವಹಿಸಿದ್ದರು. ಬಳಿಕ ಮಾತನಾಡಿದ ಅವರು, 'ಇಂದು ರೈತರು ರಾಸಾಯನಿಕ ಕೃಷಿ ಪದ್ಧತಿ ಅಳವಡಿಕೆಯತ್ತ ವಾಲುತ್ತಿರುವ ಕಾರಣ, ಮನುಷ್ಯನ‌ ಆರೋಗ್ಯಕ್ಕೆ ಹಾನಿಯುಂಟಾಗುತ್ತಿದೆ.‌ ಸಾವಯುವ ಕೃಷಿ ಪದ್ಧತಿಗೆ ಒತ್ತು ನೀಡದರೇ ಮಾತ್ರ ಆರೋಗ್ಯಕರ ಕೃಷಿ ಉತ್ಪಾದನೆ ಮಾಡಲು ಸಾಧ್ಯವಾಗಿತ್ತದೆ' ಎಂದು ರೈತರಿಗೆ ಸಲಹೆ ನೀಡಿದರು.

ಶಾಸಕ‌ ಶಿವಾನಂದ‌ ಪಾಟೀಲ ಮಾತನಾಡಿ, ಇಂದು ಕೃಷಿಕರು ಬೆಂಬಲ ಬೆಲೆ ಸಿಗದೆ ನಷ್ಟಕ್ಕೆ ತುತ್ತಾಗುತ್ತಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ಹೆಚ್ಚಾಗಿ ರೈತರು ವಾಣಿಜ್ಯ ಬೆಳೆ ಬೆಳೆಯುತ್ತಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬೆಂಬಲ ಬೆಲೆ ನೀಡಿದರೆ ರೈತರ ಬದಕು ಹಸನಾಗುತ್ತದೆ. ರೈತರು ಕೇವಲ ಪ್ರದರ್ಶನಕ್ಕೆ ಮಾತ್ರ ಬೆಳೆಯನ್ನು ಬೆಳೆಬಾರದು. ನೈಸರ್ಗಿಕ ಕೃಷಿ ಪದ್ಧತಿ ಅಳವಡಿಕೆಗೆ ಮುಂದಾಗುವಂತೆ ಕರೆ ನೀಡಿದರು.

ABOUT THE AUTHOR

...view details