ವಿಜಯಪುರ: ರಷ್ಯಾ ಹಾಗೂ ಉಕ್ರೇನ್ ನಡುವೆ ಯುದ್ಧ ನಡೆಯುತ್ತಿದ್ದು, ಈ ನಡುವೆ ಉಕ್ರೇನ್ನಲ್ಲಿ ಎಂಬಿಬಿಎಸ್ನ ಎರಡನೇ ಸೆಮಿಸ್ಟರ್ನಲ್ಲಿ ಓದುತ್ತಿದ್ದ ಸ್ನೇಹಾ ಪಾಟೀಲ್ ಎಂಬ ಯುವತಿ ಭಾರತಕ್ಕೆ ಬಂದು ತಲುಪಿದ್ದಾರೆ.
ಉಕ್ರೇನ್ನಿಂದ ತಾಯ್ನಾಡಿಗೆ ಮರಳಿದ ವಿಜಯಪುರದ ಸ್ನೇಹಾ ಪಾಟೀಲ್ - ಉಕ್ರೇನ್ನಿಂದ ತಾಯ್ನಾಡಿಗೆ ಬಂದ ವಿಜಯಪುರದ ಸ್ನೇಹಾ ಪಾಟೀಲ್
ಸ್ನೇಹಾ ಪಾಟೀಲ್ ಫೆಬ್ರವರಿ 22ಕ್ಕೆ ಉಕ್ರೇನ್ನಿಂದ ವಿಮಾನದ ಮೂಲಕ ಹೊರಟಿದ್ದರು. ಫೆಬ್ರವರಿ 23ಕ್ಕೆ ಬೆಂಗಳೂರಿಗೆ ಆಗಮಿಸಿ, ಅಲ್ಲಿಂದ ರಸ್ತೆ ಮೂಲಕ ಇಂದು ಸಂಜೆ ವಿಜಯಪುರಕ್ಕೆ ಆಗಮಿಸಿದ್ದಾರೆ.
ಉಕ್ರೇನ್ನಿಂದ ತಾಯ್ನಾಡಿಗೆ ಬಂದ ವಿಜಯಪುರದ ಸ್ನೇಹಾ ಪಾಟೀಲ್
ಇದನ್ನೂ ಓದಿ:ಉಕ್ರೇನ್ನಲ್ಲಿ ಸಿಲುಕಿದ ಬೀದರ್ನ ವಿದ್ಯಾರ್ಥಿಗಳು.. ಪೋಷಕರಲ್ಲಿ ಹೆಚ್ಚಿದ ಭೀತಿ
ವಿಜಯಪುರದ ಐಶ್ವರ್ಯ ನಗರ ನಿವಾಸಿ ಗುತ್ತಿಗೆದಾರ ರಮೇಶ ಪಾಟೀಲ್ ಅವರ ಪುತ್ರಿಯಾಗಿರುವ, ಸ್ನೇಹಾ ಪಾಟೀಲ್ ಫೆಬ್ರವರಿ 22ಕ್ಕೆ ಉಕ್ರೇನ್ನಿಂದ ವಿಮಾನದ ಮೂಲಕ ಹೊರಟಿದ್ದರು. ಫೆಬ್ರವರಿ 23ಕ್ಕೆ ಬೆಂಗಳೂರಿಗೆ ಆಗಮಿಸಿದ್ದರು. ಅಲ್ಲಿಂದ ರಸ್ತೆ ಮೂಲಕ ಇಂದು ಸಂಜೆ ವಿಜಯಪುರಕ್ಕೆ ಆಗಮಿಸಿದ್ದಾರೆ. ವಿದ್ಯಾರ್ಥಿನಿ ಸ್ನೇಹಾ ಪಾಟೀಲ್ ಸುರಕ್ಚಿತವಾಗಿ ವಿಜಯಪುರಕ್ಕೆ ಆಗಮಿಸಿದ್ದರಿಂದ ಮನೆಯಲ್ಲಿ ಸಡಗರ ಸಂಭ್ರಮ ಮನೆ ಮಾಡಿದೆ.