ರಾಯಚೂರು:ಜಿಲ್ಲೆಯಲ್ಲಿಂದು 104 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 11,021ಕ್ಕೆ ತಲುಪಿದೆ.
11,000 ಗಡಿ ದಾಟಿದ ರಾಯಚೂರು ಜಿಲ್ಲಾ ಕೊರೊನಾ ಸೋಂಕಿತರ ಸಂಖ್ಯೆ - ವಿಜಯಪುರ ಕೋವಿಡ್-19 ಪ್ರಕರಣಗಳ ಸಂಖ್ಯೆ
ಬಿಸಿಲೂರು ರಾಯಚೂರು ಜಿಲ್ಲೆಯಲ್ಲಿ ಇಂದು 104 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.
ವಿಜಯಪುರ ಕೊರೊನಾ ವರದಿ
ರಾಯಚೂರು ತಾಲೂಕಿಲ್ಲಿ 53, ಮಾನವಿ 14, ಲಿಂಗಸುಗೂರು 12, ಸಿಂಧನೂರು 14, ದೇವದುರ್ಗ 9 ಪ್ರಕರಣಗಳು ಇಂದು ವರದಿಯಾಗಿವೆ. ಈವರೆಗೆ ಪತ್ತೆಯಾಗಿರುವ ಸೋಂಕಿತರ ಪೈಕಿ 9,236 ಸೋಂಕಿತರು ಗುಣಮುಖರಾಗಿದ್ದಾರೆ. 1,652 ಪ್ರಕರಣಗಳು ಸಕ್ರಿಯವಾಗಿವೆ.
ಇದುವರೆಗೂ ಸೋಂಕಿನಿಂದ 133 ಜನ ಮೃತಪಟ್ಟಿದ್ದಾರೆ. ಸೋಂಕಿತರಿಗೆ ನಿಗದಿತ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸೋಂಕಿತರ ಸಂಪರ್ಕಗಳ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.