ಶಿರಸಿ: ಪ್ರಾಣಿಗಳಿಂದ ಬೆಳೆ ರಕ್ಷಿಸಲೆಂದು ತೋಟಕ್ಕೆ ಅಳವಡಿಸಿದ್ದ ವಿದ್ಯುತ್ ಬೇಲಿ ತಗುಲಿ ಯುವಕನೋರ್ವ ಮೃತಪಟ್ಟ ಘಟನೆ ಸಿದ್ದಾಪುರ ತಾಲೂಕಿನ ಕಲ್ಕಟ್ಟೆ ಬಳಿ ನಡೆದಿದೆ.
ವಿದ್ಯುತ್ ಬೇಲಿ ತಗುಲಿ ಯುವಕ ಸಾವು - kannada news
ವಿದ್ಯುತ್ ಬೇಲಿ ತಗುಲಿ ಯುವಕನೋರ್ವ ಮೃತಪಟ್ಟ ಘಟನೆ ಸಿದ್ದಾಪುರ ತಾಲೂಕಿನ ಕಲ್ಕಟ್ಟೆ ಬಳಿ ನಡೆದಿದೆ.
ವಿದ್ಯುತ್ ಬೇಲಿಗೆ ಬಲಿಯಾದ ಯುವಕ
ಸಿದ್ದಾಪುರದ ಕರಮನೆಯ ವಿಷ್ಣು ಮರಾಠಿ (30) ಸಾವನ್ನಪ್ಪಿದ ಯುವಕ. ಈತ ಮನೆಯ ಹತ್ತಿರ ಬೆಟ್ಟದಿಂದ ಸೊಪ್ಪನ್ನು ಕಡಿದು ತರುತ್ತಿರುವಾಗ ಅಕ್ರಮವಾಗಿ ಅಳವಡಿಸಿದ್ದಾರೆ ಎನ್ನಲಾದ ಕಲ್ಕಟ್ಟೆಯ ಸುಬ್ರಾಯ ಹೆಗಡೆ ಎಂಬವರ ಜಮೀನಿಗೆ ಹಾಕಲಾಗಿದ್ದ ವಿದ್ಯುತ್ ಬೇಲಿಗೆ ತಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸಿದ್ದಾಪುರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.